ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಈ ಕುರಿತು ಮಂಗಳವಾರ ಪ್ರಕಟಣೆ ನೀಡಿದ ಅವರು, ಈಗಾಗಲೇ ಅಪ್ಪಾಜಿ ನಾಡಗೌಡರು ಕಾಂಗ್ರೆಸ್ ನಿಷ್ಠಾವಂತ ಜವಾಬ್ದಾರಿಯುತ ವ್ಯಕ್ತಿಯಾಗಿದ್ದಾರೆ. ಜತೆಗೆ ಅವರ ಹಿರಿತನದ ಅನುಭವಕ್ಕೆ ಯಾವಾಗಲೋ ಮಂತ್ರಿಯಾನ್ನಾಗಿ ಮಾಡಬೇಕಿತ್ತು. ಸದ್ಯ ಕೆಎಸ್.ಡಿ.ಎಲ್. ನಿಗಮದ ಅಧ್ಯಕ್ಷರಾಗಿ ನಷ್ಟಲ್ಲಿದಲ್ಲಿದ್ದ ನಿಗಮವನ್ನು ಲಾಭದತ್ತ ಕೊಂಡೊಯ್ಯುತ್ತಿದ್ದಾರೆ. ಅವರ ಅಪಾರ ಅನುಭವ ಹಾಗೂ ಪ್ರಬುದ್ಧತೆಯನ್ನು ಬಳಸಿಕೊಳ್ಳಲು ಈ ಬಾರಿ ಸಚಿವ ಸಂಪುಟದಲ್ಲಿ ಅವರಿಗೆ ಅವಕಾಶ ಕಲ್ಪಿಸಬೇಕು. ಈ ಮೊದಲು ಸಚಿವ ಸ್ಥಾನ ನೀಡುವುದಾಗಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭರವಸೆ ನೀಡಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಅವರನ್ನು ಕೈ ಬಿಡಲಾಯಿತು. ಪದೇ ಪದೇ ಅವರಿಗೆ ಅನ್ಯಾಯವಾಗುತ್ತಿದೆ. ಆದರೆ, ಈ ಬಾರಿ ಹೀಗಾಗದಂತೆ ನೋಡಿಕೊಂಡು ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿದ್ದಾರೆ.