ಕನ್ನಡಪ್ರಭ ವಾರ್ತೆ ಉಡುಪಿ ಲೋಕಕಲ್ಯಾಣಕ್ಕಾಗಿ ಅಮೆರಿಕಾದ ಪ್ರಥಮ ದೇವಾಲಯವಾದ ಶ್ರೀ ವೆಂಕಟಕೃಷ್ಣ ಕ್ಷೇತ್ರದಲ್ಲಿ 9 ದಿನಗಳ ಕಾಲ ನಡೆಯಲಿರುವ ಸಂಹಿತಾ ಯಾಗದಲ್ಲಿ ಭಕ್ತಜನರ ಅಪೇಕ್ಷೆಯಂತೆ ಭಾಗಿಯಾಗಿ ಹರಸಲು ಆಗಮಿಸಿದ ಪೂಜ್ಯ ಪುತ್ತಿಗೆ ಶ್ರೀಪಾದರ ಸಮಕ್ಷಮದಲ್ಲಿ ನಾಗದೋಷ ಪರಿಹಾರಕ್ಕಾಗಿ ನಾಗ ತನು ತರ್ಪಣ ಕಾರ್ಯಕ್ರಮ ಗುರುವಾರ ವೈಭವದಿಂದ ನಡೆಯಿತು. ಉಡುಪಿಯ ವೈದಿಕ ವಿದ್ವಾನ್ ಶ್ರೀಕಾಂತ್ ಸಾಮಗ ಅವರು ವೈದಿಕ ವೃಂದದವರೊಡನೆ ಈ ಕಾರ್ಯಕ್ರಮವನ್ನು ಸಾಂಗವಾಗಿ ನಡೆಸಿಕೊಟ್ಟರು. ಅಮೇರಿಕಾದಲ್ಲಿರುವ ಭಾರತೀಯ ಭಕ್ತಜನತೆ ಸಂಭ್ರಮದಿಂದ ಇದರಲ್ಲಿ ಪಾಲ್ಗೊಂಡರು . ಸಂಹಿತಾ ಯಾಗದ ಆರನೆಯ ದಿನವಾದ ಗುರುವಾರ ಯಜುಸ್ಸಂಹಿತಾಯಾಗ ಮತ್ತು ಶ್ರೀಸೂಕ್ತ, ಪುರುಷ ಸೂಕ್ತ ಯಾಗಗಳು ನಡೆದವು.