ಮಾಗಡಿ: ನಾಡಪ್ರಭು ಕೆಂಪೇಗೌಡರು ತಮ್ಮ ತಾಯಿಗಾಗಿ ಕಟ್ಟಿಸಿರುವ ಐತಿಹಾಸಿಕ ಸೋಮೇಶ್ವರಸ್ವಾಮಿ ದೇವಸ್ಥಾನದ ಹಿಂದಿನ ಬೆಟ್ಟದ ಮೇಲೆ ನೆಲೆಸಿರುವ ಚಕ್ರಬಸವಣ್ಣಸ್ವಾಮಿ ಗೋಪುರ ಅಭಿವೃದ್ಧಿ ಪಡಿಸುವಂತೆ ಭಕ್ತರು ಮನವಿ ಮಾಡಿದ್ದಾರೆ.
ಪ್ರಾಚ್ಯ್ಯವಸ್ತು ಇಲಾಖೆಗೆ ಸೇರಿರುವ ಸೋಮೇಶ್ವರಸ್ವಾಮಿ ದೇವಸ್ಥಾನ ಅಭಿವೃದ್ಧಿಗಾಗಿ ಕಾಯುತ್ತಿದ್ದು, ದಾನಿಗಳ ಸಹಾಯದಿಂದ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ಆದರೆ ಪ್ರಾಚ್ಚ್ಯವಸ್ತು ಇಲಾಖೆ ಮಾತ್ರ ಅಭಿವೃದ್ಧಿಗೆ ಮುಂದಾಗದಿರುವುದು ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ. ಈಗಲಾದರು ದೇವಾಲಯದ ಅಭಿವೃದ್ಧಿಗೆ ಮುಂದೆ ಬರಬೇಕು ಎಂದು ಒತ್ತಾಯಿಸಿದ್ದಾರೆ.ಶಿಥಿಲಾವಸ್ಥೆಯಲ್ಲಿ ಗೋಪುರ:
ಸೋಮೇಶ್ವರಸ್ವಾಮಿ ದೇವಸ್ಥಾನದ ಹಿಂದೆ ಬಂಡೆ ಮೇಲೆ ಚಕ್ರಬಸವಣ್ಣಸ್ವಾಮಿ ನೆಲೆಸಿದ್ದು ಸುಮಾರು 500 ವರ್ಷಗಳ ಹಳೆಯ ಗೋಪುರ ಶಿಥಿಲಾವಸ್ಥೆಯಲ್ಲಿದ್ದು ಸಂಪೂರ್ಣ ಹಾಳಾಗಿದೆ. ಯಾವಾಗ ಬೇಕಾದರು ಬಿದ್ದು ಹೊಗುವ ಸ್ಥಿತಿಯಲ್ಲಿದೆ. ಜೊತೆಗೆ ಗೋಪುರದ ಮೆಟ್ಟಿಲು ಹತ್ತುವ ತಡೆಗೋಡೆ ಸಂಪೂರ್ಣ ಬಿದ್ದು ಹೋಗಿದೆ. ಪ್ರವಾಸಿಗರು ಇಲ್ಲಿಗೆ ಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ಮೂರು ದಿನಗಳ ಹಿಂದೆ ಕಳ್ಳರು ನಿಧಿ ಆಸೆಗಾಗಿ ಚಕ್ರಬಸವಣ್ಣ ಸ್ವಾಮಿಯನ್ನು ಹಾರೆಕೋಲಿನಿಂದ ಬಸವಣ್ಣಸ್ವಾಮಿ ತಳಭಾಗದಲ್ಲಿ ನಿಧಿ ಆಸೆಗಾಗಿ ಎತ್ತಿದ್ದಾರೆ. ಪ್ರಾಚ್ಯ್ಯವಸ್ತು ಇಲಾಖೆ ಕೂಡಲೇ ಗೋಪುರ ಅಭಿವೃದ್ಧಿ ಹಾಗೂ ತಡೆಗೋಡೆ ನಿರ್ಮಾಣದ ಜೊತೆಗೆ ಚಕ್ರಬಸವಣ್ಣಸ್ವಾಮಿಯ ಪುನರ್ ನಿರ್ಮಾಣ ಮಾಡಿ ಕೆಂಪೇಗೌಡರ ಕಾಲದ ದೇವಸ್ಥಾನ ಅಭಿವೃದ್ಧಿ ಮಾಡಿ ಬರುವಂತ ಭಕ್ತರು ಹಾಗೂ ಪ್ರವಾಸಿಗೆ ಅನುಕೂಲ ಮಾಡಿಕೊಡಬೇಕು. ರಾತ್ರಿ ವೇಳೆ ಕಿಡಿಗೇಡಿಗಳು ಹಾಗೂ ಕುಡುಕರು ಬೆಟ್ಟಕ್ಕೆ ಬರದಂತೆ ಭದ್ರತೆ ಕೈಗೊಳ್ಳಬೇಕು. ಐತಿಹಾಸಿಕ ದೇವಸ್ಥಾನ ಉಳಿಸಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಭಕ್ತರು ತಿಳಿಸಿದ್ದಾರೆ.ರಾಜ್ಯ ಸರ್ಕಾರ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ನಿರ್ಮಾಣ ಮಾಡಿ ಕೆಂಪೇಗೌಡರ ದೇವಸ್ಥಾನ, ಸಮಾಧಿ ಅಭಿವೃದ್ಧಿ ಮಾಡುವುದಾಗಿ ಕಳೆದ 10 ವರ್ಷಗಳಿಂದ ಹೇಳುತ್ತಾ ಬಂದಿದ್ದು ಇದುವರೆಗೂ ಅಭಿವೃದ್ಧಿ ವಿಚಾರ ಹೇಳಿಕೆಗಳಲ್ಲೇ ನಿಂತಿದೆ. ಈಗಲಾದರೂ ಇಲಾಖೆ ಎಚ್ಚೆತ್ತುಕೊಂಡು ದೇವಾಲಯದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಕೆಂಪೇಗೌಡರ ಅಭಿಮಾನಿಗಳ ಆಗ್ರಹಿಸಿದ್ದಾರೆ. ಫೋಟೋ 11ಮಾಗಡಿ1 :
ಮಾಗಡಿಯ ಸೋಮೇಶ್ವರಸ್ವಾಮಿ ದೇವಲಾಯದ ಹಿಂದೆ ಬೆಟ್ಟದ ಮೇಲೆ ನೆಲೆಸಿರುವ ಚಕ್ರಬಸವಣ್ಣಸ್ವಾಮಿ ಗೋಪುರ ಹಾಗೂ ತಡೆಗೋಡೆ ಬಿದ್ದು ಹೋಗಿರುವುದನ್ನು ತೋರಿಸುತ್ತಿರುವ ಭಕ್ತರು.