ಗ್ರಾಮದ ಪಂಚಾಯ್ತಿ ವ್ಯಾಪ್ತಿಯ ಕಾನನ ಕೊಪ್ಪಲು ಗ್ರಾಮದಲ್ಲಿ ಅಂಗನವಾಡಿಗೆ ನೂತನ ಕಟ್ಟಡದ ಅವಶ್ಯಕತೆ ಇತ್ತು. ಈ ನಿಟ್ಟಿನಲ್ಲಿ ಕಾನನ ಕೊಪ್ಪಲು ಗ್ರಾಮದ ಹಣದ ಟಿಎಸ್‌ಪಿ ಮತ್ತು ಎಸ್‌ಸಿಪಿ ಅಡಿಯಲ್ಲಿ ೨೦ ಲಕ್ಷ ರು. ಗಳ ಅಂದಾಜು ವೆಚ್ಚದಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಶಿಶು ಮಹಿಳಾ ಮಕ್ಕಳ ಕಲ್ಯಾಣ ತಾಲೂಕು ಯೋಜನಾಧಿಕಾರಿ ವೆಂಕಟೆಶ್ ಮಂಗಳವಾರ ಕಾನನ ಕೊಪ್ಪಲು ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿರುವ ಸ್ಥಳಕ್ಕೆ ಭೇಟಿ ನೀಡಿ ಜಾಗವನ್ನು ಜೆಸಿಬಿ ಮೂಲಕ ಸಮತಟ್ಟ ಕಾರ್ಯವನ್ನು ಖುದ್ದು ವೀಕ್ಷಣೆ ಮಾಡಿದರು.
ಕನ್ನಡಪ್ರಭ ವಾರ್ತೆ ಬಸವಾಪಟ್ಟಣ
ಗ್ರಾಮದ ಪಂಚಾಯ್ತಿ ವ್ಯಾಪ್ತಿಯ ಕಾನನ ಕೊಪ್ಪಲು ಗ್ರಾಮದಲ್ಲಿ ಅಂಗನವಾಡಿಗೆ ನೂತನ ಕಟ್ಟಡದ ಅವಶ್ಯಕತೆ ಇತ್ತು. ಈ ನಿಟ್ಟಿನಲ್ಲಿ ಕಾನನ ಕೊಪ್ಪಲು ಗ್ರಾಮದ ಹಣದ ಟಿಎಸ್‌ಪಿ ಮತ್ತು ಎಸ್‌ಸಿಪಿ ಅಡಿಯಲ್ಲಿ ೨೦ ಲಕ್ಷ ರು. ಗಳ ಅಂದಾಜು ವೆಚ್ಚದಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಅರಕಲಗೂಡು ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಪ್ರಕಾಶ್ ಅಲ್ಲದೆ ಶಿಶು ಮಹಿಳಾ ಮಕ್ಕಳ ಕಲ್ಯಾಣ ತಾಲೂಕು ಯೋಜನಾಧಿಕಾರಿ ವೆಂಕಟೆಶ್ ಮಂಗಳವಾರ ಕಾನನ ಕೊಪ್ಪಲು ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿರುವ ಸ್ಥಳಕ್ಕೆ ಭೇಟಿ ನೀಡಿ ಜಾಗವನ್ನು ಜೆಸಿಬಿ ಮೂಲಕ ಸಮತಟ್ಟ ಕಾರ್ಯವನ್ನು ಖುದ್ದು ವೀಕ್ಷಣೆ ಮಾಡಿದರು. ಇದೇ ವೇಳೆ ಪಿಆರ್‌ಐಜೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಮೇಶ್, ಬಸವಾಪಟ್ಟಣ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ, ಕೊಣನೂರು ಪೋಲಿಸ್ ಠಾಣೆ ಸಿಬ್ಬಂದಿ ವರ್ಗದವರು ಅಲ್ಲದೆ ಅಂಗನವಾಡಿ ಕಾರ್ಯಕರ್ತೆ ಸ್ವಾತಿ, ಗ್ರಾಮ ಸಹಾಯಕ ಪುಟ್ಟಸ್ವಾಮಿ, ಸಾರ್ವಜನಿಕರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.