ಕನಕಗಿರಿ: ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಕಡೆಗೆ ಶೂ ಎಸೆದ ವಕೀಲ ಹಾಗೂ ಬಿ.ಆರ್.ಅಂಬೇಡ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಅಮಿತ್ ಮಿಶ್ರಾ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ತಹಸೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ದಲಿತ ಮುಖಂಡ ಸಣ್ಣ ಹನುಮಂತಪ್ಪ ಮಾತನಾಡಿ, ಮಧ್ಯಪ್ರದೇಶದ ಗ್ವಾಲಿಯರ ಕೋರ್ಟ್ ವಕೀಲ ಅಮಿತ್ ಮಿಶ್ರಾ ಅಂಬೇಡ್ಕರ್ ಕೊಳಕು ಮನುಷ್ಯ, ಸುಳ್ಳುಗಾರ, ಬ್ರಿಟಿಷರ ಏಜೆಂಟ್,ಸವರ್ಣಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಅಂಬೇಡ್ಕರ್ ಕಾರಣ.ಅದಕ್ಕಾಗಿ ಗ್ವಾಲಿಯರ್ ಹೈಕೋರ್ಟ್ ಮುಂದೆ ಅಂಬೇಡ್ಕರ್ ಪ್ರತಿಮೆ ತೆಗೆದು ಬಿ.ಎನ್.ರಾವ್ ಪ್ರತಿಮೆ ಸ್ಥಾಪಿಸುತ್ತೇವೆ ಎಂದು ಹೇಳಿಕೆ ನೀಡಿರುವುದು ಖಂಡನೀಯ. ಈ ರೀತಿಯಲ್ಲಿ ಸಂವಿಧಾನ ವಿರೋಧಿ ಚಟುವಟಿಕೆ ನಡೆಸುತ್ತಿರುವ ಮನುವಾದಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಅಗ್ರಹಿಸಿದರು.
ಈ ಸಂದರ್ಭದಲ್ಲಿ ನಿಂಗಪ್ಪ ಪೂಜಾರ್, ನಾಗೇಶ ಬಡಿಗೇರ, ಚಂದುಸಾಬ್ ಗುರಿಕಾರ, ಸಣ್ಣ ದುರುಗಪ್ಪ, ಶೇಶಪ್ಪ ಪೂಜಾರಿ, ಸಣ್ಣ ದುರುಗಪ್ಪ, ಚಂದ್ರು ಬೇಕರಿ, ನೂರಸಾಬ್, ಹೊನ್ನೂರಪಾಷಾ, ಸುರೇಶ ಕುರುಗೋಡ, ಅಹಮ್ಮದ್ ಮೇಸ್ತ್ರಿ ಇತರರು ಇದ್ದರು.