ಉಡುಪಿಯಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ಗೆ ಮನವಿ

KannadaprabhaNewsNetwork |  
Published : Jun 01, 2026, 02:30 AM IST
31ಮನವಿ | Kannada Prabha

ಸಾರಾಂಶ

ಉಡುಪಿಯಲ್ಲಿ ವಾಹನ ನಿಲುಗಡೆ (ಪಾರ್ಕಿಂಗ್) ಅವ್ಯವಸ್ಥೆಯನ್ನು ಶೀಘ್ರವಾಗಿ ಪರಿಹರಿಸುವಲ್ಲಿ ಮುತುವರ್ಜಿ ವಹಿಸುವಂತೆ ಉಡುಪಿಯ ಶಾಸಕ ಯಶ್ ಪಾಲ್ ಸುವರ್ಣ ಅವರಿಗೆ ಉಡುಪಿ ಕಲ್ಯಾಣ ವೇದಿಕೆ ಅಧ್ಯಕ್ಷ ಸಿಎ ರಾಜಾರಾಮ ಶೆಟ್ಟಿ ಅವರ ನೇತೃತ್ವದಲ್ಲಿ ಅರ್ಜಿ ಸಲ್ಲಿಸಲಾಯಿತು.

ಉಡುಪಿ: ಉಡುಪಿಯಲ್ಲಿ ವಾಹನ ನಿಲುಗಡೆ (ಪಾರ್ಕಿಂಗ್) ಅವ್ಯವಸ್ಥೆಯನ್ನು ಶೀಘ್ರವಾಗಿ ಪರಿಹರಿಸುವಲ್ಲಿ ಮುತುವರ್ಜಿ ವಹಿಸುವಂತೆ ಉಡುಪಿಯ ಶಾಸಕ ಯಶ್ ಪಾಲ್ ಸುವರ್ಣ ಅವರಿಗೆ ಉಡುಪಿ ಕಲ್ಯಾಣ ವೇದಿಕೆ ಅಧ್ಯಕ್ಷ ಸಿಎ ರಾಜಾರಾಮ ಶೆಟ್ಟಿ ಅವರ ನೇತೃತ್ವದಲ್ಲಿ ಅರ್ಜಿ ಸಲ್ಲಿಸಲಾಯಿತು. ಉಡುಪಿ ನಗರದ ಮಧ್ಯದಲ್ಲಿರುವ ಧೂಮಾವತಿ ದೈವಸ್ಧಾನದ ಸುತ್ತಲಿನ ಅಂಗಡಿಗಳನ್ನು ಕೆಡವಲಾಗಿದ್ದು, ಆ ಖಾಲಿ ಸ್ಥಳದಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ನಿರ್ಮಿಸುವಂತೆ ಮನವಿಯಲ್ಲಿ ವಿನಂತಿಸಲಾಗಿದೆ. ಉದ್ಯಮಿ ಕೃಷ್ಣ ಕೊಡಂಚ, ವೇದಿಕೆಯ ಗೌರವಾಧ್ಯಕ್ಷ ಡಿ. ಶ್ರೀಧರ ಶೇಣವ ಹಾಗೂ ಇತರ ನಿರ್ದೇಶಕರು ಉಪಸ್ಥಿತರಿದ್ದರು. ವೇಗವಾಗಿ ಬೆಳೆಯುತ್ತಿರುವ ಉಡುಪಿ ನಗರದ ಪಾರ್ಕಿಂಗ್ ಸಮಸ್ಯೆ ಅರಿವು ತಮಗಿದೆ. ಈ ಸೂಕ್ತ ಪರಿಹಾರ ಕಂಡುಕೊಳ್ಳುವ ಯೋಜನೆ ಸದ್ಯದಲ್ಲೇ ಇದೆ ಎಂಬ ಭರವಸೆಯನ್ನು ಶಾಸಕರು ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುದುರೆಮುಖ ಚಾರಣಕ್ಕೆ ಅವಕಾಶ, ಇಂದಿನಿಂದ ಅಧಿಕೃತ ಅನುಮತಿ
ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡಿ: ಜಯಂತ್ ನಡುಬೈಲು