ದಲಿತ, ಕೂಲಿ ಕಾರ್ಮಿಕರಿಗೆ ಸಮುದಾಯ ಭವನಕ್ಕೆ ಮನವಿ: ವಸಂತಕುಮಾರ್‌

KannadaprabhaNewsNetwork |  
Published : Jul 30, 2025, 12:46 AM IST
ತರೀಕೆರೆಯಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರ ಸಭೆ | Kannada Prabha

ಸಾರಾಂಶ

ತರೀಕೆರೆ ಪಟ್ಟಣದ ಸುಂದರೇಶ್ ಬಡಾವಣೆ, ಗಾಳಿಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂಬರ್‌ 26ರಲ್ಲಿ 2.20 ಎಕರೆ ಖಾಲಿ ಜಮೀನಿದ್ದು ಈ ಭಾಗದಲ್ಲಿ ಅತಿ ಹೆಚ್ಚು ಕೂಲಿ ಕಾರ್ಮಿಕರು ವಾಸಿಸುತ್ತಿದ್ದು, ಸಭೆ ಸಮಾರಂಭ ಆಚರಿಸಲು ಯಾವುದೇ ಸಮುದಾಯ ಭವನ ಇರುವುದಿಲ್ಲ.

ತರೀಕೆರೆ: ತರೀಕೆರೆ ಪಟ್ಟಣದ ಸುಂದರೇಶ್ ಬಡಾವಣೆ, ಗಾಳಿಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂಬರ್‌ 26ರಲ್ಲಿ 2.20 ಎಕರೆ ಖಾಲಿ ಜಮೀನಿದ್ದು ಈ ಭಾಗದಲ್ಲಿ ಅತಿ ಹೆಚ್ಚು ಕೂಲಿ ಕಾರ್ಮಿಕರು ವಾಸಿಸುತ್ತಿದ್ದು, ಸಭೆ ಸಮಾರಂಭ ಆಚರಿಸಲು ಯಾವುದೇ ಸಮುದಾಯ ಭವನ ಇರುವುದಿಲ್ಲ. ಶೀಘ್ರ ಇಲ್ಲಿ ಅಂಬೇಡ್ಕರ್‌ ಸಮುದಾಯ ಭವನ ನಿರ್ಮಿಸಲು ಅಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ವಸಂತಕುಮಾರ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಈ ಭಾಗದ ಜನತೆಗೆ ಸಭೆ ಸಮಾರಂಭ ಆಚರಿಸಲು ಅಂಬೇಡ್ಕರ್ ಸಮುದಾಯ ಭವನದ ಅವಶ್ಯಕತೆ ಇರುವುದರಿಂದ ಸಂಬಂಧಪಟ್ಟ ತಾಲೂಕು ಅಡಳಿತದ ಅಧಿಕಾರಿಗಳಿಗೆ ಈ ಜಾಗ ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸಲು ಹಣ ಮೀಸಲಿರಿಸುವಂತೆ ಕೋರಲಾಗುವುದು. ಮುಂದಿನ ದಿನಗಳಲ್ಲಿ ಸಂಘಟನೆ ಬಲಿಷ್ಠಗೊಳಿಸಿ ಹೋರಾಟ ರೂಪಿಸುವ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಹಿರಿಯ ಸಲಹೆಗಾರ ಕೆ.ಶಂಕರನಾರಾಯಣ ಮಾತನಾಡಿ, ತರೀಕೆರೆ ತಾಲೂಕಿನಾದ್ಯಂತ ಕೆಲವೆಡೆ ದಲಿತರ ಭೂಮಿಯನ್ನು ಬಲಾಡ್ಯರು ಒತ್ತುವರಿ ಮಾಡಿದ್ದು ತಾಲೂಕು ಅಡಳಿತ ತೆರವಿನ ಕಾರ್ಯಾಚರಣೆಗೆ ಅಗತ್ಯ ಕ್ರಮ ಕೈಗೊಂಡು ದಲಿತರಿಗೆ ನ್ಯಾಯ ಕೊಡಿವ ಜೊತೆಗೆ ದಲಿತರಿಗೆ ಸರ್ಕಾರದಿಂದ ಸಿಗುವಂತಹ ಸೌಲಭ್ಯ ದೊರಕುವಲ್ಲಿ ಯಾವುದೇ ಸಮಸ್ಯೆ ಯಾಗದಂತೆ ನಮ್ಮ ಸಂಘದಿಂದ ಸಮರ್ಪಕವಾಗಿ ಸಿಗುವಂತೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ತಾಲೂಕು ದಲಿತ ಸಂಘರ್ಷ ಸಮಿತಿ ಮುಖಂಡ ಶಿವಲಿಂಗಪ್ಪ, ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿ ರಾಜ್ಯ ಉಪಾಧ್ಯಕ್ಷ ಜಯಸ್ವಾಮಿ (ಕಾರೆ) ಮಾತನಾಡಿದರು.

ತಾಲೂಕು ಸಂಘಟನಾ ಸಂಚಾಲಕರಾದ ಮಂಜುನಾಥ, ಟಿ.ರಮೇಶ, ಕೆ.ಆನಂದ, ತಿಮ್ಮಣ್ಣ ಮತ್ತಿತರರು ಭಾಗವಹಿಸಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ