ಕಾರವಾರ: ಕಾರವಾರ ತಾಲೂಕಿನ ಟ್ಯಾಕ್ಸಿ ಯುನಿಯನ್‌ನವರು ಬಹುದಿನಗಳಿಂದ ಗೋವಾದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಅವರು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಅವರ ಜತೆ ಚರ್ಚಿಸಿ, ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿದರು.
ಐಸಿಎಸ್ಇ ಪಠ್ಯಪುಸ್ತಕದಲ್ಲಿ ಶಿಕ್ಷಕ ಶ್ರೀಧರ ಶೇಟ್‌ರ ಕವನ
ಭಟ್ಕಳ: ಶಿರಾಲಿಯ ಶಿಕ್ಷಕ, ಸಾಹಿತಿ ಮತ್ತು ಕವಿಯೂ ಆಗಿರುವ ಶ್ರೀಧರ ಶೇಟ್ ಅವರು ರಚಿಸಿದ ಮಕ್ಕಳ ಕವಿತೆಯನ್ನು ಐಸಿಎಸ್ಇ ಮತ್ತು ಸಿಬಿಎಸ್‌ಇ ಪಠ್ಯ ಪುಸ್ತಕದಲ್ಲಿ ಅಳವಡಿಸಿಕೊಳ್ಳಲಾಗಿದೆ.ಆಂಗ್ಲ ಮಾಧ್ಯಮದ ದ್ವಿತೀಯ ಮತ್ತು ತೃತೀಯ ಭಾಷೆ ಕನ್ನಡದ ಪಠ್ಯಪುಸ್ತಕದಲ್ಲಿ ಇವರ "ಬೇಲಿಯ ಹೂವು " ಕವಿತೆಯನ್ನು ಬಳಸಿಕೊಳ್ಳಲಾಗಿದೆ. ನವದೆಹಲಿಯ ಮಾಡರ್ನ್ ಪಬ್ಲಿಷರ್ಸ್‌ನವರು ಈ ವರ್ಷ ಕನ್ನಡ ಚಂದನ ಹೆಸರಿನಲ್ಲಿ ಕನ್ನಡ ಪಠ್ಯಪುಸ್ತಕ ಸರಣಿಯನ್ನು ಪ್ರಕಾಶನ ಮಾಡಿದ್ದಾರೆ.ಈ ಸರಣಿಯ ಐದನೇ ತರಗತಿಯ ಪಠ್ಯ ಪುಸ್ತಕದಲ್ಲಿರುವ ಈ ಕವಿತೆಯನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಲಿದ್ದಾರೆ. ಶ್ರೀಧರ ಶೇಟ್ ಅವರು ಜಾಲಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಅಂಕಣಕಾರರೂ, ಚಿತ್ರ ಕಲಾವಿದರೂ ಮತ್ತು ಉತ್ತಮ ಕಾರ್ಯಕ್ರಮ ನಿರೂಪಕರಾಗಿಯೂ ಪ್ರಸಿದ್ಧಿಯನ್ನು ಪಡೆದಿದ್ದಾರೆ.