ಶಿಥಿಲ ಸರ್ಕಾರಿ ಕಟ್ಟಡ ದುರಸ್ತಿಗೆ ಶಾಸಕಗೆ ಮನವಿ

KannadaprabhaNewsNetwork |  
Published : Jun 04, 2025, 02:14 AM IST
ಫೋಟೋ: ೩ಪಿಟಿಆರ್-ಮನವಿಶಾಸಕ ಅಶೋಕ್‌ ರೈ ಅವರಿಗೆ ಮನವಿ ಸಲ್ಲಿಸಲಾಯಿತು | Kannada Prabha

ಸಾರಾಂಶ

ಪಾಣಾಜೆ ಆರ್ಲಪದವು ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೆಯ ಕಟ್ಟಡಗಳು ತೀರಾ ಶಿಥಿಲ ಅವಸ್ತೆಯಲ್ಲಿದ್ದು ಅದನ್ನು ದುರಸ್ತಿಪಡಿಸಿ ಉಪಯೋಗ ಯೋಗ್ಯವಾಗಿ ಮಾಡಬೇಕು ಎಂದು ಆಗ್ರಹಿಸಿ ಸಂಘಟನೆಗಳ ಪ್ರಮುಖರು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಪಾಣಾಜೆ ಆರ್ಲಪದವು ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೆಯ ಕಟ್ಟಡಗಳು ತೀರಾ ಶಿಥಿಲ ಅವಸ್ತೆಯಲ್ಲಿದ್ದು ಅದನ್ನು ದುರಸ್ತಿಪಡಿಸಿ ಉಪಯೋಗ ಯೋಗ್ಯವಾಗಿ ಮಾಡಬೇಕು ಎಂದು ಆಗ್ರಹಿಸಿ ಮಂಗಳವಾರ ಗಡಿನಾಡ ಶ್ರಯೋಭಿವೃದ್ಧಿ ಟ್ರಸ್ಟ್ ಮತ್ತು ಪಾಣಾಜೆ ನಾಗರಿಕ ಸಮಿತಿ ವತಿಯಿಂದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮನವಿ ಸಲ್ಲಿಸಲಾಯಿತು. ಪುತ್ತೂರು ತಾಲೂಕು ಗಡಿನಾಡ ಪ್ರದೇಶವಾದ ಪಾಣಾಜೆ ಅರ್ಲಪದವಿನಲ್ಲಿ ಹಳೆಯ ಕಾಲದಿಂದಲೇ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರವು ಕಾರ್ಯಾಚರಿಸುತ್ತಾ ಇದೆ. ಇದೀಗ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ, ಸುಮಾರು ರು. ೧೨ ಕೋಟಿ ವೆಚ್ಚದಲ್ಲಿ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಅದರೆ ಅಲ್ಲಿರುವ ಸುಮಾರು ೭ - ೮ ಆಸ್ಪತ್ರೆ ಕ್ವಾಟ್ರಸ್ ಮತ್ತು ಇತರ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು ಬೀಳುವ ಸ್ಥಿತಿಯಲ್ಲಿದೆ. ಅಲ್ಲದೆ ಸದ್ರಿ ಕಟ್ಟಡಗಳ ಸುತ್ತ ಕಾಡು ಬೆಳೆದು ಮುಚ್ಚಿ ಹೋಗಿರುತ್ತದೆ ಎಂದು ಗಮನ ಸೆಳೆಯಲಾಗಿದೆ.

ಇದನ್ನು ಸರಿ ಪಡಿಸಿದಲ್ಲಿ ಆಸ್ಪತ್ರೆಗೆ ಸಂಬಂಧಪಟ್ಟ ಸಿಬ್ಬಂದಿಗೆ ವಸತಿ ವ್ಯವಸ್ಥೆ ಹಾಗೂ ಇನ್ನಿತರ ಉಪಯೋಗಿ ಕಾರ್ಯಕ್ಕೆ ಕಟ್ಟಡಗಳನ್ನು ಬಳಸಬಹುದು. ಈ ಹಿನ್ನೆಲೆಯಲ್ಲಿ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳಪಟ್ಟ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಅತೀ ಶೀಘ್ರವೇ ಸರಿ ಪಡಿಸಿ ಉಪಯೋಗ ಯೋಗ್ಯ ಕಟ್ಟಡಗಳನ್ನಾಗಿ ಮಾಡಿ ಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು, ಪಾಣಾಜೆ ನಾಗರಿಕ ಸಮಿತಿ ಅಧ್ಯಕ್ಷ ಬಾಬು ರೈ ಕೋಟೆ, ಪಾಣಾಜೆ ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣ ನಾಯಕ್ ಅಪಿನಿಮೂಲೆ, ಪಾಣಾಜೆ ಕಾಂಗ್ರೆಸ್ ವಲಯ ಅಧ್ಯಕ್ಷ ಸದಾನಂದ ನಾಯ್ಕ ಭರಣ್ಯ ಮುಖಂಡರಾದ ಅದ್ರು ಯಾನೆ ಅಬ್ದುಲ್ ಅಝೀಝ್ ಬೊಳ್ಳಿಂಬಲ, ಮುಹಮ್ಮದ್ ಕುಂಞ ಬೊಳ್ಳಿಂಬಲ ಮತ್ತಿತರರು ಇದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್