ಮಾವು ಬೆಳೆಗಾರರಿಗೆ ನಷ್ಟ ಪರಿಹಾರ ನೀಡಲು ಮನವಿ

KannadaprabhaNewsNetwork |  
Published : May 05, 2026, 02:00 AM IST
4ಕೆಜಿಎಫ್‌3 | Kannada Prabha

ಸಾರಾಂಶ

ಅತಿವೃಷ್ಟಿಯಿಂದ ಬೆಳೆ ನಷ್ಟವಾಗಿದ್ದು, ಮಾವು ಬೆಳೆದ ರೈತರಿಗೆ ಕನಿಷ್ಟ ಪಕ್ಷ ಎಕರೆಗೆ ೫೦ ಸಾವಿರ ನಷ್ಟ ಪರಿಹಾರವನ್ನು ಸರಕಾರ ನೀಡಬೇಕೆಂದು ಮನವಿ ಮಾಡಿದರು.

ಕೆಜಿಎಫ್:

ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆ ಬಿರುಗಾಳಿ ಮತ್ತು ಅಲ್ಲಿಕಲ್ಲು ಮಳೆಯಿಂದಾಗಿ ತಾಲೂಕಿನಲ್ಲಿ ೫೦೦ ಎಕರೆ ಮಾವು ಮತ್ತು ಬಾಳೆ ಬೆಳೆಗಳು ನಷ್ಟವಾಗಿದ್ದು, ರೈತರು ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಮಳೆಯಿಂದ ನಷ್ಟಕ್ಕೆ ಒಳಗಾಗಿರುವ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡುವಂತೆ ತಾಲೂಕು ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘ ತಹಸೀಲ್ದಾರ್ ಭರತ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಅಭಿಲಾಷ ರೆಡ್ಡಿ ಮಾತನಾಡಿ, ಕ್ಯಾಸಂಬಳ್ಳಿ ಹೋಬಳಿ ಜಕ್ಕರಸಕುಪ್ಪ, ಕಂಗಾಂಡ್ಲಹಳ್ಳಿ, ಶ್ರೀನಿವಾಸಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿ ಸೇರಿದಂತೆ ತಾಲೂಕಿನ ವಿವಿಧ ಪಂಚಾಯಿತಿಗಳಲ್ಲಿ ಸರಿ ಸುಮಾರು ೨ ಸಾವಿರ ಎಕರೆ ಪ್ರದೇಶದಲ್ಲಿ ಮಾವು ಬೆಳೆ ಇದ್ದು ೪ ಸಾವಿರ ಕುಟುಂಬಗಳು ಮಾವು ಬೆಳೆಯನ್ನೇ ಅವಲಂಭಿತರಾಗಿದ್ದಾರೆ.

ಹಿಂದೆ ಮಾವು ಬೆಳೆಯನ್ನು ಖಾಸಗಿ ವ್ಯಕ್ತಿಗಳಿಗೆ ಗುತ್ತಿಗೆ ನೀಡುತ್ತಿದ್ದರು. ಇತ್ತೀಚೆಗೆ ರೈತರೇ ನಿರ್ವಹಣೆ ಮಾಡುತ್ತಿದ್ದು ಪ್ರತಿ ಎಕರೆ ನಿರ್ವಹಣೆಗಾಗಿ ಕನಿಷ್ಟ ಪಕ್ಷ ೫೦ ಸಾವಿರ ರು.ಗಳು ವೆಚ್ಚವಾಗಲಿದೆ. ಇದೀಗ ಅತಿವೃಷ್ಟಿಯಿಂದ ಬೆಳೆ ನಷ್ಟವಾಗಿದ್ದು, ಮಾವು ಬೆಳೆದ ರೈತರಿಗೆ ಕನಿಷ್ಟ ಪಕ್ಷ ಎಕರೆಗೆ ೫೦ ಸಾವಿರ ನಷ್ಟ ಪರಿಹಾರವನ್ನು ಸರಕಾರ ನೀಡಬೇಕೆಂದು ಮನವಿ ಮಾಡಿದರು.ಈಗಾಗಲೇ ಕಂದಾಯ ಅಧಿಕಾರಿಗಳು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು ವಾಸ್ತವಂಶ ಪರಿಸ್ಥಿತಿಯನ್ನು ಸರ್ಕಾರಕ್ಕೆ ನೀಡಬೇಕು. ಸರ್ಕಾರ ರೈತರ ಸಂಕಟಕ್ಕೆ ಬರದಿದ್ದಾರೆ ಹೋರಾಟಕ್ಕೆ ಮಾಡಲು ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.ಈ ವೇಳೆ ಮುಖಂಡರಾದ ವಕೀಲ ರಾಮಚಂದ್ರ ಹಾಗೂ ಇತರರು ಹಾಜರಿದ್ದರು. ೪ಕೆಜಿಎಫ್೩

ಮಾವು ಬೆಳೆಗಾರರಿಗೆ ನಷ್ಟ ಪರಿಹಾರ ವಿತರಿಸಬೇಕು ಎಂದು ಮನವಿ ಪತ್ರವನ್ನು ತಹಸೀಲ್ದಾರ್ ಭರತ್ ಅವರಿಗೆ ಸಲ್ಲಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮದ್ಯ ಮಾರಾಟ: 13 ವರ್ಷದ ದಾಖಲೆ ಉಡೀಸ್‌!
ಆರೋಗ್ಯ ಇಲಾಖೆ ಅಧಿಕಾರಿ, ನೌಕರರ ನಿಸ್ವಾರ್ಥ ಸೇವೆ ಸ್ಮರಿಸಬೇಕು: ಕೆ.ಎಸ್.ಆನಂದ್