ಕನ್ನಡಪ್ರಭ ವಾರ್ತೆ ರಾಮನಗರಜಾತಿಗಣತಿ ಸಮೀಕ್ಷೆ ವೈಜ್ಞಾನಿಕವಾಗಿ ಆಗಿರುವ ಮಾಹಿತಿ ಇದೆ. ಆದರೆ, ವಿಪಕ್ಷಗಳು ಜನರಲ್ಲಿ ಗೊಂದಲ ಸೃಷ್ಟಿಸಿ ರಾಜಕೀಯ ಮಾಡುತ್ತಿವೆ. ಹಾಗಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಮತ್ತೊಮ್ಮೆ ಜಾತಿಗಣತಿ ಮರು ಸಮೀಕ್ಷೆ ನಡೆಸಲು ಮನವಿ ಮಾಡಿದ್ದೇವೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ತಿಳಿಸಿದರು.ಬಿಡದಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ್ತೊಮ್ಮೆ ಜಾತಿಗಣತಿ ಸಮೀಕ್ಷೆ ಮಾಡುವುದರಿಂದ ಏನೂ ತಪ್ಪಾಗುವುದಿಲ್ಲ. ಮುಖ್ಯಮಂತ್ರಿಗಳನ್ನು ಒಪ್ಪಿಸಿ ಮರು ಸಮೀಕ್ಷೆ ಮಾಡಿಸುವಂತೆ ಮನವಿ ಮಾಡಿದ್ದೇವೆ ಎಂದರು.
ಜಾತಿಗಣತಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗಬೇಕು. ಜನರಲ್ಲಿ ಇರುವ ಗೊಂದಲಗಳು ಬಗೆ ಹರಿಯಬೇಕು. ವಿರೋಧ ಪಕ್ಷದವರ ಆರೋಪಕ್ಕೆ ಅಂತಿಮ ತೆರೆ ಎಳೆಯಬೇಕು. ಇದಕ್ಕಾಗಿ ಮರುಸಮೀಕ್ಷೆಗೆ ಒತ್ತಾಯ ಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು.ಈ ಹಿಂದೆ ಸಮೀಕ್ಷೆ ಮಾಡಿದಾಗ ಅರಿವು ಇರಲಿಲ್ಲ. ಮತ್ತೊಮ್ಮೆ ಸಮೀಕ್ಷೆ ಫಲಿಸಲಿದೆ ಅನಿಸುತ್ತಿದೆ. ಜನರ ಬಯಕೆಯಂತೆ ಸರ್ಕಾರ ಕೆಲಸ ಮಾಡಬೇಕು. ಜನರು ಕೂಡ ಮರು ಸಮೀಕ್ಷೆ ಬಯಸುತ್ತಿದ್ದಾರೆ. ಹಾಗಂತ ನಾವು ವಿರೋಧ ಮಾಡುತ್ತಿಲ್ಲ. ಜನರ ಬಯಕೆಗೆ ಮನ್ನಣೆ ಕೊಡಿ ಎಂದು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ ಎಂದರುನಮ್ಮ ಜನಾಂಗದವರನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲೆ ಇದೆ. ಹೀಗಾಗಿ ಒಕ್ಕಲಿಗ ಶಾಸಕರ ಸಭೆ ಮಾಡಿದ್ದೇವೆ. ನಾವು ಜಾತಿಗಣತಿ ಜಾರಿ ಮಾಡಬೇಡಿ ಎನ್ನುತ್ತಿಲ್ಲ. ಸಮೀಕ್ಷೆ ತಪ್ಪಾಗಿದೆ, ಮತ್ತೊಮ್ಮೆ ಮರು ಸಮೀಕ್ಷೆ ಮಾಡಿ ಎನ್ನುತ್ತಿದ್ದೇವೆ. ಸರಿಯಾದ ಅಂಕಿಅಂಶ ಹೊರಗೆ ಬರಲಿ ಎಂದು ತಿಳಿಸಿದರು.
ಜಾತಿಗಣತಿ ಅಲ್ಲ, ದ್ವೇಷದ ಗಣತಿ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಾಲಕೃಷ್ಣ, ಕುಮಾರಸ್ವಾಮಿ ಮಾತಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಅವರು ಏನೇ ಮಾತನಾಡಿದರು ರಾಜಕೀಯವಾಗಿ ಮಾತನಾಡುತ್ತಾರೆ. ಅವರೇ ಸಿಎಂ ಆದಾಗ ಇದನ್ನು ಕ್ಲೋಸ್ ಮಾಡಿಸಬಹುದಿತ್ತು. ಪ್ರತಿಯೊಂದು ಮಾತು ರಾಜಕೀಯ ಪ್ರೇರಿತವಾಗಿರುತ್ತದೆ. ಸಿಎಂ ಹಾಗೂ ಡಿಸಿಎಂ ಅವರನ್ನು ಟಾರ್ಗೆಟ್ ಮಾಡಿ ಮಾತನಾಡುತ್ತಾರೆ. ಅವರ ಮಾತಿಗೆ ಹೆಚ್ಚು ಅರ್ಥ ಕೊಡುವ ಅವಶ್ಯಕತೆ ಇಲ್ಲ ಎಂದು ಟಾಂಗ್ ನೀಡಿದರು.ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜು, ಕಾಂಗ್ರೆಸ್ ಮುಖಂಡರಾದ ಬೆಟ್ಟಸ್ವಾಮಿ, ಅಬ್ಬನಕುಪ್ಪೆ ರಮೇಶ್ ಮತ್ತಿತರರು ಇದ್ದರು.---------18ಕೆಆರ್ ಎಂಎನ್ 3.ಜೆಪಿಜಿಬಿಡದಿಯಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ ಸುದ್ದಿಗಾರರೊಂದಿಗೆ ಮಾತನಾಡಿದರು.-----