ತೆರಿಗೆ ಹೆಚ್ಚಳ ಮಾಡದಂತೆ ಚೆಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳಿಂದ ಮನವಿ

KannadaprabhaNewsNetwork |  
Published : Apr 18, 2025, 12:32 AM IST
ಮುಖ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಕೆ | Kannada Prabha

ಸಾರಾಂಶ

ಕುಶಾಲನಗರ ಪುರಸಭೆ ವತಿಯಿಂದ 2025 ಮತ್ತು 2026ರ ಆಸ್ತಿ ತೆರಿಗೆಯ ಪ್ರಮಾಣ ಅವೈಜ್ಞಾನಿಕವಾಗಿದೆ. ಅದನ್ನು ಸರಿಪಡಿಸಿಕೊಂಡು ನಂತರ ತೆರಿಗೆ ಸಂಗ್ರಹ ಮಾಡಬೇಕೆಂದು ಕುಶಾಲನಗರ ಪುರಸಭೆ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳಿಗೆ ಕುಶಾಲನಗರ ಚೆಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ಪುರಸಭೆ ವತಿಯಿಂದ 2025 ಮತ್ತು 2026ರ ಆಸ್ತಿ ತೆರಿಗೆಯ ಪ್ರಮಾಣ ಅವೈಜ್ಞಾನಿಕವಾಗಿದೆ. ಅದನ್ನು ಸರಿಪಡಿಸಿಕೊಂಡು ನಂತರ ತೆರಿಗೆ ಸಂಗ್ರಹ ಮಾಡಬೇಕೆಂದು ಕುಶಾಲನಗರ ಪುರಸಭೆ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳಿಗೆ ಕುಶಾಲನಗರ ಚೆಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಕಳೆದ ವರ್ಷದ ತೆರಿಗೆಗಿಂತ ಈ ವರ್ಷ ಶೇ.3ರಷ್ಟು ಹೆಚ್ಚಳ ಮಾಡಲಾಗಿದ್ದು, ಅಂತಿಮ ಹಂತದ ತೆರಿಗೆ ಶೇ.15ರಿಂದ ಶೇ.20 ಹೆಚ್ಚಳವಾಗಿದೆ. ಅವೈಜ್ಞಾನಿಕ ಹೆಚ್ಚಳದಿಂದ ಸಾರ್ವಜನಿಕರಿಗೆ ಹೊರೆಯಾಗುತ್ತಿದೆ. ಇದನ್ನು ತಕ್ಷಣ ಸರಿಪಡಿಸುವಂತೆ ಮನವಿ ಪತ್ರದಲ್ಲಿ ಕೋರಲಾಯಿತು.ಉದ್ದಿಮೆದಾರ ಟ್ರೇಡ್ ಲೈಸೆನ್ಸ್‌ಗೂ ವಿಪರೀತ ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದುಪ್ಪಟ್ಟು ಹಣ ಆಗಿರುವುದನ್ನು ಗಮನಕ್ಕೆ ತರಲಾಯಿತು.ಚೆಂಬರ್ ಆಫ್ ಕಾಮರ್ಸ್‌ನ ಜಿಲ್ಲಾಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ, ತೆರಿಗೆ ಹೆಚ್ಚಳ ಮಾಡುವುದಕ್ಕೆ ಸರಿಯಾಗಿ ಜನರ ಮೂಲಭೂತ ಅವಶ್ಯಕತೆಗಳನ್ನು ಈಡೇರಿಸಲು ಒತ್ತಾಯಿಸಿದರು. ಉದ್ದಿಮೆಗಳನ್ನು ಕನಿಷ್ಠ 4 ಪಂಗಡಗಳಾಗಿ ವಿಂಗಡಿಸಿ ಟ್ರೇಡ್ ಲೈಸನ್ಸ್‌ನ ತೆರಿಗೆ ಪಡೆಯುವಂತೆ ಮನವಿ ಮಾಡಿದರು.ಅನಧಿಕೃತ ಬೀದಿಬದಿ ವ್ಯಾಪಾರಿಗಳಿಂದ ತೆರಿಗೆ ಕಟ್ಟುವ ವ್ಯಾಪಾರಸ್ಥರಿಗೆ ಅನನುಕೂಲ ಆಗುತ್ತಿರುವ ಬಗ್ಗೆ ಮುಖ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.ಕುಶಾಲನಗರ ಪ್ರಮುಖ ಸ್ಥಳಗಳಲ್ಲಿ ಸಂಚಾರಕ್ಕೆ ತೊಂದರೆಯಾಗುವ ರೀತಿಯಲ್ಲಿ ಆಟೋ ನಿಲುಗಡೆ ಮಾಡಿಕೊಳ್ಳುತ್ತಿರುವ ಬಗ್ಗೆಯೂ ನಿರ್ದೇಶಕ ಪಿ.ಎಂ.ಮೋಹನ್ ಪುರಸಭೆ ಗಮನ ಸೆಳೆದರು.ಈ ಎಲ್ಲ ಬೇಡಿಕೆಗಳಿಗೂ ಮುಖ್ಯಾಧಿಕಾರಿ ಗಿರೀಶ್, ಅಧ್ಯಕ್ಷೆ ಜಯಲಕ್ಷ್ಮಿ ಮತ್ತು ಸದಸ್ಯರು ಸ್ಪಂದನೆ ನೀಡಿ ಪರಿಶೀಲನೆ ನಡೆಸುವ ಭರವಸೆ ವ್ಯಕ್ತಪಡಿಸಿದರು.ಎಲ್ಲ ಸದಸ್ಯರನ್ನು ಈ ಕೂಡಲೇ ಸಂಪರ್ಕ ಮಾಡಿ, ಆದಷ್ಟು ಬೇಗ ಪುರಸಭೆಯ ಸಾಮಾನ್ಯ ಸಭೆ ಕರೆದು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಅಧ್ಯಕ್ಷೆ ಜಯಲಕ್ಷ್ಮಿ ತಿಳಿಸಿದರು. ಕುಶಾಲನಗರ ಚೆಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಕಾರ್ಯದರ್ಶಿ ಚಿತ್ರ ರಮೇಶ್, ಖಜಾಂಚಿ ಎನ್.ವಿ.ಬಾಬು, ನಿರ್ದೇಶಕರಾದ ಕೆ.ಎನ್.ದೇವರಾಜ್, ಚಂದ್ರು, ಪುರಸಭೆ ಸದಸ್ಯರಾದ ಪ್ರಮೋದ್ ಮುತ್ತಪ್ಪ, ಸುರೇಶ್, ಆನಂದ್, ಆರೋಗ್ಯಾಧಿಕಾರಿ ಉದಯ್, ಆರ್ ಐ ರಾಮು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ