ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಜಯಚಂದ್ರ ಪ್ರೀ ವೆಡ್ಡಿಂಗ್ ಶೂಟ್ ಮಾಡಲು ಸ್ಥಳೀಯ ಗಿರಿಶ್ರೇಣಿ ದೇಶದಲ್ಲೇ ಪ್ರಖ್ಯಾತಿಯಾಗಿದ್ದು ಇಲ್ಲಿಗೆ ಹೋಗಲು ಚೆಕ್‌ಪೋಸ್ಟ್‌ನಲ್ಲಿ ಪ್ರವೇಶ ಸಿಗದೆ ನಿರಾಸೆಯಿಂದ ವಾಪಾಸ್ ಆಗಬೇಕಾಗಿದೆ. ಇದರಿಂದ ಛಾಯಾಗ್ರಾಹಕರ ವೃತ್ತಿ ಬದುಕಿಗೆ ತೊಂದರೆಯಾಗುತ್ತಿದೆ.
ಸ್ಥಳೀಯ ಛಾಯಾಗ್ರಾಹಕರಿಗೆ ಹಾಗೂ ಸಂಘದ ಗುರುತಿನ ಚೀಟಿ ಪಡೆದ ಸದಸ್ಯರಿಗೆ ಆನ್‌ಲೈನ್ ಎಂಟ್ರಿ ನೋಡದೆ ನಮ್ಮ ಗುರುತಿನ ಚೀಟಿಯನ್ನೇ ಆಧರಿಸಿ ಗಿರಿಭಾಗದ ಪ್ರಕೃತಿ ಸೌಂದರ್ಯವನ್ನು ಪ್ರೀ ವೆಡ್ಡಿಂಗ್ ಶೂಟ್‌ನಲ್ಲಿ ಚಿತ್ರೀಕರಿಸಲು ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದರು.ಇತ್ತೀಚಿನ ದಿನಗಳಲ್ಲಿ ಛಾಯಾಗ್ರಾಹಕರ ವೃತ್ತಿ ಸಂಕಷ್ಟದಲ್ಲಿದ್ದು, ಸರ್ಕಾರದಿಂದ ಅಗತ್ಯ ಸೌಲಭ್ಯ ಮತ್ತು ಸಹಕಾರ ನೀಡ ಬೇಕು. ಕಳೆದ ಕೆಲಸವಿಲ್ಲದೆ ತಮ್ಮ ಕುಟುಂಬ ನಿರ್ವಹಣೆ ಕಷ್ಟಸಾಧ್ಯ. ಅತಿ ಕಡಿಮೆ ಮದುವೆ ಶುಭ-ಸಮಾರಂಭಗಳು ಲಭ್ಯ ವಾಗಿರುತ್ತವೆ. ಜತೆಗೆ ಛಾಯಾಗ್ರಾಹಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು, ಜಿಲ್ಲಾಧ್ಯಂತ ಎಲ್ಲಾ ಸಮು ದಾಯ ಭವನ ಮತ್ತು ಮದುವೆ ಛತ್ರಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸುವಂತೆ ಆಗ್ರಹಿಸಿದರು.
ಗಿರಿಶ್ರೇಣಿಯಲ್ಲಿ ಛಾಯಾಚಿತ್ರಕ್ಕೆ ಸ್ಥಳೀಯ ಛಾಯಾಗ್ರಾಹಕರಿಗೆ ಅವಕಾಶ ನೀಡಬೇಕೆಂದು ಜಿಲ್ಲಾ ವರಿಷ್ಠಾಧಿಕಾರಿಗೆ ಶನಿವಾರ ಜಿಲ್ಲಾ ಮತ್ತು ತಾಲೂಕು ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.