ಯಲಬುರ್ಗಾ: ಹನ್ನೆರಡನೇ ಶತಮಾನದಲ್ಲಿ ಶರಣರ ಅಂತರಂಗದ ಅನುಭಾವದ ಮಾತುಗಳಾಗಿದ್ದವು. ಅನುಭಾವ ಎಂಬುದು ಆತ್ಮವಿದ್ಯೆ. ಅದು ತಾನು ಯಾರೆಂಬುದನ್ನು ತಿಳಿಯುವುದಾಗಿದೆ ಎಂದು ಚಿಂತಕ ಶ್ರೀಹರ್ಷಾನಂದ ಗುರೂಜಿ ಹೇಳಿದರು.
ಪ್ರತಿಯೊಬ್ಬರೂ ನಮ್ಮನ್ನು ನಾವು ಅರಿತುಕೊಳ್ಳುವ ವಿದ್ಯೆ ತಿಳಿಯಬೇಕು. ತನುವಿನಲ್ಲಿ ತೊಂದರೆಯಾದಾಗ,ಅನುಭಾವ ಪ್ರೇಮವುಂಟು ಮಾಡಿದರೆ ಹಸನ್ಮುಖಿಯಾಗಲು ಸಾಧ್ಯ. ಇಂದಿನ ದಿನಗಳಲ್ಲಿ ಮನುಷ್ಯ ಜೀವನದಲ್ಲಿ ಒತ್ತಡಕ್ಕೆ ಒಳಗಾಗುತ್ತಿದ್ದಾನೆ. ಜ್ಞಾನಿಗಳ ಮಾತುಗಳೇ ಅನುಭಾವದ ನುಡಿ.ಇಂದು ಎಲ್ಲರೂ ಸಂಪತ್ತಿನ ಕಡೆಗೆ ಗಮನ ಕೊಟ್ಟಿದ್ದರಿಂದ ಆತ್ಮ ನಾಶವಾಗುತ್ತಿದೆ. ಕೆಲ ಸಂದರ್ಭದಲ್ಲಿ ಕ್ರಿಯೆ ಇಲ್ಲದೇ ಆತ್ಮ ನಿಷ್ಕ್ರಿಯವಾಗುತ್ತಿದೆ.ಮೂಲಭೂತವಾಗಿ ಜ್ಞಾನ ಭಾವದ ಶುದ್ಧ ಮಾತು ಕೇಳಬೇಕು.ಮನುಷ್ಯ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಅನುಭಾವದ ಮಾತು ಆಲಿಸಬೇಕು. ಬದುಕನ್ನು ಪರಮಾನಂದವಾಗಿ ಅನುಭವಿಸಲು ಸತ್ಸಂಗ ಅತ್ಯಗತ್ಯ ಎಂದರು.
ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್, ಪ್ರವಚನಕಾರ ಮೌನೇಶ ಪತ್ತಾರ ಮಾತನಾಡಿದರು. ಶಿವಾನಂದ ಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಈ ಸಂದರ್ಭ ಗಣ್ಯರಾದ ಶರಣಯ್ಯ ಹಿರೇಮಠ, ಬಸಪ್ಪಜ್ಜ ಪಲ್ಲೇದ, ಲಕ್ಷ್ಮವ್ವ ಗುರಿಕಾರ, ಶರಣಪ್ಪ ಭೂತಲ್, ಮಳಿಯಪ್ಪಯ್ಯ, ಸಂಗಮೇಶ ಮನ್ನೆರಾಳ, ಯಂಕಪ್ಪ ಜುಟ್ಲರ, ನೀಲನಗೌಡ ಹೊಸ್ಮನಿ, ಶರಣೇಗೌಡ ಮಾಲಿಪಾಟೀಲ್, ಫಕೀರಗೌಡ ಮಾಲಿಪಾಟೀಲ್, ಶರಣಕುಮಾರ ಬಂಡಿ, ದುರುಗಪ್ಪ ಮಕ್ಕಳ್ಳಿ, ನೀಲಪ್ಪ ಹೊಸ್ಮನಿ, ರಾಮನಗೌಡ ಮಾಲಿಪಾಟೀಲ್, ಗುನ್ನೆಪ್ಪ ಚನ್ನದಾಸರ, ಮಂಜು ಕಲ್ಲೂರು, ಶರಣಗೌಡ ಪಾಟೀಲ್, ನಾಗಪ್ಪ ಪೂಜಾರ, ಹನುಮಗೌಡ, ನಿಂಗಪ್ಪ ಸೇರಿದಂತೆ ಮತ್ತಿತರರು ಇದ್ದರು.