ಕನ್ನಡಪ್ರಭ ವಾರ್ತೆ ಬೀದರ್
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮುದಾಯವನ್ನು ಸಂಘಟಿಸುವುದು, ಅಗತ್ಯವಿರುವ ಕುಟುಂಬಗಳನ್ನು ಗುರುತಿಸುವುದು ಹಾಗೂ ಅರ್ಹರಿಗೆ ಸೂಕ್ತ ನೆರವು ಕಲ್ಪಿಸುವ ನಿಟ್ಟಿನಲ್ಲಿ ನಿಖರವಾದ ಅಂಕಿ ಅಂಶಗಳ ಸಂಗ್ರಹ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.
ಸಮುದಾಯದ ಪ್ರತಿಯೊಬ್ಬರೂ ಮೊಬೈಲ್ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡು ಅಗತ್ಯ ಮಾಹಿತಿಯನ್ನು ನೀಡಬೇಕು. ಯಾವುದೇ ಕುಟುಂಬವೂ ಸಮೀಕ್ಷೆ ಯಿಂದ ಹೊರಗುಳಿಯದಂತೆ ಸಹಕರಿಸುವ ಮೂಲಕ ಈ ಮಹತ್ವದ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮುಖಂಡರು ಮಾತನಾಡಿ ಮನವಿ ಮಾಡಿದರು.ಕ್ಷತ್ರಿಯ ಮರಾಠಾ ಪರಿಷತ್ ಅಧ್ಯಕ್ಷ ದಿಗಂಬರರಾವ್ ಮಾನಕಾರಿ ಮಾತನಾಡಿ, ಸಮುದಾಯದ ಜನಸಂಖ್ಯೆಯನ್ನು ಕೆಲವೆಡೆ ಕಡಿಮೆ ಪ್ರಮಾಣದಲ್ಲಿ ತೋರಿಸ ಲಾಗುತ್ತಿದೆ. ಆದ್ದರಿಂದ ರಾಜ್ಯದಲ್ಲಿರುವ ಮರಾಠಾ ಸಮುದಾಯದ ನೈಜ ಜನಸಂಖ್ಯೆ ಹಾಗೂ ಸಾಮಾಜಿಕ ಆರ್ಥಿಕ ಸಾಮರ್ಥ್ಯವನ್ನು ದಾಖಲಿಸುವುದು ಸಮೀಕ್ಷೆ ಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಸಮಾಜದ ಹಿರಿಯ ಮುಖಂಡರಾದ ಜನಾರ್ಧನ ಬಿರಾದಾರ, ಕಿಶನರಾವ್ ಪಾಟೀಲ್ ಇಂಚೂರಕರ್, ವಕೀಲರಾದ ನಾರಾಯಣ ಗಣೇಶ, ಸತೀಶ ಮೂಳೆ, ತಾತ್ಯಾರಾವ್ ಪಾಟೀಲ್, ರಾವಸಾಹೇಬ ಬಿರಾದಾರ, ಆನೀಲ ಕಾಳೆ, ಸಮಾಜದ ಸಂಯೋಜಕರಾದ ಪ್ರದೀಪ ಬಿರಾದಾರ, ಅಮರ ಜಾಧವ, ಗೋರಖ ಶ್ರೀಮಾಳೆ, ವಿದ್ಯಾವಾನ ಪಾಟೀಲ್ ಹಾಗೂ ಬಾಲಾಜಿ ವಾಡಿಕರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
---ಬಾಕ್ಸ್----
ಪ್ರಾತಿನಿಧ್ಯಕ್ಕೆ ಅವಕಾಶ: ಧರ್ಮಗುರು
ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳು ಸಮುದಾಯದ ಜನರಿಗೆ ಎಷ್ಟರ ಮಟ್ಟಿಗೆ ತಲುಪಿವೆ ಎಂಬುದನ್ನು ತಿಳಿಯಲು ಬಿಪಿಎಲ್, ಎಪಿಎಲ್ ಸೇರಿದಂತೆ ಇತರ ವಿವರಗಳನ್ನು ಸಹ ದಾಖಲಿಸಲಾಗುತ್ತದೆ. ಈ ಅಂಕಿ ಅಂಶಗಳು ಭವಿಷ್ಯದಲ್ಲಿ ಸಮುದಾಯದ ಸಾಮಾಜಿಕ ನ್ಯಾಯ, ಮೀಸಲಾತಿ ಹಾಗೂ ರಾಜಕೀಯ ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ಬೇಡಿಕೆಗಳಿಗೆ ಆಧಾರವಾಗಲಿವೆ ಎಂದು ಕ್ಷತ್ರಿಯ ಮರಾಠ ಸಮಾಜದ ಧರ್ಮಗುರು ದಾದಾ ಮಹಾರಾಜ ನಗರಕರ್ ಹೇಳಿದರು.