ಕನ್ನಡಪ್ರಭ ವಾರ್ತೆ ಬೇತಮಂಗಲ
ಜಕ್ಕರಸನಕುಪ್ಪ ಗ್ರಾಪಂ ವ್ಯಾಪ್ತಿ ಮರದಘಟ್ಟು ಗ್ರಾಮದಲ್ಲಿ ಕೋಲಾರ ಜಿಲ್ಲಾ ಮಾವು ಬೆಳೆಗಾರ ಕ್ಷೇಮಾಭಿವೃದ್ಧಿ ಸಂಘ, ತೋಟಗಾರಿಕೆ ಇಲಾಖೆ, ಮಾವು ಅಭಿವೃದ್ಧಿ ಮಂಡಳಿ, ಕೃಷಿ ಇಲಾಖೆ ಹಾಗೂ ಕ್ಯಾಶ್ಬಳ್ಳಿ ಕೃಷಿ ರೈತ ಉತ್ಪಾದಕ ಕಂಪನಿಯಿಂದ ತಾಲೂಕು ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ ಸಮಾರಂಭ ಹಾಗೂ ಮಾವು ಬೆಳೆಗಾರ ಬೃಹತ್ ಸಮಾವೇಶ-ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಾವು ಮಂಡಳಿ ಅಭಿವೃದ್ಧಿಗೆ ೧೦೦ ಕೋಟಿ ರುಪಾಯಿ ಅನುದಾನ ಬಜೆಟ್ ನಲ್ಲಿ ಮೀಸಲಿಡುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದ್ದೇನೆ. ಮನವಿಗೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು. ಮಾವಿನ ಹಣ್ಣಿನ ಬಗ್ಗೆ ಜನರಲ್ಲಿ ಇನ್ನು ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ವಿಧಾನಸೌಧದ ಮುಂಭಾಗ ಮ್ಯಾಂಗೋ ಮ್ಯಾರಥಾನ್ ಅಯೋಜಿಸಲಾಗುವುದು, ಬೆಂಗಳೂರು ನಗರದಲ್ಲಿ ೧.೫ ಕೋಟಿ ಜನಸಂಖ್ಯೆ ಇದ್ದು ಶೇ.೧೫ ಜನರು ಮಾವಿನ ಹಣ್ಣನ್ನು ೧೬ ವಾರಗಳ ಕಾಲ ಸೇವಿಸಿದರೆ ಸಾಕು. ಇದೀಗ ಬೆಳೆಯಲಾಗುತ್ತಿರುವ ಬೆಳೆಯನ್ನು ೩ ಪಟ್ಟು ಹೆಚ್ಚಿಸಬೇಕಾಗುತ್ತದೆ. ಮತ್ತು ಬೆಂಗಳೂರಿನ ನಂದಿನಿ ಮಳಿಗೆಯಲ್ಲಿ ಮಾವು ಮಾರಾಟ ಮಾಡಲು ಸಹ ಅನುವು ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.ಕೋಲಾರ ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪ ರೆಡ್ಡಿ ಮಾತನಾಡಿ, ಹಲವು ಸಂಕಷ್ಟದಲ್ಲೂ ಮಾವು ಬೆಳೆ ಬೆಳೆದರೂ ಸೂಕ್ತ ಬೆಲೆ ದೊರಕುತ್ತಿಲ್ಲ. ನಮ್ಮ ಸಂಘದ ಹೋರಾಟದ ಫಲವಾಗಿ ಮಾವು ಬೆಳೆಗಾರರ ಹಲವು ಬೇಡಿಕೆ ಸರ್ಕಾರ ಈಡೇರಿಸಿದೆ. ಆದರೂ ಸಹ ಇನ್ನಷ್ಟು ಬೇಡಿಕೆ ಇದ್ದು, ಅವುಗಳನ್ನು ಹಂತ ಹಂತವಾಗಿ ಈಡೇರಿಸಬೇಕು ಎಂದು ಹೇಳಿದರು.
ತಾಲೂಕು ಮಾವು ಬೆಳೆಗಾರರ ಸಂಘದ ನೂತನ ಅಧ್ಯಕ್ಷ ಅಭಿಲಾಷ್ ರೆಡ್ಡಿ ಮಾತನಾಡಿ, ಕೆಜಿಎಫ್ ತಾಲೂಕಿನಲ್ಲಿ ಸರಿ ಸುಮಾರು ೩೦೦೦ ಸಾವಿರ ಕುಟುಂಬಗಳು ಮಾವು ಬೆಳೆಯನ್ನೇ ಆಧಾರ ಮಾಡಿಕೊಂಡಿವೆ. ಕೋಲಾರ ಜಿಲ್ಲೆಯಲ್ಲಿ ೪೦ ಸಾವಿರ ಎಕರೆ ಜಮೀನಿನಲ್ಲಿ ಮಾವು ಬೆಳೆ ಬೆಳೆಯುತ್ತಿದ್ದಾರೆ. ಅವರಿಗೆ ಭದ್ರತೆ ಕಲ್ಪಿಸಬೇಕಿದೆ ಹಾಗೂ ತೋಟಗಾರಿಕೆ ಕಚೇರಿಯನ್ನು ಕೆಜಿಎಫ್ ನಗರದಲ್ಲೂ ತೆರೆಯಬೇಕಿದೆ. ಹಾಗೂ ಮಾವು ಮಂಡಳಿಯ ಶಾಖಾ ಕಚೇರಿ ಕ್ಯಾಸಂಬಳ್ಳಿಯಲ್ಲಿ ತೆರೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕ ಜಾವಿದ್, ಆರ್.ಕೆ. ಫೌಂಡೇಶನ್ ಅಧ್ಯಕ್ಷ ಮೋಹನ್ ಕೃಷ್ಣ, ಮುಖಂಡರಾದ ವೆಂಕಟಕೃಷ್ಣರೆಡ್ಡಿ, ಕನ್ನಡ ಸಂಘದ ಅಧ್ಯಕ್ಷ ಪ್ರಸನ್ನ ರೆಡ್ಡಿ, ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಭಿಲಾಶ್ ರೆಡ್ಡಿ, ಸರ್ಕಾರಿ ನೌಕರ ಸಂಘದ ನಿವೃತ್ತ ಅಧ್ಯಕ್ಷರಾದ ರವಿ ರೆಡ್ಡಿ, ಅರುಣ್ ರೆಡ್ಡಿ, ವಿಜ್ಞಾನಿಗಳದ ಡಾ.ಮಂಜುನಾಥ್ ರೆಡ್ಡಿ, ಡಾ.ಅನಿಲ್ ಕುಮಾರ್, ಅಶ್ವಥ್ ನಾರಾಯಣ್ ರೆಡ್ಡಿ ಇದ್ದರು.
ಕೋಲಾರ ನನ್ನ ರಾಜಕೀಯ ಕರ್ಮಭೂಮಿ