ಕನ್ನಡಪ್ರಭ ವಾರ್ತೆ ಕಾಗವಾಡ
ಕೃತಕ ಬುದ್ಧಿಮತ್ತೆ (ಎಐ) ಎನ್ನುವುದು ಕಲಿಕೆ, ತಾಂತ್ರಿಕತೆ, ಸಮಸ್ಯೆ ಪರಿಹಾರ, ಗ್ರಹಿಕೆ ಮತ್ತು ನಿರ್ಧಾರ ಮಾಡುವಂತಹ ಮಾನವ ಬುದ್ಧಿಮತ್ತೆಯೊಂದಿಗೆ ಸಾಮಾನ್ಯವಾಗಿ ಸಂಬಂಧಿಸಿದ ಕೆಲಸಗಳನ್ನು ಮಾಡುವ ವ್ಯವಸ್ಥೆಯಾಗಿದೆ ಎಂದು ಪ್ರಾಚಾರ್ಯ ಡಾ.ಎಸ್.ಪಿ.ತಳವಾರ ತಿಳಿಸಿದರು.ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ-ಗಣಕಯಂತ್ರ ವಿಭಾಗ ಮತ್ತು ಹಳೆ ವಿದ್ಯಾರ್ಥಿಗಳ ಸಂಘಗಳ ಸಹಯೋಗದಲ್ಲಿ ಆಯೋಜಿಸಿದ್ದ ಒಂದು ದಿನದ ರಾಜ್ಯಮಟ್ಟದ ವಿದ್ಯಾರ್ಥಿ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಇಂದು ಜಗತ್ತು ವಿಜ್ಞಾನದ ಭರಾಟೆಯಲ್ಲಿ ಸಾಗುತ್ತಿದೆ. ಹೀಗಾಗಿ ವಿಜ್ಞಾನದ ಜೊತೆಗೆ ನಾವು ಸಾಗಬೇಕು. ಇತ್ತೀಚಿಗೆ ರಾಷ್ಟ್ರದ ರಾಜಧಾನಿಯಲ್ಲಿ ಆಯೋಜಿಸಿದ್ದ ಎಐ ಸಮ್ಮಿತ್-2026 ಕುರಿತು ನಾವು ತಿಳಿದುಕೊಳ್ಳಲು ಇವತ್ತಿನ ಈ ಸ್ಪರ್ಧೆ ಸಹಕಾರಿಯಾಗಲಿದೆ. ದೇಶವನ್ನು ಕೇವಲ ಎಐ ಬಳಕೆದಾರರ ದೇಶವನ್ನಾಗಿಸದೇ ಜಾಗತಿಕ ಎಐ ನಾಯಕನಾಗಿ ಹೊರಹೊಮ್ಮುವ ಗುರಿಯನ್ನು ಈ ಎಐ ಸಮ್ಮಿತ್ ಹೊಂದಿತ್ತು ಎಂದರು.
ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರೊ.ಜೆ.ಕೆ.ಪಾಟೀಲ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ಬೇರೆ ಬೇರೆ ಮಹಾವಿದ್ಯಾಲಯದಿಂದ ಒಟ್ಟು 25 ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಚಿಕ್ಕೋಡಿ ಬಿ.ಕೆ. ಮಹಾವಿದ್ಯಾಲಯದ ರಕ್ಷನ ಜಹಾನ ವಡ್ರಾಳೆ ಪ್ರಥಮ ಸ್ಥಾನ, ಶಿವಾನಂದ ಮಹಾವಿದ್ಯಾಲಯದ ಮಹೇಕ ಅಪರಾಜ ದ್ವೀತಿಯ ಮತ್ತು ಅಥಣಿಯ ಎಸ್‌ಎಂಎಸ್ ಮಹಾವಿದ್ಯಾಲಯದ ಭವಾನಿ ಪಾಟೀಲ ತೃತೀಯ ಸ್ಥಾನ ಪಡೆದರು.ಈ ವೇಳೆ ಕಾರ್ಯದರ್ಶಿ ಪ್ರೊ.ಬಿ.ಎ.ಪಾಟೀಲ, ಐಕ್ಯೂಎಸಿ ಸಂಯೋಜಕ ಪ್ರೊ.ಬಿ.ಡಿ.ದಾಮಣ್ಣವರ, ಪ್ರೊ.ಎಸ್.ಎ.ಇನಾಮದಾರ ಸೇರಿದಂತೆ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಅನನ್ಯಾ ಕುಲಕರ್ಣಿ ಪ್ರಾರ್ಥಿಸಿದರು. ಪ್ರೊ.ವಿ.ಬಿ.ಬುರ್ಲೆ ಸ್ವಾಗತಿಸಿದರು. ಪ್ರೊ.ಎಸ್.ಎಸ್. ಫಡತರೆ ನಿರೂಪಿಸಿದರು. ಪ್ರೊ.ಎಸ್.ಡಿ.ಅಲಗೌಡರ ವಂದಿಸಿದರು.