ಕನ್ನಡಪ್ರಭ ವಾರ್ತೆ ಯಲ್ಲಾಪುರ
ಜಿಲ್ಲೆಯಲ್ಲಿ ಸುಮಾರು ೭ ಸಾವಿರಕ್ಕಿಂತ ಹೆಚ್ಚು ಆಟೋಗಳು ಇವೆ. ೨ಕ್ಕಿಂತ ಹೆಚ್ಚಿನ ಪರ್ಮಿಟ್ ಹೊಂದಿರುವ ಆಟೋ ರಿಕ್ಷಾ ಮಾಲಕರ ಮೇಲೆ ಕ್ರಮ ಕೈಗೊಳ್ಳಬೇಕು. ಕನಿಷ್ಠ ೫ ವರ್ಷಗಳ ಕಾಲ ಹೊಸ ಪರ್ಮಿಟ್ ನೀಡುವುದನ್ನು ನಿಲ್ಲಿಸಬೇಕು. ಜಿಲ್ಲಾ ಕೇಂದ್ರದ ಸ್ಥಳದಲ್ಲಿಯೇ ಪರ್ಮಿಟ್ ನೀಡುವ ಪದ್ಧತಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಯಲ್ಲಾಪುರ, ಹಳಿಯಾಳ, ಮುಂಡಗೋಡ, ದಾಂಡೇಲಿ, ಬನವಾಸಿ, ಸಿದ್ದಾಪುರ ಈ ಭಾಗದ ರಿಕ್ಷಾ ಚಾಲಕರು ವಾಹನ ಪರವಾನಿಗೆ ನವೀಕರಣಕ್ಕೆ ಹೋಗುವ ಪ್ರಾದೇಶಿಕ ಸಾರಿಗೆ ಕಚೇರಿ, ಆಟೋ ಶೋ ರೂಂಗಳು ೩೦ಕಿಮೀ ರಿಂದ ೭೫ ಕಿಮೀಕ್ಕಿಂತ ಹೆಚ್ಚು ದೂರದಲ್ಲಿ ಇವೆ. ಬೇರೆ ಜಿಲ್ಲೆಗಳಲ್ಲಿ ಪರ್ಮಿಟ್ ವ್ಯಾಪ್ತಿಯು ಹೆಚ್ಚಿಗೆ ಇದ್ದಂತೆ ನಮ್ಮ ಜಿಲ್ಲೆಯಲ್ಲಿ ಕೂಡ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ ೫೦ ಕಿಮೀವರೆಗೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು.ಜಿಲ್ಲೆಯ ಯಾವುದೇ ತಾಲೂಕಿನಲ್ಲಿ ರ‍್ಯಾಪಿಡೊ ಬೈಕ್‌ಗೆ ಪರವಾನಿಗೆ ನೀಡಬಾರದು, ನೀಡಿರುವ ಪರವಾನಿಗೆ ಹಿಂಪಡೆಯಬೇಕು. ಈ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಂಘದ ರಾಜ್ಯಾಧ್ಯಕ್ಷ ಶೇಖರಯ್ಯ ಮಠಪತಿ ಮಾತನಾಡಿ, ಆಟೊ ಚಾಲಕರಿಗಾಗಿ ನಿಗಮ ಸ್ಥಾಪನೆ ಮಾಡಿದರೆ ಸಾಲದು. ಅದಕ್ಕೆ ಹಣ ಇಟ್ಟು, ಆಟೊ ಚಾಲಕರು ಅಪಘಾತದಲ್ಲಿ ಮೃತಪಟ್ಟರೆ ಕುಟುಂಬದವರಿಗೆ ಕನಿಷ್ಠ ₹೫ ಲಕ್ಷ ಪರಿಹಾರ ನೀಡುವ ಕ್ರಮ ಆಗಬೇಕು ಎಂದು ಆಗ್ರಹಿಸಿದರು.ಕಾಳಮ್ಮನಗರದಲ್ಲಿ ಕೊಲೆಯಾದ ರಂಜಿತಾ ಅವರನ್ನು ಆಟೊದಲ್ಲಿ ಆಸ್ಪತ್ರೆಗೆ ಸಾಗಿಸಿ, ಬದುಕಿಸುವ ಪ್ರಯತ್ನ ಮಾಡಿದ ಆಟೊ ಚಾಲಕರ ಸಂಘದ ಉಪಾಧ್ಯಕ್ಷ ಚಂದ್ರಶೇಖರ ಬೋವಿ ಅವರನ್ನು ಸಂಘದಿಂದ ಅಭಿನಂದಿಸಲಾಯಿತು.
ಸಂಘದ ತಾಲೂಕಾಧ್ಯಕ್ಷ ವಿಜಯ ಮಿರಾಶಿ, ಜಿಲ್ಲಾಧ್ಯಕ್ಷ ವಿಶ್ವನಾಥ ಗೌಡ, ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಬಾಬಾಸಾಬ ಜಮಾದಾರ್ ದಾಂಡೇಲಿ, ರಾಬರ್ಟ್ ಲೊಬೊ ಮುಂಡಗೋಡ, ಯಲ್ಲಾಪುರದ ಶಿವಾನಂದ ಖಾನಾಪುರ, ಸಂದೀಪ ವಡ್ಡರ್ ಮುಂತಾದವರಿದ್ದರು.-----------
ಜ.೬ ವೈ.ಎಲ್.ಪಿ. ೦೫ಜಿಲ್ಲಾ ಆಟೊ ರಿಕ್ಷಾ ಚಾಲಕ-ಮಾಲೀಕರ ಸಂಘದಿಂದ ಪಟ್ಟಣದಲ್ಲಿ ಶಾಸಕ ಶಿವರಾಮ ಹೆಬ್ಬಾರ ಅವರಿಗೆ ಮನವಿ ಸಲ್ಲಿಸಲಾಯಿತು.