ಲಕ್ಷ್ಮೇಶ್ವರ: ಕಳೆದ ಎರಡು ತಿಂಗಳಿಂದ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಸರಿಯಾಗಿ ಮರಳು ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ಕಟ್ಟಡ ಕಾರ್ಮಿಕರಿಗೆ ಕೆಲಸ ಇಲ್ಲದೆ ಕಂಗಾಲಾಗಿದ್ದಾರೆ. ಕಾರಣ ಯಾವುದೇ ಅಡೆತಡೆ ಇಲ್ಲದೆ ಮರಳು ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಂಗಳವಾರ ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಪರವಾಗಿ ತಹಸೀಲ್ದಾರ್ ಕೆ. ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದರು.
ಇದರಿಂದಾಗಿ ಕಾರ್ಮಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಾರಣ ಮರಳು ಪೂರೈಕೆ ಆಗುವಂತೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ಕಾರ್ಮಿಕರ ಬದುಕಿಗೆ ಆಸರೆ ಆಗಬೇಕು ಎಂದು ಮನವಿ ಮಾಡಿದರು.ಕಾನೂನಿನ ಪ್ರಕಾರ ಮರಳು ಪೂರೈಕೆ ಮಾಡಬೇಕು. ಕೆಲವರು ಹಣದಾಸೆಗಾಗಿ ಬೇಕಾಬಿಟ್ಟಿ ಮರಳು ಸಾಗಿಸುತ್ತಿದ್ದರು. ಅದಕ್ಕೆ ಕಡಿವಾಣ ಹಾಕಲಾಗಿದೆ. ಭೂಗರ್ಭ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಮರಳು ಪೂರೈಕೆ ಆಗುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ತಿಳಿಸಿದರು. ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಾದ ರಫೀಕ್ ಅತ್ತಿಗೇರಿ, ಬಿ.ಎಂ. ತಂಬಾಕದ, ಬಸೀರ್‌ಸಾಬ್ ಟಪಾಲ, ಸೋಮಪ್ಪ ಗಡದವರ, ಮೆಹಬೂಬ್ ಸಂಕ್ಲಿಪೂರ, ದುಡ್ಡುಸಾಬ್ ಕನಕವಾಡ, ಜಾಫರ್‌ಸಬ್ ಭೇಪಾರಿ, ನಂದೀಶ ಕ್ಯಾದಿಗೇರಿ, ರಾಜು ಕಳ್ಳಿ, ದುರಗಪ್ಪ ವಡ್ಡರ, ಮೌಲಾಲಿ ಶಿರಹಟ್ಟಿ, ಇಮ್ತಿಯಾಜ್ ಹೊಸಮನಿ, ಮಲ್ಲನಗೌಡ ಪಾಟೀಲ, ಯಪ್ಪಲ್ಲಗೌಡ ಪಾಟೀಲ ಇದ್ದರು.