ಕುಷ್ಟಗಿ: ತಾಲೂಕಿನ ನೆರೆಬೆಂಚಿ ಗ್ರಾಮದ ರೈತರು ರೈಲ್ವೆ ಕಾಮಗಾರಿ ನಡೆಯುವ ಜಾಗದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಿಕೊಡುವಂತೆ ರೈಲ್ವೆ ಅಧಿಕಾರಿ ಹಾಗೂ ತಹಸೀಲ್ದಾರಗೆ ಒತ್ತಾಯಿಸಿದ ಘಟನೆ ನಡೆಯಿತು.
ಈ ವೇಳೆ ತಹಸೀಲ್ದಾರ್ ಹಾಗೂ ರೈಲ್ವೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಸವರಾಜ ಗುರಿಕಾರ ಹಾಗೂ ಹುಬ್ಬೇಶ ಅಲಿ ಆದವಾನಿ ಮಾತನಾಡಿ, ನಮಗೆ ರೈಲ್ವೆ ಅಧಿಕಾರಿಗಳು ನಾಲ್ಕು ತಿಂಗಳ ಹಿಂದೆ ಮೇಲ್ಸೇತುವೆ ನಿರ್ಮಿಸಿ ಕೊಡುವದಾಗಿ ಭರವಸೆ ನೀಡಿದ್ದರು. ಆದ ಕಾರಣ ನಾವು ಕಾಮಗಾರಿ ಮಾಡಲು ಅವಕಾಶ ಕೊಡಲಾಗಿತ್ತು. ಈ ಹಿಂದೆ ಸಹಿತ ಸಂಸದರು ಹಾಗೂ ಶಾಸಕರ ಗಮನಕ್ಕೂ ಈ ವಿಷಯ ತಂದರು ಸಹಿತ ರೈಲ್ವೆ ಅಧಿಕಾರಿಗಳು ತಮಗೆ ತಿಳಿದ ಹಾಗೇ ಕೆಲಸ ಮಾಡುತ್ತಿದ್ದಾರೆ ಆದ ಕಾರಣ ನಮ್ಮ ವಾಹನಗಳ ಸಂಚಾರಕ್ಕಾಗಿ ಹೊಲಗಳಿಗೆ ಹೋಗಿ ಬರಲು ಮೇಲ್ಸೇತುವೆ ಅವಶ್ಯಕತೆ ಇದ್ದು ಮೇಲ್ಸೇತುವೆ ನಿರ್ಮಾಣ ಮಾಡಿಕೊಡಬೇಕು ಎಂದು ಮನವಿ ಮಾಡಿದರು.ರೈಲ್ವೆ ಇಲಾಖೆಯ ಚಿಫ್ ಎಂಜಿನೀಯರ್ ಟಿ.ವೆಂಕಟೇಶರಾವ್ ಮಾತನಾಡಿ, ಈಗ ಓಡಾಡಲು ಪರ್ಯಾಯ ಮಾರ್ಗವನ್ನು ಅಂಡರ್ ಬ್ರಿಜ್ ಮಾಡಲಾಗಿದೆ. ನೀವು ಕೇಳಿದಂತೆ ಎಲ್ ಸಿ (ನೆಲದ ಮೇಲೆ ಗೇಟ್ ) ನಿರ್ಮಾಣ ಮಾಡಲು ಸುರಕ್ಷತೆ ದೃಷ್ಠಿಯಿಂದ ಸಾಧ್ಯವಾಗುವುದಿಲ್ಲ. ಓವರ್ ಹೆಡ್ ಬ್ರಿಜ್ ನಿರ್ಮಾಣ ಮಾಡಲು ಕಾಲಾವಕಾಶಬೇಕು. ಹೊಸದಾಗಿ ಕ್ರೀಯಾಯೋಜನೆ ಮಾಡಿ, ಭೂ ಖರೀದಿ ಮಾಡಬೇಕು. ಆದಾದ ನಂತರ ಟೆಂಡರ್ ಕರೆದು ಒವರ್ ಹೆಡ್ ಬ್ರಿಜ್ ನಿರ್ಮಾಣ ಮಾಡಬೇಕಾಗುತ್ತದೆ. ಇದಕ್ಕೆ ನಿಮ್ಮ ಸಹಕಾರ ಹಾಗೂ ಕಾಲಾವಕಾಶಬೇಕು ನಾವುಗಳು ಜಿಲ್ಲಾಧಿಕಾರಿಗಳ ಮೂಲಕ ಪ್ರಪೋಸಲ್ ಕಳುಹಿಸುತ್ತೇವೆ ಆದಷ್ಟು ಶೀಘ್ರದಲ್ಲಿ ಮೇಲ್ಸೇತುವೆಯ ಕೆಲಸ ಮಾಡಿಕೊಡಲಾಗುತ್ತದೆ ಎಂದರು.
ರೈಲ್ವೆ ಅಧಿಕಾರಿಗಳು ಮೇಲ್ಸೇತುವೆಯ ನಿರ್ಮಾಣದ ಕುರಿತು ಒಪ್ಪಿಗೆ ಪತ್ರವನ್ನು ರೈತರಿಗೆ ನೀಡಿದರು. ರೈತರು ಮೇಲ್ಸೇತುವೆಯ ನಿರ್ಮಾಣಕ್ಕೆ ಮನವಿ ಸಲ್ಲಿಸಿದರು.