ಅಂತೂ ಮೀಸಲಾತಿ ಪ್ರಕಟ, ನಗರಸಭೆ, ಪಪಂ ಗದ್ದುಗೆಗಾಗಿ ಫೈಟ್

KannadaprabhaNewsNetwork |  
Published : Aug 06, 2024, 12:39 AM IST
5ಕೆಪಿಎಲ್25 ಕೊಪ್ಪಳ ನಗರಸಭೆ 5ಕೆಪಿಎಲ್26  ಭಾಗ್ಯನಗರ ಪಟ್ಟಣ ಪಂಚಾಯಿತಿ | Kannada Prabha

ಸಾರಾಂಶ

ಕೊಪ್ಪಳ ನಗರಸಭೆ ಮತ್ತು ಭಾಗ್ಯನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕೊನೆಗೂ ಮೀಸಲಾತಿ ಘೋಷಣೆಯಾಗಿದೆ.

ಕೊಪ್ಪಳ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾ. ಮಹಿಳೆಗೆ ಮೀಸಲು

ಭಾಗ್ಯನಗರ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕೊಪ್ಪಳ ನಗರಸಭೆ ಮತ್ತು ಭಾಗ್ಯನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕೊನೆಗೂ ಮೀಸಲಾತಿ ಘೋಷಣೆಯಾಗಿದೆ. ಹಲವಾರು ತಿಂಗಳು, ವರ್ಷದಿಂದ ಕಾಯುತ್ತಿದ್ದ ಮೀಸಲಾತಿಯನ್ನು ರಾಜ್ಯ ಸರ್ಕಾರ ಕೊನೆಗೂ ನಿಗದಿ ಮಾಡಿ, ಘೋಷಣೆ ಮಾಡಿದೆ.

ಕೊಪ್ಪಳ ನಗರಸಭೆ ಮತ್ತು ಭಾಗ್ಯನಗರ ಪಟ್ಟಣ ಪಂಚಾಯಿತಿಗೆ ಮೀಸಲಾತಿ ನಿಗದಿಯಾಗಿ ಗೆಜೆಟ್ ನೋಟಿಫಿಕೇಶನ್ ಆಗುತ್ತಿದ್ದಂತೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಗದ್ದುಗೆಗಾಗಿ ಒಳಗೊಳಗೆ ಭಾರಿ ಫೈಟ್ ಶುರುವಾಗಿದೆ. ಸದಸ್ಯರು ಶಾಸಕರು, ಸಂಸದರು ಮತ್ತು ಪಕ್ಷದ ನಾಯಕರು ದುಂಬಾಲು ಬಿದ್ದಿದ್ದಾರೆ. ಮೀಸಲಾತಿ ಘೋಷಣೆಯಾಗುತ್ತಿದ್ದಂತೆ ಕರೆ ಮಾಡಿ, ಈ ಬಾರಿಯಾದರೂ ನನ್ನನ್ನು ಮಾಡಿ ಎಂದು ಒತ್ತಡ ಹಾಕುತ್ತಿದ್ದಾರೆ.

ಕೊಪ್ಪಳ ನಗರಸಭೆ:

ಕೊಪ್ಪಳ ನಗರಸಭೆಗೆ ಈಗಾಗಲೇ ಮೊದಲ ಅವಧಿ ಮುಗಿದಿದ್ದು, ಕೇವಲ ಕೊನೆಯ ಅವಧಿ ಉಳಿದಿದೆ. ನಿಯಮಾನುಸಾರ ಕೇವಲ 20 ತಿಂಗಳು ಮಾತ್ರ ಇದ್ದು, ಮೂರನೇ ಅವಧಿ 30 ತಿಂಗಳು ಆಗಬೇಕಾಗಿರುವುದರಿಂದ ಈ ಕುರಿತು ಇನ್ನಷ್ಟೇ ಸ್ಪಷ್ಟತೆ ದೊರೆಯಬೇಕಾಗಿದೆ.

ಕೊಪ್ಪಳ ನಗರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ನಿಗದಿಯಾಗಿದೆ.

ಕೊಪ್ಪಳ ನಗರಸಭೆಯಲ್ಲಿ 31 ಸದಸ್ಯ ಬಲ ಇದ್ದು, ಇದರಲ್ಲಿ ಈಗ ಇಬ್ಬರು ರಾಜೀನಾಮೆ ನೀಡಿದ್ದರಿಂದ ಸದಸ್ಯ ಬಲ 29ಕ್ಕೆ ಕುಸಿದಿದೆ. ಇದರ ಜೊತೆಗೆ ಸಂಸದರು, ಶಾಸಕರು ಮತಗಳು ಸಹ ಇರುವುದರಿಂದ ಫಲಿತಾಂಶದ ಮೇಲೆ ಪರಿಣಾಮ ಬೀರಲಿವೆ.

ಕೊಪ್ಪಳ ನಗರಸಭೆಯ 29 ಸದಸ್ಯ ಬಲದಲ್ಲಿ ಕಾಂಗ್ರೆಸ್ 13 ಸದಸ್ಯ ಬಲ, ಬಿಜೆಪಿ 9, ಪಕ್ಷೇತರರು 4, ಜೆಡಿಎಸ್ 2 ಹಾಗೂ ವೇಲ್ಫೇರ್ ಪಾರ್ಟಿಯ ಓರ್ವ ಸದಸ್ಯರು ಇದ್ದಾರೆ. ಇದರ ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಸಂಸದರು ಮತ್ತು ಶಾಸಕರ ಮತ ಹಾಗೂ ಬಿಜೆಪಿಗೆ ವಿಧಾನ ಪರಿಷತ್ ಸದಸ್ಯರ ಮತದ ಬಲ ಇದೆ. ಇದರಲ್ಲಿ ಬಹುತೇಕ ಪಕ್ಷೇತರರು ಕಾಂಗ್ರೆಸ್ ಪಕ್ಷದಲ್ಲಿಯೇ ಗುರುತಿಸಿಕೊಂಡಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಶಾಸಕ, ಸಂಸದರ ಮತ ಸೇರಿ ನಿಚ್ಚಳ ಬಹುಮತ ಇದ್ದಂತೆ ಆಗುತ್ತದೆ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿಯೇ ಪೈಪೋಟಿ ಪ್ರಾರಂಭವಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸದಸ್ಯರಾದ ಮುತ್ತುರಾಜ ಕುಷ್ಟಗಿ, ಅಮ್ಜಾದ್ ಪಟೇಲ್, ಅಜಿಮುದ್ದೀನ್ ಅತ್ತಾರ ಹಾಗೂ ಅರುಣ ಅಪ್ಪುಶೆಟ್ಟಿ ರೇಸ್‌ನಲ್ಲಿದ್ದಾರೆ.

ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಇರುವುದರಿಂದ ಹಲವಾರು ಸದಸ್ಯರು ಪೈಪೋಟಿಯಲ್ಲಿ ಇದ್ದು, ಉಮಾ ಪಾಟೀಲ್ ಹಾಗೂ ಯಲ್ಲಮ್ಮ ಗಿಣಿಗೇರಿ ಹೆಸರು ಮುಂಚೂಣಿಯಲ್ಲಿವೆ.

ಭಾಗ್ಯನಗರ ಪಪಂ:

ಭಾಗ್ಯನಗರ ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ಇದೆ.

ಪಟ್ಟಣ ಪಂಚಾಯಿತಿಯಲ್ಲಿ 19 ಸದಸ್ಯ ಬಲ ಇದ್ದು, ಇದರಲ್ಲಿ ಬಿಜೆಪಿ 9, ಕಾಂಗ್ರೆಸ್ 8 ಹಾಗೂ ಇಬ್ಬರು ಪಕ್ಷೇತರ ಸದಸ್ಯರು ಇದ್ದಾರೆ. ಪಕ್ಷೇತರರಿಬ್ಬರಲ್ಲಿ ಬಿಜೆಪಿಯ ಪರವಾಗಿ ಒರ್ವರು, ಮತ್ತೋರ್ವರು ಕಾಂಗ್ರೆಸ್ ಪರವಾಗಿ ಇದ್ದಾರೆ.

ಆದರೆ, ಶಾಸಕ ಮತ್ತು ಸಂಸದರ ಮತಗಳು ಇರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಪ್ಲಸ್ ಆಗುತ್ತದೆ. ಆದರೂ ಇಲ್ಲಿ ಪಕ್ಷೇತರರು ಯಾರ ಕಡೆಗೆ ಒಲವು ತೋರುತ್ತಾರೆ ಎನ್ನುವುದರ ಮೇಲೆ ಅಂತಿಮ ನಿರ್ಣಯ ನಿಂತಿಕೊಂಡಿದೆ. ಹೀಗಾಗಿ, ಫೈಟ್ ಜೋರಾಗಿಯೇ ಇದ್ದು, ಯಾರು ಬೇಕಾದರೂ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...