ಕನ್ನಡಪ್ರಭ ವಾರ್ತೆ ಮೈಸೂರು
ಪರಿಶಿಷ್ಟ ಜಾತಿಯ ಪರ್ಯಾಯ ಪದಗಳಾದ ಕಿಳ್ಳೇಕ್ಯಾತರ, ಕಟುಬ, ಕಟುಬರ, ಬುಂಡೆಬೆಸ್ತ, ಜಲಗಾರ ಜಾತಿಗಳನ್ನು ಕುರಿತು ಡಾ.ಎಂ.ಆರ್. ಗಂಗಾಧರ್ ಅವರು ಮಾಡಿರುವ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಯಥಾವತ್ತಾಗಿ ಜಾರಿ ಮಾಡುವಂತೆ ಸಚಿವರಿಗೆ ಮನವಿ ನೀಡಿದರು.
ಅಹವಾಲನ್ನು ಸ್ವೀಕರಿಸಿ, ಅವರ ಸಮಸ್ಯೆಗಳನ್ನು ಆಲಿಸಿದ ಸಚಿವರು ಬಳಿಕ ಮಾತನಾಡಿ, ಕುಲಶಾಸ್ತ್ರೀಯ ಅಧ್ಯಯನ ವರದಿ ಕುರಿತು ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ, ಆಯುಕ್ತರು ಹಾಗೂ ಹಿರಿಯ ಸಲಹೆಗಾರರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಸಂಘದ ಅಧ್ಯಕ್ಷ ಕೆ. ನಾಗಪ್ಪ, ಪದಾಧಿಕಾರಿಗಳಾದ ಸಣ್ಣವೀರಣ್ಣ ದೊಡ್ಡಮನಿ, ಪಿ. ರಾಮಯ್ಯ, ಮಹೆಂದರ್ ರಾವ್ ಸಾಸನಿಕ್, ಮುಖಂಡರಾದ ವಿಲಾಸ್ ಕುಮಾರ್ ಸಿಂಧೆ, ಪುಡ್ಲಿಕಪ್ಪ ಕಿಳ್ಳೇಕ್ಯಾತರ, ಹುಣಸೂರು ಸಣ್ಣಸ್ವಾಮಿ, ರಾಜಣ್ಣ, ಶಿವಣ್ಣ, ಅಣ್ಣಪ್ಪ ಮೊದಲಾದವರು ಇದ್ದರು.