ಕ್ಷಯರೋಗದ ಕುರಿತು ಉದಾಸೀನ ಹಾನಿಕಾರಕ

KannadaprabhaNewsNetwork | Published : Dec 8, 2024 1:15 AM

ಸಾರಾಂಶ

ಶಿವಮೊಗ್ಗ: ಕ್ಷಯರೋಗದ ಕುರಿತು ಉದಾಸೀನ ಮಾಡಿದಲ್ಲಿ ಕೇವಲ ರೋಗಿಗೆ ಮಾತ್ರವಲ್ಲ, ಅವರ ಕುಟುಂಬ ಮತ್ತು ಸಮಾಜಕ್ಕೆ ಹಾನಿ. ಆದ್ದರಿಂದ ಶೀಘ್ರ ಪತ್ತೆ ಮತ್ತು ಚಿಕಿತ್ಸೆ ಪಡೆದುಕೊಳ್ಳುವುದು ಅತಿ ಮುಖ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಟರಾಜ್ ಹೇಳಿದರು.

ಶಿವಮೊಗ್ಗ: ಕ್ಷಯರೋಗದ ಕುರಿತು ಉದಾಸೀನ ಮಾಡಿದಲ್ಲಿ ಕೇವಲ ರೋಗಿಗೆ ಮಾತ್ರವಲ್ಲ, ಅವರ ಕುಟುಂಬ ಮತ್ತು ಸಮಾಜಕ್ಕೆ ಹಾನಿ. ಆದ್ದರಿಂದ ಶೀಘ್ರ ಪತ್ತೆ ಮತ್ತು ಚಿಕಿತ್ಸೆ ಪಡೆದುಕೊಳ್ಳುವುದು ಅತಿ ಮುಖ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಟರಾಜ್ ಹೇಳಿದರು.

ಇಲ್ಲಿನ ತುಂಗಾ ನಗರ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರದ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಕ್ಷಯರೋಗ ಮುಕ್ತ 100 ದಿನಗಳ ಅಭಿಯಾನದ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ಷಯರೋಗವನ್ನು ಉದಾಸೀನ ಮಾಡಿದರೆ ಸಮಾಜಕ್ಕೇ ಮಾರಕವಾಗುತ್ತದೆ. ಆದ್ದರಿಂದ ಲಕ್ಷಣಗಳು ಕಂಡುಬಂದ ತಕ್ಷಣೆ ಪರೀಕ್ಷೆ ಮೂಲಕ ಪತ್ತೆ ಹಚ್ಚಿ, ಚಿಕಿತ್ಸೆಗೆ ಒಳಪಡಬೇಕು. ಎಲ್ಲರೂ ಕೂಡ ಕ್ಷಯ ರೋಗದ ಲಕ್ಷಣಗಳ ಬಗ್ಗೆ ತಿಳಿದುಕೊಂಡು ಎಚ್ಚರಿಕೆ ವಹಿಸಬೇಕು. ಒಂದು ವಾರಕ್ಕೂ ಹೆಚ್ಚಿನ ಕಾಲ ಜ್ವರ, ಶೀತ, ಕೆಮ್ಮು ಇದ್ದರೆ ಉದಾಸೀನ ಮಾಡಬಾರದು ಎಂದರು.

ಇಂದಿನಿಂದ 100 ದಿನಗಳ ಕಾಲ ಕ್ಷಯರೋಗದ ಕುರಿತು ಜಾಗೃತಿ ಮೂಡಿಸುವ ಈ ಅಭಿಯಾನ ನಡೆಯಲಿದೆ. ಸಾರ್ವಜನಿಕರು ರೋಗಿಗಳಿಗೆ, ಅವರ ಕುಟುಂಬಕ್ಕೆ ಸಹಾಯ ಮಾಡಿ ಕ್ಷಯ ನಿವಾರಣೆಗೆ ಪಣ ತೊಡಬೇಕು. ಸಮಾಜವನ್ನು ಟಿಬಿ ಮುಕ್ತಗೊಳಿಸಬೇಕು ಎಂದು ಕರೆ ನೀಡಿದರು.

ಡಬ್ಲ್ಯೂಎಚ್‌ಒ ಪ್ರತಿನಿಧಿ ಡಾ.ರಾಜೀವ್ ಮಾತನಾಡಿ, ಹೈರಿಸ್ಕ್ ಗುಂಪುಗಳನ್ನು ಭೇಟಿ ಮಾಡಿ, ಸಂಶಯ ಇರುವ ವ್ಯಕ್ತಿಗಳಿಗೆ ಸಿಬಿ ನ್ಯಾಟ್, ಕಫ ಪರೀಕ್ಷೆ ಮಾಡಿ, ಕ್ಷಯ ರೋಗ ಪತ್ತೆಯಾದಲ್ಲಿ ಚಿಕಿತ್ಸೆ ಕೊಡಿಸುವುದು ಮತ್ತು ಸಿವೈಟಿಬಿ ಪರೀಕ್ಷೆ ಮುಖಾಂತರ ಸೋಂಕು ಇದೆಯಾ ಎಂದು ಪತ್ತೆ ಮಾಡಿ ನಿಯಂತ್ರಣ ಮಾಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಪತ್ತೆ ಮತ್ತು ಚಿಕಿತ್ಸೆ ಅತಿ ಮುಖ್ಯವಾಗಿದ್ದು, ಎಲ್ಲರೂ ಸಹಕರಿಸಬೇಕು ಎಂದರು.

ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ನಾಗೇಶ್.ಬಿ.ಪಿ. ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಸರ್ಕಾರವು ಕ್ಷಯರೋಗ ಮುಕ್ತ ಭಾರತವನ್ನಾಗಿ ಮಾಡಲು ಗುರಿ ಹೊಂದಿದ್ದು, ಇದರ ಅಂಗವಾಗಿ ಡಿ.7 ರಿಂದ 2025 ರ ಮಾರ್ಚ್ 24 ರವರೆಗೆ 100 ದಿನಗಳ ಕಾಲ ಕ್ಷಯರೋಗ ಕುರಿತು ಅರಿವು ಮೂಡಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರೋಗಿಗಳ ಶೀಘ್ರ ಪತ್ತೆ ಹಚ್ಚುವುದು, ಗುಣಪಡಿಸುವುದು ಹಾಗೂ ಸಾರ್ವಜನಿಕರಲ್ಲಿ ರೋಗ ಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸುವುದು, ಶೇ.80 ರಷ್ಟು ಖಾಯಿಲೆ ಹರಡುವುದನ್ನು ತಡೆಗಟ್ಟುವುದು, ಮರಣ ಪ್ರಮಾಣವನ್ನು ಶೇ.90 ರಷ್ಟು ಕಡಿಮೆ ಮಾಡುವುದು, ರೋಗಿಗಳ ಟಿ.ಬಿ.ಪರೀಕ್ಷೆ ಮತ್ತು ಚಿಕಿತ್ಸೆಗೆ ತಗಲುವ ವೆಚ್ಚವನ್ನು ಶೂನ್ಯ ಮಾಡುವುದು ಅಭಿಯಾನದ ಉದ್ದೇಶವಾಗಿದೆ ಎಂದು ತಿಳಿಸಿದರು.

ಕ್ಷಯರೋಗವು ಮೈಕೋಬ್ಯಾಕ್ಟೀರಿಯಂ ಟ್ಯುಬರ್‌ಕ್ಯುಲೋಸಿಸ್ ಎಂಬ ಸೂಕ್ಷ್ಮ ರೋಗಾಣುವಿನಿಂದ ಬರುತ್ತದೆ. ರೋಗಿಯು ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ತುಂತುರು ರೋಗಾಣುಗಳು ಗಾಳಿಯ ಮೂಲಕ ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶ ಸೇರಿ ಸೋಂಕು ಉಂಟು ಮಾಡುತ್ತದೆ ಎಂದರು.

ಜಿಲ್ಲೆಯಲ್ಲಿ 140 ಪ್ರಕರಣಗಳಿದ್ದು, ಶೇ.92 ರೋಗಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಗುಣ ಹೊಂದುವವರ ಸಂಖ್ಯೆ ಶೇ.89 ರಷ್ಟಿದ್ದು, ಮರಣ ಹೊಂದಿರುವ ಸಂಖ್ಯೆ ಶೇ.6 ರಷ್ಟಿದೆ ಎಂದರು.

ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ಕ್ಷಯರೋಗಿಗಳಿಗೆ ಸರ್ಕಾರದಿಂದ ಪ್ರತಿ ತಿಂಗಳು 500 ರು. ಪೌಷ್ಟಿಕ ಆಹಾರಕ್ಕಾಗಿ ಡಿಬಿಟಿ ಮುಖಾಂತರ ನೀಡಲಾಗುತ್ತಿದೆ. ಅಲ್ಲದೇ ನಿಕ್ಷಯ್ ಮಿತ್ರರಿಂದ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. 2023ರಲ್ಲಿ ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ನೀಡುವ ಕಂಚಿನ ಪದಕ ದೊರೆತಿದೆ. ಈ ಜಿಲ್ಲೆಯಲ್ಲಿ 71 ಗ್ರಾಪಂಗಳನ್ನು ಕ್ಷಯ ಮುಕ್ತ ಗ್ರಾಮ ಪಂಚಾಯಿತಿಗಾಗಿ ಆಯ್ಕೆ ಮಾಡಿದ್ದು, ಚಟುವಟಿಕೆಗಳು ಚಾಲ್ತಿಯಲ್ಲಿದೆ ಎಂದು ತಿಳಿಸಿದರು.

ಇದೇ ವೇಳೆ ಟಿಬಿ ಮುಕ್ತ ಭಾರತ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕ್ಷಯ ರೋಗಿಗಳಿಗೆ ಉಚಿತ ಪೌಷ್ಟಿಕ ಆಹಾರ ನೀಡಿ ಸಹಕರಿಸಿದ ನಿಕ್ಷಯ್ ಮಿತ್ರರಾದ ರಾಘವೇಂದ್ರ ಭಟ್, ಕಿರಣ್, ರಮೇಶ್ ಅವರನ್ನು ಸನ್ಮಾನಿಸಲಾಯಿತು.

ಟಿಬಿ ರೋಗದಿಂದ ಮುಕ್ತರಾಗಿ ಇತರೆ ರೋಗಿಗಳು ಮುಕ್ತರಾಗಲು ಉತ್ತೇಜಿಸುತ್ತಿರುವ ಪ್ರಶಾಂತ್ ರವರಿಗೆ ಟಿಬಿ ಚಾಂಪಿಯನ್ ಎಂದು ಸನ್ಮಾನಿಸಲಾಯಿತು.

ಆರ್‌ಸಿಎಚ್‌ಒ ಡಾ.ಮಲ್ಲಪ್ಪ, ಡಿಎಸ್‌ಓ ಡಾ.ನಾಗರಾಜ್ ನಾಯ್ಕ್, ಎನ್‌ವಿಬಿಡಿಸಿ ಅಧಿಕಾರಿ ಡಾ.ಗುಡುದಪ್ಪ ಕುಸಬಿ, ಡಿಎಲ್‌ಓ ಡಾ.ಕಿರಣ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಲಿಂಗರಾಜ್, ಟಿಎಚ್‌ಒ ಡಾ.ಚಂದ್ರಶೇಖರ್, ತುಂಗಾ ನಗರ ಆರೋಗ್ಯ ಕೇಂದ್ರದ

Share this article