ಸ್ಮಶಾನದ ತಡೆಗೋಡೆ, ಕೆರೆ ದುರಸ್ತಿಗೆ ಮನವಿ

KannadaprabhaNewsNetwork |  
Published : Jul 04, 2025, 11:53 PM IST
4ಎಚ್‌ವಿಆರ್3- | Kannada Prabha

ಸಾರಾಂಶ

ಚೆನ್ನೂರು ಗ್ರಾಮದ ಸ್ಮಶಾನಕ್ಕೆ ಹೋಗುವ ದಾರಿಯ ತಡೆಗೋಡೆಯು ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಕೊಚ್ಚಿಕೊಂಡು ಹೋಗಿದೆ. ಇದರಿಂದ ಸ್ಮಶಾನಕ್ಕೆ ಹೋಗಲು ಗ್ರಾಮಸ್ಥರಿಗೆ ಸಮಸ್ಯೆಯಾಗುತ್ತಿದೆ.

ಹಾವೇರಿ: ತಾಲೂಕಿನ ಚೆನ್ನೂರು ಗ್ರಾಮದ ಸ್ಮಶಾನದ ತಡೆಗೋಡೆ ಹಾಗೂ ಕೊರಡೂರು ಗ್ರಾಮದ ಕರೆಕಟ್ಟಿ ಕೆರೆ ದುರಸ್ತಿಗೊಳಿಸುವಂತೆ ಒತ್ತಾಯಿಸಿ ಜಿಪಂ ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ ನೇತೃತ್ವದಲ್ಲಿ ಗ್ರಾಮಸ್ಥರು ಜಿಪಂ ಉಪಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು. ತಾಲೂಕಿನ ಚೆನ್ನೂರು ಗ್ರಾಮದ ಸ್ಮಶಾನಕ್ಕೆ ಹೋಗುವ ದಾರಿಯ ತಡೆಗೋಡೆಯು ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಕೊಚ್ಚಿಕೊಂಡು ಹೋಗಿದೆ. ಇದರಿಂದ ಸ್ಮಶಾನಕ್ಕೆ ಹೋಗಲು ಗ್ರಾಮಸ್ಥರಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ತಕ್ಷಣ ತಡೆಗೋಡೆ ನಿರ್ಮಾಣ ಮಾಡಬೇಕು.ಅದೇ ರೀತಿ ಕೊರಡೂರು ಗ್ರಾಮದಿಂದ ಇಚ್ಚಂಗಿ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಕಿತ್ತೂರು ಗ್ರಾಮದ ಸರಹದ್ದಿನಲ್ಲಿ ಇರುವ ಕರೆಕಟ್ಟಿಕೆರೆಯ ಒಡ್ಡು ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದ ಒಡೆದು ಕೆರೆಯಲ್ಲಿದ್ದ ನೀರು ಪೋಲಾಗುತ್ತಿದೆ. ಆದ್ದರಿಂದ ತಕ್ಷಣ ಕೆರೆ ಒಡ್ಡು ಹಾಕಿ ಪಿಚ್ಚಿಂಗ್‌ ಕಟ್ಟಿ ನೀರು ನಿಲ್ಲುವಂತೆ ಮಾಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ನೆಗಳೂರು ಜಿಪಂ ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ, ಎನ್.ಕೆ. ಮರೋಳ, ಕೆ.ಸಿ. ಕೋರಿ, ಪ್ರಭು ಗೌರಿಮನಿ, ಚೆನ್ನವೀರಸ್ವಾಮಿ ಹಾವೇರಿಮಠ, ಮುರುಗೇಶ ಅಂಗಡಿ, ಐ.ಜಿ. ಕೋರಿ, ಮಂಜು ದೊರೆ, ಪ್ರಲ್ಲಾದ್ ಪಾಟೀಲ, ರವಿ ಸವಣೂರು ಇದ್ದರು.ಹಸುವಿನ ಮೇಲೆ ಅನೈಸರ್ಗಿಕ ಲೈಂಗಿಕ ಕೃತ್ಯ: ಕೇಸ್‌ ದಾಖಲು

ಹಾನಗಲ್ಲ: ತಾಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮದ ಪಂಚಾಕ್ಷರಿ ಮಠದ ಎದುರು ನಿಂತಿದ್ದ ಹಸುವಿನ ಮೇಲೆ ವ್ಯಕ್ತಿಯೊಬ್ಬ ಲೈಂಗಿಕ ಕೃತ್ಯ ಎಸಗಿರುವ ಮೃಗೀಯ ಘಟನೆ ನಡೆದಿದೆ.ಖಾಸೀಮಸಾಬ್‌ ಇಮಾಮಸಾಬ್ ಡೊಳ್ಳೇಶ್ವರ ಎಂಬಾತನೇ ಹಸುವಿನ ಮೇಲೆ ಅನೈಸರ್ಗಿಕ ಲೈಂಗಿಕ ಕೃತ್ಯ ಎಸಗಿದ ವಿಕೃತ ಕಾಮಿಯಾಗಿದ್ದಾನೆ. ಜೂ. 30ರಂದು ಪವಿತ್ರವಾದ ಮಠದ ಮುಂದೆ ಗೋವಿನ ಮೇಲೆ ಲೈಂಗಿಕ ಕ್ರಿಯೆ ಎಸಗಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದ. ಗೋಮಾತೆಯ ಮೇಲೆ ಕ್ರೌರ್ಯ ಎಸಗಿ ಧಾರ್ಮಿಕ ಭಾವನೆಗೆ ಆಘಾತ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕುರಿತು ಜು. 3ರಂದು ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ