ಯಲಿವಾಳ ಕಂದಾಯ ಗ್ರಾಮವಾಗಿ ಘೋಷಿಸಲು ಜಿಲ್ಲಾಧಿಕಾರಿಗೆ ಮನವಿ

KannadaprabhaNewsNetwork |  
Published : Sep 19, 2025, 01:01 AM ISTUpdated : Sep 19, 2025, 01:02 AM IST
ಫೋಟೋ : 17ಎಚ್‌ಎನ್‌ಎಲ್3 | Kannada Prabha

ಸಾರಾಂಶ

ಯಲಿವಾಳ ಗ್ರಾಮದ ಜನತೆ ವಾಸಿಸುವ ಯಲಿವಾಳ ಬಳಿಯ ಮರೆಮ್ಮನ ಪ್ಲಾಟ್‌ನಲ್ಲಿ 50 ಕುಟುಂಬಗಳ 250 ಜನ ವಸತಿ ಇದೆ. ಇದು ಕಂದಾಯ ಗ್ರಾಮ ಎಂದು ಘೋಷಣೆ ಆಗದ ಕಾರಣ ಸರ್ಕಾರದ ಎಲ್ಲ ಸೌಲಭ್ಯಗಳಿಂದ ಇಲ್ಲಿನ ಜನ ವಂಚಿತರಾಗಿದ್ದಾರೆ.

ಹಾನಗಲ್ಲ: ತಾಲೂಕಿನ ಯಲಿವಾಳ ಗ್ರಾಮದ ಬಳಿಯ ಮರೆಮ್ಮನ ಪ್ಲಾಟ್ ಕಂದಾಯ ಗ್ರಾಮವಾಗಿ ಘೋಷಿಸುವ ಮೂಲಕ ಸರ್ಕಾರದ ಸೌಲಭ್ಯಗಳು ದೊರೆಯುವಂತೆ ಉಪಕರಿಸಬೇಕು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರನ್ನು ಒತ್ತಾಯಿಸಿದರು.

ಬುಧವಾರ ಹಾನಗಲ್ಲಿಗೆ ಆಗಮಿಸಿದ ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಿದ ಅವರು, ಯಲಿವಾಳ ಗ್ರಾಮದ ಜನತೆ ವಾಸಿಸುವ ಯಲಿವಾಳ ಬಳಿಯ ಮರೆಮ್ಮನ ಪ್ಲಾಟ್‌ನಲ್ಲಿ 50 ಕುಟುಂಬಗಳ 250 ಜನ ವಸತಿ ಇದೆ. ಇದು ಕಂದಾಯ ಗ್ರಾಮ ಎಂದು ಘೋಷಣೆ ಆಗದ ಕಾರಣ ಸರ್ಕಾರದ ಎಲ್ಲ ಸೌಲಭ್ಯಗಳಿಂದ ಇಲ್ಲಿನ ಜನ ವಂಚಿತರಾಗುತ್ತಿದ್ದೇವೆ. ಸ್ವಂತ ಜಾಗ ಇಲ್ಲದೆ ನಿರ್ಗತಿಕರಂತೆ ಬದುಕುತ್ತಿದ್ದೇವೆ. ಇಲ್ಲಿ ವಾಸಿಸುವವರಿಗೆ ಯಾವುದೇ ಭದ್ರತೆಯೂ ಇಲ್ಲ. ಕಂದಾಯ ಗ್ರಾಮ ಎಂದು ಘೋಷಣೆ ಮಾಡುವ ಮೂಲಕ ನಮ್ಮನ್ನು ಸಮಾಜದ ಮುನ್ನೆಲೆಗೆ ಬರುವಂತೆ ಸಹಕರಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಇಲ್ಲಿನ 1, 4, 5 ಮತ್ತು 6ನೇ ರಿ.ಸ. ನಂಬರ್‌ನಲ್ಲಿ ಜನರು ವಾಸಿಸುತ್ತಿದ್ದಾರೆ. ಆದರೆ ಹಾನಗಲ್ಲ ತಹಸೀಲ್ದಾರರ ಮೂಲಕ ತಮ್ಮ ಕಚೇರಿಗೆ ಬಂದ ಪ್ರಸ್ತಾವನೆಯಲ್ಲಿ ಕೇವಲ 4ನೆ ಸರ್ವೆ ನಂಬರ್‌ನಲ್ಲಿನ ಮನೆಗಳನ್ನು ಮಾತ್ರ ಪರಿಗಣಿಸಿ ವರದಿ ಸಲ್ಲಿಸಲಾಗಿದೆ. ಇದನ್ನು ನಾವು ತಿರಸ್ಕರಿಸಿದ್ದು, ನಾವು ತಮ್ಮ ಗಮನಕ್ಕೆ ತಂದ ಎಲ್ಲ ಸರ್ವೇ ನಂಬರ್‌ನಲ್ಲಿ ವಾಸಿಸುವ ಮನೆಗಳನ್ನು ಪರಿಗಣಿಸಿ ಕಂದಾಯ ಗ್ರಾವವನ್ನಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಹಾನಗಲ್ಲ ತಹಸೀಲ್ದಾರ್ ಎಸ್. ರೇಣುಕಾ ಇದ್ದರು. ಮುಖಂಡರಾದ ರುದ್ರಪ್ಪ ಬಳಿಗಾರ, ಚನ್ನಬಸಪ್ಪ ಹಾವಣಗಿ, ಬಸವಂತಪ್ಪ ಮೆಳ್ಳಳ್ಳಿ, ಜಗದೀಶ ಪಾಟೀಲ, ಚಂದ್ರ ಬೈಲವಾಳ, ಫಕ್ಕೀರೇಶ ಶೇತಸನದಿ, ಮಂಜು ಹುನಗುಂದ, ಕೃಷ್ಣ ನಾಗೋಜಿ, ಮೃತ್ಯುಂಜಯ ಕೊಟಗುಣಸಿಮಠ, ಗುಡ್ಡಪ್ಪ ಕುರುಬರ, ಖಾದರಸಾಬ ಜಂಗ್ಲಿ ಇದ್ದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ