ಹಾರೋಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಅಗ್ನಿಶಾಮಕ ಘಟಕ ಅವಶ್ಯ

KannadaprabhaNewsNetwork |  
Published : Jan 05, 2026, 01:15 AM IST
2.ಹಾರೋಹಳ್ಳಿ  ತಾಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿರುವುದು. | Kannada Prabha

ಸಾರಾಂಶ

ಹಾರೋಹಳ್ಳಿ: ಏಷ್ಯಾದಲ್ಲಿಯೇ 2ನೇ ಅತಿದೊಡ್ಡ ಕೈಗಾರಿಕಾ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡಗಳನ್ನು ನಿಯಂತ್ರಿಸಲು ಅಗ್ನಿ ಶಾಮಕ ಘಟಕ ಇಲ್ಲದಿರುವುದು ವಿಪರ್ಯಾಸದ ಸಂಗತಿ.

ಹಾರೋಹಳ್ಳಿ: ಏಷ್ಯಾದಲ್ಲಿಯೇ 2ನೇ ಅತಿದೊಡ್ಡ ಕೈಗಾರಿಕಾ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡಗಳನ್ನು ನಿಯಂತ್ರಿಸಲು ಅಗ್ನಿ ಶಾಮಕ ಘಟಕ ಇಲ್ಲದಿರುವುದು ವಿಪರ್ಯಾಸದ ಸಂಗತಿ.

ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಾವಿರಾರು ಕೈಗಾರಿಕೆಗಳು ತಲೆ ಎತ್ತುತ್ತಿವೆ. ಲಕ್ಷಾಂತರ ಜನರು ಕೆಲಸ ಮಾಡುತ್ತಿರುವ ಈ ಪ್ರದೇಶದಲ್ಲಿ ಅನೇಕ ಕೈಗಾರಿಕೆಗಳು ಕೆಲಸ ನಿರ್ವಹಿಸುತ್ತಿವೆ.

ಕಳೆದ ಹತ್ತಾರು ವರ್ಷಗಳಲ್ಲಿ ಹಲವಾರು ಅಗ್ನಿ ಅವಘಡಗಳು, ಸಾವು-ನೋವುಗಳು ಸಂಭವಿಸಿವೆ. ಕಳೆದ ಒಂದೇ ವರ್ಷದಲ್ಲಿ ಗಂಧದಕಡ್ಡಿ ಕಾರ್ಖಾನೆ, ವಸುದ ಕಲರ್ಸ್ ಕಾರ್ಖಾನೆ ಹಾಗೂ ವಿನ್ ಸೂಪರ್ ಫುಡ್ಸ್ ಸೇರಿದಂತೆ ಹಲವು ಕಾರ್ಖಾನೆಗಳಲ್ಲಿ ಬೆಂಕಿ ಅನಾಹುತಗಳು ಸಂಭವಿಸಿ ಕೋಟ್ಯಂತರ ರುಪಾಯಿ ನಷ್ಟ ಉಂಟಾಗಿದೆ.

ಕನಕಪುರ-ಹಾರೋಹಳ್ಳಿ ಭಾಗಕ್ಕೆ ಕೇವಲ ಕನಕಪುರದಲ್ಲಿ ಮಾತ್ರ ಅಗ್ನಿಶಾಮಕ ದಳದ ಘಟಕ ಇದೆ. ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ ಉಂಟಾದರೆ ಅಲ್ಲಿಗೆ ವಿಷಯ ಮುಟ್ಟಿಸಬೇಕು. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬರುವ ಹೊತ್ತಿಗೆ ಸಾಕಷ್ಟು ಸಾವು-ನೋವುಗಳಾಗುತ್ತವೆ. ಸಮಯಕ್ಕೆ ಸರಿಯಾಗಿ ರಕ್ಷಣೆ ನೀಡಲು ಸಾಧ್ಯವಾಗುತ್ತಿಲ್ಲ.

ಅಲ್ಲದೆ, ಕೈಗಾರಿಕೆ ಪ್ರದೇಶದಲ್ಲಿ ಸಂಭವಿಸುವ ಅಗ್ನಿ ದುರಂತಗಳಿಂದ ಕಾರ್ಖಾನೆಯೊಳಗೆ ಸಂಗ್ರಹಿಡಲಾಗಿದ್ದ ವಿಷಕಾರಕ ರಾಸಾಯನಿಕಗಳು ಉರಿದು, ವಿಷಾನಿಲ ಪರಿಸರ ಸೇರಿ ಸುತ್ತಮುತ್ತಲಿನ ಜನತೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಸುತ್ತಮುತ್ತ 10ಕ್ಕೂ ಹೆಚ್ಚು ಹಳ್ಳಿಗಳಿವೆ. ಘಟಕದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದರೂ ಮೊದಲು ಪರಿಣಾಮ ಹಳ್ಳಿಗಳ ಮೇಲೆ ಬೀರುವಂತಾಗಿದೆ. ಈಗಲಾದರೂ ಅಧಿಕಾರಿಗಳು ಇತ್ತ ಗಮನಹರಿಸಿ ಮುಂದಾಗುವ ಅನಾಹುತಗಳಿಗೆ ತಡೆಯಲು ಕ್ರಮ ಕೈಗೊಳ್ಳಬೇಕಿದೆ.

ಮೂಲ ಸೌಕರ್ಯಗಳ ಕೊರತೆ :

ಈ ಕೈಗಾರಿಕಾ ಪ್ರದೇಶದಲ್ಲಿ ಮೂಲ ಸೌಕರ್ಯಗಳ ಕೊರತೆಯೂ ಕಾಡುತ್ತಿದೆ. ಭಾರಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇಲ್ಲಿ ಉತ್ಪಾದನೆಯಾಗುವ ಸರಕುಗಳ ಸಾಗಣೆಗಾಗಿ ಭಾರಿ ಗಾತ್ರದ ಲಾರಿಗಳು ಹಾರೋಹಳ್ಳಿಯಿಂದ ಹೊರ ರಾಜ್ಯಗಳಿಗೆ ಹಾಗು ಹೊರ ರಾಜ್ಯಗಳಿಂದ ಇಲ್ಲಿಗೆ ಚಲಿಸುತ್ತಿರುತ್ತವೆ. ಹೀಗಿರುವಾಗ ಅನೇಕ ಲಾರಿಗಳು ರಸ್ತೆಗಳ ಪಕ್ಕದಲ್ಲಿ ಹಾಗೂ ಕೆಲವೊಮ್ಮೆ ಎಲ್ಲೆಂದರಲ್ಲಿ ಹಗಲು-ರಾತ್ರಿ ನಿಲ್ಲಿಸಿರುತ್ತಾರೆ. ಇದರಿಂದ ಕಿರಿದಾದ ರಸ್ತೆಯಲ್ಲಿ ಇತರೆ ವಾಹನಗಳು ಸುಗಮವಾಗಿ ಚಲಿಸಲು ಸಾರ್ವಜನಿಕರು ನಡೆದಾಡಲು ಅನಾನುಕೂಲವಾಗುತ್ತಿದೆ. ಕೆಲವೊಮ್ಮೆ ಇದರಿಂದ ಅಪಘಾತಗಳು ಸಂಭವಿಸಿದ ಉದಾಹರಣೆಗಳೂ ಸಹ ಇವೆ.

ಕೋಟ್ ....................

ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 600ಕ್ಕೂ ಹೆಚ್ಚು ಕಾರ್ಖಾನೆ ಇದ್ದರೂ ಸಹ ಅಗ್ನಿಶಾಮಕ ಘಟಕ ಇಲ್ಲದಿರುವುದು ಅವ್ಯವಸ್ಥೆ. ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅಗ್ನಿಶಾಮಕ ದಳದ ಘಟಕವನ್ನು ಸ್ಥಾಪಿಸಿದರೆ ಕೈಗಾರಿಕಾ ಘಟಕಗಳಿಗೆ ಹಾಗೂ ಸ್ಥಳೀಯರಿಗೆ ಕೂಡ ತುಂಬಾ ಅನುಕೂಲವಾಗುತ್ತದೆ. ಆದಷ್ಟು ಬೇಗ ಇದಕ್ಕೆ ಅಗತ್ಯ ಕ್ರಮಗಳನ್ನು ವಹಿಸಿ ಘಟಕ ನಿರ್ಮಿಸುವುದು ಉತ್ತಮ.

- ನೀಲಿ ರಮೇಶ್, ಜಿಲ್ಲಾಧ್ಯಕ್ಷರು, ಬಹುಜನ ಜಾಗೃತಿ ವೇದಿಕೆ

ಕೋಟ್ .......................

ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಏಷ್ಯಾಖಂಡದಲ್ಲಿಯೇ ಎರಡನೇ ಸ್ಥಾನದಲ್ಲಿ ಇರುವುದರಿಂದ ಹೆಚ್ಚಿನ ಕಾರ್ಖಾನೆಗಳು ಇಲ್ಲಿಯೇ ನೆಲೆಸಿವೆ. ಇಲ್ಲಿನ ಕೈಗಾರಿಕೆಗಳಲ್ಲಿ ಆಕಸ್ಮಿಕ ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಆದಕಾರಣ ಇಲ್ಲಿ ಒಂದು ವ್ಯವಸ್ಥಿತ ಅಗ್ನಿಶಾಮಕ ಘಟಕದ ಅವಶ್ಯಕತೆ ಇದೆ. ಅದನ್ನು ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಂಡು ಕೂಡಲೇ ವ್ಯವಸ್ಥೆ ಮಾಡಿಕೊಡಬೇಕು.

-ಹಾರೋಹಳ್ಳಿ ಚಂದ್ರು, ದಲಿತ ಮುಖಂಡರು

4ಕೆಆರ್ ಎಂಎನ್ 2,3,4,5.ಜೆಪಿಜಿ

2.ಹಾರೋಹಳ್ಳಿ ತಾಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿರುವುದು.

3.ಕೈಗಾರಿಕಾ ಪ್ರದೇಶದಲ್ಲಿ ಲಾರಿಗಳು ಎಲ್ಲೆಂದರಲ್ಲಿ ನಿಂತಿರುವುದು.

4.ನೀಲಿ ರಮೇಶ್, ಜಿಲ್ಲಾಧ್ಯಕ್ಷರು, ಬಹುಜನ ಜಾಗೃತಿ ವೇದಿಕೆ

5.ಹಾರೋಹಳ್ಳಿ ಚಂದ್ರು, ದಲಿತ ಮುಖಂಡರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ