ಅಧಿಕಾರದ ಆಸೆಗೆ ಪಕ್ಷಾಂತರ ಮಾಡುವವರಿಗೆ ಘನತೆ ಇರಲ್ಲ: ಮರಳುಕುಂಟೆ ಕೃಷ್ಣಮೂರ್ತಿ

KannadaprabhaNewsNetwork |  
Published : Jan 05, 2026, 01:15 AM IST
ಸಿಕೆಬಿ-4 ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿದರು | Kannada Prabha

ಸಾರಾಂಶ

ಮುನೇಗೌಡ ಮೊದಲು ಜೆಡಿಎಸ್ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರ ಜೊತೆ ಇದ್ದು, ಅವರ ಕೃಪಾಕಟಾಕ್ಷದಿಂದ ಜಿಪಂ ಸದಸ್ಯ ಹಾಗೂ ಅಧ್ಯಕ್ಷರಾದರು. ನಂತರ ಅವರೊಂದಿಗೆ ಇದ್ದು ಅವರನ್ನೇ ಸೋಲಿಸಿದರು. ಅಲ್ಲಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದರು. ಕಾಂಗ್ರೆಸ್ ಪಕ್ಷದಲ್ಲಿ ಪ್ರದೀಪ್ ಈಶ್ವರ್ ಅಭ್ಯರ್ಥಿಯಾಗಿ ಘೋಷಣೆಯಾದ ತಕ್ಷಣ ನಮ್ಮ ಅಂದಿನ ಮಂತ್ರಿ ಹಾಗೂ ಹಾಲಿ ಸಂಸದ ಡಾ.ಕೆ.ಸುಧಾಕರ್ ರವರ ಜೊತೆಗೆ ಬಂದು ಅವರನ್ನು ಸೋಲಿಸಿದರು. ಈಗ ಮತ್ತೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದಾರೆ, ಪ್ರದೀಪ್ ಈಶ್ವರ್ ಸೋಲುವುದು ನೂರಕ್ಕೆ ನೂರು ಗ್ಯಾರಂಟಿ ಎಂದು ವ್ಯಂಗ್ಯವಾಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ರಾಜಕೀಯದಲ್ಲಿ ಯಾವುದೇ ಪಕ್ಷಗಳಲ್ಲಿ ಗುಂಪುಗಾರಿಕೆ, ಬಿನ್ನಾಭಿಪ್ರಾಯಗಳು, ಸೋಲು- ಗೆಲುವು ಇದ್ದೆ ಇರುತ್ತದೆ. ಆದರೆ ಅಧಿಕಾರದ ಆಸೆಗೆ ಪಕ್ಷಾಂತರ ಮಾಡುವವರಿಗೆ ಇಲ್ಲಿ ಘನತೆ ಇರುವುದಿಲ್ಲ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪುರದಗಡ್ಡೆ ಪಿ.ಎನ್.ಮುನೇಗೌಡರಂಥವರು ಎಲ್ಲೇ ಹೋದರೂ ಸೋಲುವುದು ಗ್ಯಾರಂಟಿ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮರಳ ಕುಂಟೆ ಕೃಷ್ಣಮೂರ್ತಿ ಟೀಕಿಸಿದರು.

ಸಂಸದ ಡಾ.ಕೆ.ಸುಧಾಕರ್ ರವರ ನಗರದ ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಕಳೆದ ಸೋಮವಾರದಂದು ಪೆರೇಸಂದ್ರ ಕ್ರಾಸ್ ನಲ್ಲಿ ಶಾಸಕ ಪ್ರದೀಪ್ ಈಶ್ವರ್ ರಸ್ತೆಗಳ ಅಭಿವೃದ್ಧಿಗೆ ಗುದ್ದಲಿ ಪೂಜೆ ಕಾರ್ಯಕ್ರಮದ ವೇಳೆ ಪುರದಗಡ್ಡೆ ಪಿ.ಎನ್.ಮುನೇಗೌಡ ಅವರು ಸಂಸದ ಡಾ.ಕೆ.ಸುಧಾಕರ್ ವಿರುದ್ಧ ಮಾತನಾಡಿ ಡಾ.ಕೆ.ಸುಧಾಕರ್ ಅಧಿಕಾರದಲ್ಲಿದ್ದಾಗ ಪೋಲಿಸ್ ಕೇಸುಗಳು ಜಾಸ್ತಿ ಆಗಿದ್ದವು. ಪ್ರದೀಪ್ಈಶ್ವರ್ ಅಧಿಕಾರಕ್ಕೆ ಬಂದ ಮೇಲೆ ಕ್ಷೇತ್ರ ಶಾಂತವಾಗಿದೆ, ಯಾವುದೇ ಗಲಾಟೆಗಳಾಗಿಲ್ಲ ಎಂದು ಹೇಳಿಕೆ ನೀಡಿದ್ದನ್ನು ಖಂಡಿಸುವುದಾಗಿ ತಿಳಿಸಿದರು.

ಮುನೇಗೌಡ ಮೊದಲು ಜೆಡಿಎಸ್ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರ ಜೊತೆ ಇದ್ದು, ಅವರ ಕೃಪಾಕಟಾಕ್ಷದಿಂದ ಜಿಪಂ ಸದಸ್ಯ ಹಾಗೂ ಅಧ್ಯಕ್ಷರಾದರು. ನಂತರ ಅವರೊಂದಿಗೆ ಇದ್ದು ಅವರನ್ನೇ ಸೋಲಿಸಿದರು. ಅಲ್ಲಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದರು. ಕಾಂಗ್ರೆಸ್ ಪಕ್ಷದಲ್ಲಿ ಪ್ರದೀಪ್ ಈಶ್ವರ್ ಅಭ್ಯರ್ಥಿಯಾಗಿ ಘೋಷಣೆಯಾದ ತಕ್ಷಣ ನಮ್ಮ ಅಂದಿನ ಮಂತ್ರಿ ಹಾಗೂ ಹಾಲಿ ಸಂಸದ ಡಾ.ಕೆ.ಸುಧಾಕರ್ ರವರ ಜೊತೆಗೆ ಬಂದು ಅವರನ್ನು ಸೋಲಿಸಿದರು. ಈಗ ಮತ್ತೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದಾರೆ, ಪ್ರದೀಪ್ ಈಶ್ವರ್ ಸೋಲುವುದು ನೂರಕ್ಕೆ ನೂರು ಗ್ಯಾರಂಟಿ ಎಂದು ವ್ಯಂಗ್ಯವಾಡಿದರು.

ಪುರದಗಡ್ಡೆ ಪಿ.ಎನ್.ಮುನೇಗೌಡ ದಿಬ್ಬೊರು ವಿಎಸ್ ಸ್ಎನ್ ಸೊಸೈಟಿಯಲ್ಲಿ ಸ್ತ್ರೀ ಶಕ್ತಿ ಸಂಘಗಳ ಹಣವನ್ನೆಲ್ಲಾ ಲಪಟಾಯಿಸಿದ್ದಾರೆ. ರಾತ್ರೋ ರಾತ್ರಿ ಸೊಸೈಟಿಯ ಬೀಗ ಒಡೆದು, ಅಲ್ಲಿನ ಲೆಕ್ಕ ಪುಸ್ತಕ ಕದ್ದು ಹೆಸರು ತಿದ್ದುಪಡಿ ಮಾಡಿದ್ದಾರೆ. ಆ ಬಗ್ಗೆ ಅಲ್ಲಿನ ಕಾರ್ಯದರ್ಶಿಯಿಂದ ಪೊಲೀಸ್ ಠಾಣೆಯಲ್ಲಿ ದೂರು ಸಹ ಆತನ ಮೇಲೆ ನೀಡಲಾಗಿದೆ. ದೂರು ನೀಡಿ ಹತ್ತು ದಿನಗಳಾದರೂ ಪೊಲೀಸರು ಎಫ್ಐಆರ್ ಹಾಕದಿದ್ದಾಗ, ಸಾರ್ವಜನಿಕ ಹಿತಾಸಕ್ತಿಯಿಂದ ನ್ಯಾಯಾಲಯದ ಮೊರೆ ಹೋಗಿ ನಮ್ಮ ಸಂಸದರು ಎಫ್ಐಆರ್ ಮಾಡಿಸಿದ್ದರು, ಆದ್ದರಿಂದ ಸಂಸದರ ಮೇಲೆ ಇಂತಹ ಆರೋಪಗಳನ್ನು ಮಾಡುತ್ತಿರುವುದು ಸರಿಯೇ? ಸಾರ್ವಜನಿಕ ಹಣವನ್ನು ಅದೂ ಸಹ ಬಡ ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರು ಕಷ್ಟ ಪಟ್ಟು ,ಹೊಟ್ಟೆ ಬಟ್ಟೆ ಕಟ್ಟಿ ಕೂಡಿಟ್ಟ ಹಣವನ್ನು ನುಂಗಿ ನೀರು ಕುಡಿದಂತಹವನನ್ನು ಯಾರೂ ನಂಬುವುದಿಲ್ಲ. ಆತ ಎಲ್ಲಿ ಹೋದರೂ ಆತನ ಕುತಂತ್ರಿ ಬುದ್ದಿಗೆ ಆಯಾ ಪಕ್ಷಗಳಲ್ಲೇ ಎರಡೆರಡು ಗುಂಪುಗಳಾಗಿ ಒಡೆದು ಹೋಗುತ್ತವೆ. ಬಿಜೆಪಿಯಲ್ಲೂ ಆತ ಇರುವವರೆಗೂ ಎರಡು ಹೋಳಾಗಿ ಒಡೆದು ಹೊಗಿತ್ತು. ಈಗ ಅದು ಸರಿಹೋಗುತ್ತಿದೆ. ಹೀಗೆ ಸುಖಾಸುಮ್ಮನೆ ಯಾವುದೇ ತಪ್ಪು ಮಾಡದ ನಮ್ಮ ಸಂಸದ ಡಾ.ಕೆ.ಸುಧಾಕರ್ ವಿರುದ್ದ ಅಪ್ರಚಾರ ಹೇಳಿಕೆ ನೀಡಿದಲ್ಲಿ ಪುರದಗಡ್ಡೆ ಪಿ.ಎನ್.ಮುನೇಗೌಡ ವಿರುದ್ದ ಕಾನೂನು ಕ್ರಮ ಮತ್ತು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿ ಗೋಷ್ಠಿಯಲ್ಲಿ ತಾಪಂ ಮಾಜಿ ಅಧ್ಯಕ್ಷ ರಾಮಸ್ವಾಮಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಗೆಂಗರೆಕಾಲುವೆ ಪ್ರಸಾದ್, ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ನಾಗೇಶ್, ಕಾಳೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಅವಲಕೊಂಡಾರರಾಯಪ್ಪ, ಸದಸ್ಯ ಲಿಂಗಾರೆಡ್ಡಿ, ಪಟ್ರೇನಹಳ್ಳಿ ಗ್ರಾ.ಪಂ.ಅಧ್ಯಕ್ಷ ಅಣಕನೂರು ವೆಂಕಟೇಶ್, ನಗರಸಭೆ ಮಾಜಿ ಸದಸ್ಯ ಯತೀಶ್, ಬಿಜೆಪಿ ಕಾರ್ಯದರ್ಶಿ ಆರ್ ಎಚ್ ಎನ್ ಅಶೋಕ್ ಕುಮಾರ್, ನಗರಮಂಡಲ ಕಾರ್ಯದರ್ಶಿ ನರೇಂದ್ರ, ಮುಖಂಡರಾದ ಗಿಡ್ನಹಳ್ಳಿ ನಾರಾಯಣಸ್ವಾಮಿ, ಎಸ್ ಆರ್ ಎಸ್ ದೇವಾರಾಜು, ಮುರಳಿ,ಮುನಿರಾಜು,ಅರುಣ್, ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ