ಅಡಕೆ, ಶುಂಠಿ ತೋಟಗಾರಿಕೆ ಬೆಳೆಯಾಗಿ ಘೋಷಿಸಲು ಮನವಿ

KannadaprabhaNewsNetwork |  
Published : Aug 12, 2025, 12:30 AM IST
ರೈತ ಮುಖಂಡರು ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಕೇಂದ್ರ ಸರ್ಕಾರದ ಫಸಲ್ ಬಿಮಾ ಯೋಜನೆಯಡಿ ವಿಮೆ ತುಂಬಲು ಈ ತಾಲೂಕಿನಲ್ಲಿ ಇವೆರಡು ಬೆಳೆಗಳಿಗೆ ಅವಕಾಶವಿರುವುದಿಲ್ಲ. ಆದ್ದರಿಂದ ಈ ತಾಲೂಕುಗಳಿಗೆ ಅಡಕೆ ಹಾಗೂ ಶುಂಠಿ ಬೆಳೆಗಳನ್ನು ತೋಟಗಾರಿಕೆ ಬೆಳೆಗಳನ್ನಾಗಿ ಘೋಷಿಸಬೇಕೆಂದು ಮನವಿ ಮಾಡಲಾಯಿತು.

ಹಾವೇರಿ: ಜಿಲ್ಲೆಯ ಹಾವೇರಿ, ರಾಣಿಬೆನ್ನೂರು ಹಾಗೂ ಸವಣೂರು ತಾಲೂಕಗಳಲ್ಲಿ ಬೆಳೆಯುವ ಅಡಕೆ, ಶುಂಠಿ ಬೆಳೆಗಳನ್ನು ತೋಟಗಾರಿಕೆ ಬೆಳೆಗಳನ್ನಾಗಿ ಘೋಷಿಸಬೇಕೆಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯ ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮನವಿ ಮಾಡಿದ್ದಾರೆ.ಹಾವೇರಿ ತಾಲೂಕಿನಲ್ಲಿ ವರದಾ ಹಾಗೂ ಧರ್ಮಾ ಎಂಬ ಎರಡು ನದಿಗಳು ಹರಿದಿವೆ. ಅಲ್ಲಲ್ಲಿ ಚೆಕ್ ಡ್ಯಾಂ ಸೌಲಭ್ಯವಿದೆ. ಬೋರ್‌ವೆಲ್‌ಗಳಲ್ಲಿ ಸಾಕಷ್ಟು ನೀರಿದೆ. ತಾಲೂಕಿನ ಅನೇಕ ರೈತರು ಅಡಕೆ ಮತ್ತು ಶುಂಠಿ ಬೆಳೆ ಬೆಳೆಯುತ್ತಾರೆ. ಇದಕ್ಕೆ ಸರ್ಕಾರದ ಯಾವುದೇ ಸಹಾಯಧನ ಪಡೆದುಕೊಳ್ಳಲು ಇಲ್ಲಿಯ ರೈತರಿಗೆ ಅವಕಾಶವಿಲ್ಲ. ಅಂತಹ ರೈತರಿಗೆ ಬಹಳಷ್ಟು ಅನ್ಯಾಯವಾಗುತ್ತಿದೆ. ಅಧಿಕಾರಿಗಳು ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೈ ಚೆಲ್ಲಿ ಕುಳಿತಿದ್ದಾರೆ.

ಜಿಲ್ಲೆಯ ಎಲ್ಲ ತಾಲೂಕುಗಳನ್ನು ತೋಟಗಾರಿಕೆ ಇಲಾಖೆಗೆ ಸೇರಿಸಿ ಇಲಾಖೆ ವತಿಯಿಂದ ಸಿಗುವ ಸೌಲಭ್ಯಗಳನ್ನು ಒದಗಿಸಬೇಕು. ಕೇಂದ್ರ ಸರ್ಕಾರದ ಫಸಲ್ ಬಿಮಾ ಯೋಜನೆಯಡಿ ವಿಮೆ ತುಂಬಲು ಈ ತಾಲೂಕಿನಲ್ಲಿ ಇವೆರಡು ಬೆಳೆಗಳಿಗೆ ಅವಕಾಶವಿರುವುದಿಲ್ಲ. ಆದ್ದರಿಂದ ಈ ತಾಲೂಕುಗಳಿಗೆ ಅಡಕೆ ಹಾಗೂ ಶುಂಠಿ ಬೆಳೆಗಳನ್ನು ತೋಟಗಾರಿಕೆ ಬೆಳೆಗಳನ್ನಾಗಿ ಘೋಷಿಸಬೇಕೆಂದು ಮನವಿ ಮಾಡಿದರು.ರೈತ ಮುಖಂಡರಾದ ಪರಮೇಶಪ್ಪ ಬತ್ತಿಕೊಪ್ಪ, ಬಸಲಿಂಗಪ್ಪ ನರಗುಂದ, ಮುತ್ತಣ್ಣ ಗುಡಗೇರಿ, ಅಬ್ದುಲ್‌ ಖಾದರ ದಿನ್ನಿ ಸೇರಿದಂತೆ ಇತರರು ಇದ್ದರು. ವಿದ್ಯಾರ್ಥಿಗಳು ಉತ್ತಮ ಕೌಶಲ್ಯ ಬೆಳೆಸಿಕೊಳ್ಳಲಿ

ರಾಣಿಬೆನ್ನೂರು: ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಉತ್ತಮ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.ಸ್ಥಳೀಯ ಕೆಎಲ್ಇ ಸಂಸ್ಥೆಯ, ರಾಜ- ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಹಾಗೂ ಹುಬ್ಬಳ್ಳಿಯ ದೇಶಪಾಂಡೆ ಸ್ಕಿಲ್ಲಿಂಗ್ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ಕಿಲ್‌ಪ್ಲಸ್- 4 ಲ್ಯಾಬ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಸದ್ಯದ ಮಾರುಕಟ್ಟೆಯ ಅವಶ್ಯಕತೆಗಳನ್ನು ಅರಿತು ಆಧುನಿಕ ತಂತ್ರಜ್ಞಾನದ ಅಳವಡಿಕೆ ಮಾಡಿಕೊಳ್ಳಬೇಕು. ಇನ್ನು ಸರ್ಕಾರದ ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕು. ವಿದ್ಯಾರ್ಥಿನಿಯರ ಬದುಕಿನಲ್ಲಿ ಶಿಷ್ಟಾಚಾರ, ಸಮಯಪಾಲನೆ ಕೌಶಲ್ಯಗಳ ಮಹತ್ವ ಅವಶ್ಯವಾಗಿದೆ ಎಂದರು.

ಹುಬ್ಬಳ್ಳಿಯ ದೇಶಪಾಂಡೆ ಸ್ಕಿಲ್ಲಿಂಗ್ ಸಿಇಒ ಪಿ.ಎನ್. ನಾಯಕ ಮಾತನಾಡಿ, ಕೌಶಲ್ಯಯುಕ್ತ ಮತ್ತು ಕೌಶಲ್ಯರಹಿತ ಅಭ್ಯರ್ಥಿಗಳ ನಡುವಿನ ವ್ಯತ್ಯಾಸಗಳ ಕುರಿತು ತಿಳಿಸಿದರು.

ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ವಿ.ಪಿ. ಲಿಂಗನಗೌಡರ ಅಧ್ಯಕ್ಷತೆ ವಹಿಸಿದ್ದರು. ಪ್ರಾ. ಪ್ರೊ. ನಾರಾಯಣ ನಾಯಕ ಎ., ಪ್ರೊ. ಶಶಿಕಿರಣ, ನೇತ್ರಾವತಿ ಕಮ್ಮಾರ, ವಿದ್ಯಾಶ್ರೀ ದಾಮೋದರ, ಪ್ರೊ. ನಾಗರಾಜ ಗವಿಯಪ್ಪನವರ, ಚನ್ನಬಸಪ್ಪ ಗುದ್ಲಿ, ಜಿಲ್ಲೆಯ ವಿವಿಧ ಕಾಲೇಜುಗಳ ಬೋಧಕ ಸಿಬ್ಬಂದಿ, ಸುಮಾರು 250 ಜನ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

PREV

Recommended Stories

ಬಿಡಿಸಿಸಿ ಬ್ಯಾಂಕ್‌ ಚುನಾವಣೆಗೆ ಶ್ರೀಕಾಂತ ಸ್ಪರ್ಧೆ
ಮೂಡಲಗಿ ಬ್ಯಾಂಕ್‌ನ 3 ಶಾಖೆಗಳು ಪ್ರಗತಿ ಪಥದತ್ತ