ಕನ್ನಡಪ್ರಭ ವಾರ್ತೆ ಕಾರಟಗಿ
ಪಟ್ಟಣದಲ್ಲಿ ಹಾದು ಹೋಗಿರುವ ಆರ್.ಜಿ. ರಸ್ತೆ ರಾಜ್ಯ ಹೆದ್ದಾರಿಯಲ್ಲಿರುವ ಶರಣಬಸವೇಶ್ವರ ವಿದ್ಯಾಸಂಸ್ಥೆ ಸೇರಿದಂತೆ ಪಟ್ಟಣದ ವಿವಿಧ ಶಾಲಾ-ಕಾಲೇಜುಗಳ ಮುಂದೆ ರಸ್ತೆಗೆ ಹಂಪ್ಸ್ ಅಳವಡಿಸಿ ಅಪಘಾತ ತಪ್ಪಿಸುವಂತೆ ಮನವಿ ಮಾಡಿದರು.
ಮುಖ್ಯ ಶಿಕ್ಷಕ ಅಮರೇಶ ಪಾಟೀಲ್ ಮಾತನಾಡಿ, ಈ ಸ್ಥಳದಲ್ಲಿಯೇ ಹತ್ತು ಹಲವು ಅಪಘಾತಗಳು ಸಂಭವಿಸಿವೆ. ಹಂಪ್ಸ್ ಇಲ್ಲದಕ್ಕೆ ವಾಹನಗಳು ಅತಿ ವೇಗದಲ್ಲಿ ಚಲಿಸುತ್ತವೆ. ಇದರಿಂದ ವಿದ್ಯಾರ್ಥಿಗಳು ಶಾಲೆಗೆ ಬರುವಾಗಿ ಹೋಗುವಾಗ ಜೀವನ್ನು ಭಯದಲ್ಲಿಟ್ಟುಕೊಂಡು ಓಡಾಡಬೇಕಿದೆ. ಸಾರ್ವಜನಿಕರು, ದನಕರುಗಳಿಗೆ ಸಂಚರಿಸಲು ತೊಂದರೆಯಾಗಿದೆ. ಹಾಗಾಗಿ ಕೂಡಲೇ ಈ ಎಲ್ಲಾ ಸ್ಥಳಗಳಲ್ಲಿ ಹಂಪ್ಸ್‌ಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಸುರೇಶ ಶೆಟ್ಟರ್ ಮಾತನಾಡಿ, ಈ ಕುರಿತು ಈ ಭಾಗದ ರಸ್ತೆ ನಿರ್ವಹಣೆಯ ಹೊಣೆ ಹೊತ್ತಿರುವ ಮರಳಿ ಬಳಿಯ ಟೋಲ್ ಕಂಪನಿಯ ವ್ಯವಸ್ಥಾಪಕರಿಗೆ ಎಲ್ಲೆಲ್ಲಿ ವೈಜ್ಞಾನಿಕವಾಗಿ ಹಂಪ್ಸ್ ನಿರ್ಮಾಣ ಮಾಡಬೇಕು ಅಲ್ಲೆಲ್ಲ ಹಂಪ್ಸ್ ನಿರ್ಮಿಸಿ ಕೊಡಬೇಕೆಂದು ಅವರ ಗಮನಕ್ಕೆ ತಂದು ಅಪಘಾತ ನಿಯಂತ್ರಣಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಸ್ಥಳೀಯ ಪೊಲೀಸ್ ಠಾಣೆಗೂ ತೆರಳಿ ಮನವಿ ಸಲ್ಲಿಸಲಾಯಿತು.ಈ ಸಂದರ್ಭ ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು, ಉಪಾಧ್ಯಕ್ಷೆ ದೇವಮ್ಮ ಚಲುವಾದಿ, ಮುಖ್ಯಗುರು ವೀರೇಶ ಮ್ಯಾಗೇರಿ, ಶಿಕ್ಷಕರಾದ ಜಗದೀಶ ಭಜಂತ್ರಿ, ಜಗದೀಶ ಹಳ್ಳೂರು, ಇಬ್ರಾಹಿಂ ಆಮದಿಹಾಳ, ಸುರೇಶ ಭೋವಿ ಮಕ್ಕಳು ಇದ್ದರು.