ಕನ್ನಡಪ್ರಭ ವಾರ್ತೆ ಬೀದರ್
ನಗರದ ಡಾ.ಎಸ್.ಎಂ.ಪಂಡಿತ್ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಸೋಮವಾರ ಕರ್ನಾಟಕ ಲಲಿತ ಕಲಾ ಅಕಾಡೆಮಿ, ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗಿರಿಜನ ಉಪಯೋಜನೆಯಡಿ ಆಯೋಜಿಸಿರುವ ಜಲವರ್ಣ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಚಿತ್ರಕಲೆ ಕೇವಲ ಬಣ್ಣಗಳನ್ನು ಕಾಗದದ ಮೇಲೆ ಮೂಡಿಸುವ ಕಲೆಯಲ್ಲ, ಅದು ಕಲಾವಿದನ ಕಲ್ಪನೆ, ಭಾವನೆ ಮತ್ತು ಸುತ್ತಲಿನ ಸಮಾಜವನ್ನು ನೋಡುವ ದೃಷ್ಟಿ ಕೋನವನ್ನು ಪ್ರತಿಬಿಂಬಿಸುತ್ತದೆ. ಜಲವರ್ಣದಂತಹ ಸೂಕ್ಷ್ಮ ಕಲಾ ಪ್ರಕಾರದಲ್ಲಿ ಉತ್ತಮ ತರಬೇತಿ ಪಡೆದರೆ ಕಲಾವಿದರು ತಮ್ಮದೇ ಆದ ಕಲಾಶೈಲಿಯನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯ ಸಂಚಾಲಕರಾದ ಬಸವರಾಜ ಎಲ್. ಜಾನೆ ಪ್ರಾಸ್ತಾವಿಕ ಮಾತನಾಡಿ, ರಾಜ್ಯದ ವಿವಿಧ ಭಾಗಗಳ ಪ್ರತಿಭಾವಂತ ಕಲಾವಿದರನ್ನು ಒಂದೆಡೆ ಸೇರಿಸಿ ಅವರ ಕಲಾ ಕೌಶಲ ವೃದ್ಧಿಸುವುದು ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ ಎಂದರು.
ಸೆ.21ರಿಂದ 24ರವರೆಗೆ ನಡೆಯಲಿರುವ ಕಾರ್ಯಾಗಾರದಲ್ಲಿ ಹಾವೇರಿ, ಗದಗ, ಬೀದರ್, ಮೈಸೂರು, ಪಾವಗಡ, ಗುಳೇದಗುಡ್ಡ, ಇಳಕಲ್, ಧಾರವಾಡ, ದೊಡ್ಡಮಾಲೂರು, ಯಾದಗಿರಿ ಹಾಗೂ ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳ ಅನೇಕ ಕಲಾವಿದರು ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿಜಯಶ್ರೀ ಸ್ವಾಗತಿಸಿ ಪೀಟರ್ ನಿರೂಪಿಸಿದರೆ ಸುಧಾರಾಣಿ ವಂದಿಸಿದರು.