ರೈತರ ಸಮಸ್ಯೆಗೆ ಸ್ಪಂದಿಸುವಂತೆ ಸಚಿವರಿಗೆ ಮನವಿ

KannadaprabhaNewsNetwork |  
Published : Jun 25, 2024, 12:34 AM IST
ರೈತರ ಸಮಸೈಗಳಿಗೆ ಸ್ಪಂದಿಸುವಂತೆ ಕಬ್ಬು ಬೆಳೆಗಾರರಿಂದ ಸಚಿವದ್ವಯರಿಗೆ ಮನವಿ | Kannada Prabha

ಸಾರಾಂಶ

ರೈತರ ವಿವಿಧ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಕಬ್ಬು ಬೆಳೆಗಾರರ ಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಎಚ್. ಸಿ. ಮಹದೇವಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮೈಸೂರು ಜಿಲ್ಲೆ ವ್ಯಾಪ್ತಿಯಲ್ಲಿ ಸಕ್ಕರೆ ಕಾರ್ಖಾನೆ ಆರಂಭ ಮಾಡುತ್ತಿದ್ದು, ಕಳೆದ ಸಾಲಿನ ಬಾಕಿಯನ್ನು ಕೊಟ್ಟಿಲ್ಲ ದ್ವಿಪಕ್ಷೀಯ ಒಪ್ಪಂದ ಪತ್ರವನ್ನು ಕೂಡ ಜಾರಿ ಮಾಡುತ್ತಿಲ್ಲ. ಕಳೆದ ಸಾಲಿನ ಲಾಭಾಂಶವನ್ನು ಹಂಚಿಕೆ ಮಾಡುತ್ತಿಲ್ಲ. ಸಕ್ಕರೆ ಕಾರ್ಖಾನೆ ಮುಂಭಾಗ ತೂಕದ ಯಂತ್ರವನ್ನು ಅಳವಡಿಸಿಲ್ಲ ಹಾಗೂ ಕಟಾವು ಮತ್ತು ಸಾಗಾಣಿಕೆ ಕೂಲಿ ಉತ್ತರ ದಕ್ಷಿಣ ಎಂಬ ತಾರತಮ್ಯವಿದೆ ಇದನ್ನು ನಿವಾರಣೆ ಮಾಡಬೇಕು. ಬಾಳೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು, ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು ಕಬ್ಬು ಬೆಳೆಗಾರರ ಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಎಚ್. ಸಿ. ಮಹದೇವಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಕೆಡಿಪಿ ಸಭೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಎಚ್. ಸಿ, ಮಹದೇವಪ್ಪ ಅವರಿಗೆ ಮನವಿ ನೀಡಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಬರ ಪರಿಹಾರವನ್ನು ಪ್ರತಿಯೊಬ್ಬ ರೈತರಿಗೂ ನೀಡಬೇಕು . ಅಕ್ರಮ ಸಕ್ರಮ ಯೋಜನೆಯನ್ನು ಮರು ಜಾರಿ ಮಾಡಬೇಕು.ಹಾಲು ಉತ್ಪಾದಕರ ಪ್ರೋತ್ಸಾಹ ಧನವನ್ನು ತಕ್ಷಣ ನೀಡಬೇಕು ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿ 10ರು. ಪ್ರೋತ್ಸಾಹಧನವನ್ನು ಬರದಿಂದ ನೊಂದಿರುವ ರೈತರಿಗೆ ನೀಡಬೇಕು ಎಂದರು.ಕರ್ನಾಟಕ ಕಾವೇರಿ ಗ್ರಾಮೀಣ ಬ್ಯಾಂಕ್ ರೈತರಿಗೆ ನೀಡುತ್ತಿರುವ ಕಿರುಕುಳವನ್ನು ತಪ್ಪಿಸಬೇಕು ಕಬ್ಬು ಖರೀದಿ ನಿಯಂತ್ರಣ ಮಂಡಳಿಗೆ ಸಂಘದ ಅಧ್ಯಕ್ಷರನ್ನು ನೇಮಕ ಮಾಡಿಕೊಳ್ಳಬೇಕು. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಪ್ರಭಾವಿ ಸಚಿವರಾಗಿರುವ ತಾವು ಎರಡು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳ ಜೊತೆ ತಾವು ಮಾತನಾಡಿ ಸಮಯ ನಿಗದಿ ಮಾಡಿ ನಮ್ಮ ಸಂಘಟನೆಗೆ ಚರ್ಚೆ ಮಾಡಲು ಅವಕಾಶ ಕಲ್ಪಿಸಬೇಕು ಇಲ್ಲವಾದಲ್ಲಿ ೧೦ ದಿನಗಳ ನಂತರ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಮನವಿ ಆಲಿಸಿದ ಸಚಿವ ಎಚ್. ಸಿ. ಮಹದೇವಪ್ಪ ಈ ಬಗ್ಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು,

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್ ರಾಜ್ಯ ಪ್ರದಾನ ಕಾರ್ಯದರ್ಶಿ ಮಲೆಯೂರು ಹರ್ಷ ಮೈಸೂರು ಜಿಲ್ಲಾಧ್ಯಕ್ಷg ಹಾಡ್ಯ ರವಿ, ಅಂಬಳೆ ಮಹದೇವಸ್ವಾಮಿ, ವಳಗೆರೆ ಗಣೇಶ್ ,ಮಲೆಯೂರು ಮಹೇಂದ್ರ, ಸತೀಶ್, ಪ್ರವೀಣ್ , ಉಡಿಗಾಲ ಗ್ರಾಮ ಘಟಕ ಅಧ್ಯಕ್ಷರಾದ ಮಂಜುನಾಥ್, ಮಹದೇಸ್ವಾಮಿ, ಗುರುಮಲ್ಲಪ್ಪ, ಚೇರ್ಮನ್ ಗುರು, ಶಿವಕುಮಾರ್, ಕೂಸಪ್ಪ, ಅರಳೀಕಟ್ಟೆ ಸಿದ್ದಪ್ಪ, ಮಹದೇವಸ್ವಾಮಿ, ಕಿಳಲೀಪುರ ಗೂಳಿ ಮಹಾದೇವ, ಶ್ರೀಕಂಠ ,ಗುರುವಿನಪುರ ಮೋಹನ್, ಮಂಜು, ಬಸವಣ್ಣ ,ಚಂದ್ರಪ್ಪ, ಮಹೇಶ್, ಮತ್ತಿರರಿದ್ದರು.

PREV

Recommended Stories

ವರ್ಷೊದ ಉಚ್ಚಯ ಬೊಕ್ಕ ಆಟಿದ ಮದಿಪು ಕಾರ್ಯಕ್ರಮ
ಹಾಲುಮತ ಸಮಾಜದವರ ಕನಸು ನನಸಾಗುತ್ತಿದೆ