ಕುದೂರು: ಕುದೂರು ಗ್ರಾಮದಲ್ಲಿ ಶನಿವಾರ ಸಂತೆಯನ್ನು ಮತ್ತೆ ಪ್ರಾರಂಭಿಸುವ ಹಾಗೂ ಭೈರವನದುರ್ಗದ ತಪ್ಪಲಿನಲ್ಲಿ ಕಸ ವಿಲೇವಾರಿ ಮಾಡುತ್ತಿರುವ ಕುರಿತು ಚರ್ಚೆ ನಡೆಯಿತು.
ಸ್ವಾತಂತ್ರ್ಯ ಬಂದಾಗಿನಿಂದ ಕುದೂರು ಗ್ರಾಮದಲ್ಲಿ ಶನಿವಾರ ಸಂತೆ ನಡೆಯುತ್ತಿತ್ತು. ಆದರೆ ಕೋವಿಡ್ ನಂತರ ಸಂತೆಯ ಸ್ವರೂಪವೇ ಬದಲಾಯಿತು. ಮತ್ತೆ ಸಂತೆಗೆ ಚಾಲನೆ ನೀಡಬೇಕು. ಸುತ್ತ ಹಳ್ಳಿಗಳಿಗೆ ಒಂದು ತಿಂಗಳ ಕಾಲ ಧ್ವನಿವರ್ಧಕದ ಮೂಲಕ ಸಂತೆ ಮಾಹಿತಿ ನೀಡಿ ರೈತರು ತಮ್ಮ ಬೆಳೆಗಳನ್ನು ತರಲು ತಿಳಿಸಬೇಕು ಎಂದು ಸದಸ್ಯೆ ಲತಾಗಂಗಯ್ಯ ಸಲಹೆ ನೀಡಿದರು.
ಕುದೂರು ಗ್ರಾಪಂ ಪಟ್ಟಣ ಪಂಚಾಯಿತಿಯನ್ನಾಗಿ ಮಾಡಲು ಶಾಸಕರಿಗೆ ಸರ್ವ ಸದಸ್ಯರು ಮನವಿ ಮಾಡಬೇಕಿದೆ. ಪಟ್ಟಣ ಪಂಚಾಯ್ತಿಗೆ ಇರಬೇಕಾದ ಎಲ್ಲಾ ಮಾನದಂಡಗಳು ಕುದೂರು ಗ್ರಾಮ ಪಂಚಾಯ್ತಿಗೆ ಇದೆ. ಆದರೆ ಕೆಲವರ ಸ್ವಾರ್ಥಕ್ಕೆ ಪಟ್ಟಣ ಪಂಚಾಯ್ತಿಯನ್ನು ಪರೋಕ್ಷವಾಗಿ ವಿರೋಧಿಸಿ ಗ್ರಾಮದ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಕೆಂಪೇಗೌಡರ ಚರಿತ್ರೆಗೆ ಸಾಕ್ಷಿ ಒದಗಿಸುವ ಕುದೂರು ಭೈರವನದುರ್ಗದ ತಪ್ಪಲಿನಲ್ಲಿ ಗ್ರಾಮದ ಕಸ ಸುರಿಯುವುದು ತಪ್ಪಿಸಬೇಕು. ಆದಿಚುಂಚನಗಿರಿ ಶ್ರೀಗಳು ಬೆಟ್ಟಕ್ಕೆ ಬರುವವರಿದ್ದಾರೆ. ಅಲ್ಲಿನ ಕಲುಷಿತ ವಾತಾವರಣ ನೋಡಿ ಪಂಚಾಯತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ಮುನ್ನ ಎಚ್ಚರಗೊಳ್ಳಬೇಕು ಎಂದು ಹೇಳಿದರು.
ಮಾದಕ ವಸ್ತು ನಿಯಂತ್ರಣಕ್ಕೆ ಸಹಕರಿಸಿ:
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ರಮ್ಯಾಜ್ಯೋತಿ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ್, ಕಾರ್ಯದರ್ಶಿ ವೆಂಕಟೇಶ್ ಹಾಜರಿದ್ದರು.
ಕುದೂರು ಗ್ರಾಮಪಂಚಾಯ್ತಿ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು.