ಸುಂಕಾತೊಣ್ಣೂರು ಗ್ರಾಪಂ ಅಧ್ಯಕ್ಷರಾಗಿ ಅನುವಾಳು ರಾಜಮ್ಮ ಮಹೇಶ್ ಆಯ್ಕೆ

KannadaprabhaNewsNetwork |  
Published : Jul 31, 2025, 12:45 AM IST
30ಕೆಎಂಎನ್ ಡಿ17 | Kannada Prabha

ಸಾರಾಂಶ

ಗ್ರಾಪಂನಲ್ಲಿ ಜೆಡಿಎಸ್, ಕಾಂಗ್ರೆಸ್, ರೈತಸಂಘ ಹಾಗೂ ಬಿಜೆಪಿ ಬೆಂಬಲಿತ ಒಟ್ಟು 20 ಮಂದಿ ಸದಸ್ಯರಿದ್ದರು. ಹಿಂದಿನ ಅಧ್ಯಕ್ಷೆ ಮಮತಾರನ್ನು ಅವಿಶ್ವಾಸ ಗೊತ್ತುವಳಿ ಮಂಡಿಸಿ ಪದಚ್ಯುತಗೊಳಿಸಿದ ನಂತರ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಹಾಲಿ ಉಪಾಧ್ಯಕ್ಷ ಎಸ್.ಪಿ.ಹೇಮಂತ್ ಕುಮಾರ್ ಪ್ರಭಾರ ಅಧ್ಯಕ್ಷರಾಗಿ ಮುಂದುವರೆದಿದ್ದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಸುಂಕಾತೊಣ್ಣೂರು ಗ್ರಾಪಂ ನೂತನ ಅಧ್ಯಕ್ಷರಾಗಿ ಆನುವಾಳು ಗ್ರಾಮದ ರಾಜಮ್ಮ ಮಹೇಶ್ ಅವಿರೋಧವಾಗಿ ಆಯ್ಕೆಯಾದರು.

ಗ್ರಾಪಂನಲ್ಲಿ ಜೆಡಿಎಸ್, ಕಾಂಗ್ರೆಸ್, ರೈತಸಂಘ ಹಾಗೂ ಬಿಜೆಪಿ ಬೆಂಬಲಿತ ಒಟ್ಟು 20 ಮಂದಿ ಸದಸ್ಯರಿದ್ದರು. ಹಿಂದಿನ ಅಧ್ಯಕ್ಷೆ ಮಮತಾರನ್ನು ಅವಿಶ್ವಾಸ ಗೊತ್ತುವಳಿ ಮಂಡಿಸಿ ಪದಚ್ಯುತಗೊಳಿಸಿದ ನಂತರ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಹಾಲಿ ಉಪಾಧ್ಯಕ್ಷ ಎಸ್.ಪಿ.ಹೇಮಂತ್ ಕುಮಾರ್ ಪ್ರಭಾರ ಅಧ್ಯಕ್ಷರಾಗಿ ಮುಂದುವರೆದಿದ್ದರು.

ಅಧ್ಯಕ್ಷ ಸ್ಥಾನಕ್ಕೆ ರಾಜಮ್ಮ ಮಹೇಶ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿ ಕೆ.ಎನ್.ಪ್ರಕಾಶ್ ರಾಜಮ್ಮರ ಅವಿರೋಧ ಆಯ್ಕೆ ಪ್ರಕಟಿಸಿದರು. ಈ ವೇಳೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.

ನೂತನ ಅಧ್ಯಕ್ಷೆ ರಾಜಮ್ಮ ಮಹೇಶ್ ಮಾತನಾಡಿ, ಎಲ್ಲಾ ಸದಸ್ಯರ ಸಹಕಾರದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅವರ ಮಾರ್ಗದರ್ಶನದೊಂದಿಗೆ ಗ್ರಾಪಂ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಈ ವೇಳೆ ಗ್ರಾಪಂ ಸದಸ್ಯ ಹೇಮಂತ್ ಕುಮಾರ್, ಜೆಡಿಎಸ್ ಮುಖಂಡ ಪಾರ್ಥಸಾರಥಿ ಹಾಗೂ ಛಲವಾದಿ ಸುರೇಶ್ ಆನುವಾಳು ಮಾತನಾಡಿದರು. ನೂತನ ಅಧ್ಯಕ್ಷರನ್ನು ಗ್ರಾಪಂ ಉಪಾಧ್ಯಕ್ಷ ಎಸ್.ಪಿ.ಹೇಮಂತ್ ಕುಮಾರ್, ಸದಸ್ಯರಾದ ಎಸ್.ಕೆ.ಸುರೇಶ್, ಎಸ್.ಎನ್.ಶೀಲಾ, ಭಾಗ್ಯಮ್ಮ, ಕನ್ಯಮ್ಮ, ಜೆ.ದೇವೇಗೌಡ, ರಾಧಮಣಿ, ಕೆ.ಎಂ.ಪುಟ್ಟಸ್ವಾಮಿಗೌಡ, ಜಯಶೀಲ, ಕೆ.ಸಿ.ಕೇಶವಮೂರ್ತಿ, ಶಿವಕುಮಾರ್, ಹೇಮಂತ್ ಕುಮಾರ್ (ಸತೀಶ್), ಪುಟ್ಟಮ್ಮ, ನಳಿನಾಕ್ಷಿ, ಸರೋಜಮ್ಮ, ಕೆ.ಹೇಮಂತ್ ಕುಮಾರ್, ಸಿ.ನಾಗರಾಜು, ಪಿಡಿಒ ಮಹದೇವು, ಪಂಚಾಯಿತಿ ಸಿಬ್ಬಂದಿ ವರ್ಗದವರು, ಜೆಡಿಎಸ್, ರೈತಸಂಘ, ಕಾಂಗ್ರೆಸ್, ಬಿಜೆಪಿ ಮುಖಂಡರು ಹಾಗೂ ಆನುವಾಳು ಗ್ರಾಮಸ್ಥರು ಹಾಜರಿದ್ದರು.

ಜಿ.ಸಿ.ಚೇತನಾಗೆ ಪಿಎಚ್‌.ಡಿ ಪದವಿ

ಮಂಡ್ಯ:

ತಾಲೂಕಿನ ಬಿ.ಗೌಡಗೆರೆ ಗ್ರಾಮದ ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಚನ್ನಯ್ಯ ಹಾಗೂ ನಿರ್ಮಲ ದಂಪತಿಯ ಪುತ್ರಿ ಜಿ.ಸಿ ಚೇತನಾ ಅವರಿಗೆ ಪಿಎಚ್‌.ಡಿ ಪದವಿ ದೊರಕಿದೆ. ಮೆಕ್ಯಾನಿಕಲ್ ಎಂಜಿನಿಯರ್ ಪದವೀಧರರಾದ ಅವರು ಡಾ.ಎಸ್‌.ಎಚ್‌.ಮಂಜುನಾಥ್, ಡಾ.ಕೆ.ಬಿ.ಗಿರೀಶ್ ಅವರ ಮಾರ್ಗದರ್ಶನದಲ್ಲಿ ‘ಟ್ರಿಬೋಲಾಜಿಕಲ್ ಪ್ರಾಪರ್ಟೀಸ್ ಆಫ್ ಅಲ್ಯೂಮೀನಿಯಂ ೩೫೬.೧ ನ್ಯಾನೋ ಮೆಟಲ್ ಮ್ಯಾಟ್ರಿಕ್ಸ್ ಕಾಂಪೋಸೈಟ್ಸ್ ಯೂಸಿಂಗ್ ಬಯೋಲೂಬ್ರಿಕ್ಯಾಂಟ್ಸ್’ ವಿಷಯ ಕುರಿತು ಸಾದರಪಡಿಸಿದ ಪ್ರಬಂಧಕ್ಕೆ ನಾಗಮಂಗಲ ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ವಿವಿಯಲ್ಲಿ ನೆಡೆದ ಘಟಿಕೋತ್ಸ ವದಲ್ಲಿ ಪಿಎಚ್‌.ಡಿ ಪದವಿ ಪ್ರದಾನ ಮಾಡಲಾಯಿತು. ಆದಿಚುಂಚನಗಿರಿ ಮಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಇಸ್ರೋ ಮಾಜಿ ಅಧ್ಯಕ್ಷ ಸೋಮನಾಥ್ ಹಾಗೂ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ