ಪುರಸಭೆ, ಪ.ಪಂ.ಗೆ ನೇಮಿಸಿದ ಆಡಳಿತಾಧಿಕಾರಿ ಹಿಂಪಡೆಯಲು ಮನವಿ

KannadaprabhaNewsNetwork |  
Published : Nov 16, 2025, 01:15 AM IST
ಅವಧಿ ಪೂರ್ವ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಮಾಡಿರುವ ಆಡಳಿತಾಧಿಕಾರಿಗಳ ನೇಮಕ ಹಿಂಪಡೆಯಬೇಕು ಎಂದು ವಿವಿಧ ಪುರಸಭೆ, ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಪದಾಧಿಕಾರಿಗಳು ಶನಿವಾರ ಅಪರ ಜಿಲ್ಲಾಧಿಕಾರಿ ನಾರಾಯಣಕನಕರಡ್ಡಿ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು; ಅವಧಿ ಪೂರ್ವ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಮಾಡಿರುವ ಆಡಳಿತಾಧಿಕಾರಿಗಳ ನೇಮಕ ಹಿಂಪಡೆಯಬೇಕು ಎಂದು ವಿವಿಧ ಪುರಸಭೆ, ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಪದಾಧಿಕಾರಿಗಳು ಶನಿವಾರ ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಚಿಕ್ಕಮಗಳೂರು; ಅವಧಿ ಪೂರ್ವ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಮಾಡಿರುವ ಆಡಳಿತಾಧಿಕಾರಿಗಳ ನೇಮಕ ಹಿಂಪಡೆಯಬೇಕು ಎಂದು ವಿವಿಧ ಪುರಸಭೆ, ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಪದಾಧಿಕಾರಿಗಳು ಶನಿವಾರ ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಕಡೂರು ಪುರಸಭೆ ಅಧ್ಯಕ್ಷ ಶ್ರೀನಿವಾಸ್ ಭಂಡಾರಿ ಮಾತನಾಡಿ ಜಿಲ್ಲೆಯ ಕಡೂರು, ಬೀರೂರು ಪುರಸಭೆ ಮತ್ತು ಮೂಡಿಗೆರೆ, ನ.ರಾ.ಪುರ ಹಾಗೂ ಶೃಂಗೇರಿ ಪಟ್ಟಣ ಪಂಚಾಯಿತಿಗಳಿಗೆ ಜಿಲ್ಲಾಡಳಿತ ಅವಧಿಗೂ ಮುನ್ನವೇ ಆಡಳಿತಾಧಿಕಾರಿ ನೇಮಕ ಮಾಡಿರುವುದು ಸರಿಯಲ್ಲ. ಈ ಕೂಡಲೇ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.ಆಡಳಿತಾಧಿಕಾರಿ ನೇಮಕ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದರೆ ಆಯಾ ಅಧಿಕಾರದ ಅವಧಿ 2ನೇ ಅವಧಿ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆ ಅವಧಿ 30 ತಿಂಗಳು ಆಗಿರುತ್ತದೆ. ಎರಡನೇ ಅವಧಿ ಚುನಾವಣೆ ನಡೆದು 30 ತಿಂಗಳು ಅಪೂರ್ಣಗೊಂಡಿಲ್ಲ ಎಂದು ತಿಳಿಸಿದರು.ಕಡೂರು ಹಾಗೂ ಬೀರೂರು ಪುರಸಭೆ ಎರಡನೇ ಅವಧಿ ಚುನಾವಣೆ ಕಳೆದ ವರ್ಷ ಆಗಸ್ಟ್ ನಲ್ಲಿ ನಡೆದಿದೆ. ಅಲ್ಲದೇ ಈ ವಿಚಾರ ವಾಗಿ ಈಗಾಗಲೇ ರಾಜ್ಯಾದ್ಯಂತ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆ ದಾಖಲಾಗಿದೆ. ದಾವೆಗೆ ಸಂಬಂಧಿಸಿದ ದಾಖಲೆಗಳನ್ನು ಜಿಲ್ಲಾಡಳಿತ ಒದಗಿಸಲಾಗಿದೆ ಎಂದು ಹೇಳಿದರು.ದಾಖಲೆ ಸಮೇತ ಜಿಲ್ಲಾಡಳಿತ ಸಮಗ್ರ ಮಾಹಿತಿ ಒದಗಿಸಿದರೂ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಆದ್ದರಿಂದ ಪ್ರಜಾ ಪ್ರಭುತ್ವದ ಅಡಿಯಲ್ಲಿ ಪ್ರತಿನಿಧಿಗಳ ಹಕ್ಕು ಮೊಟಕುಗೊಳಿಸದೇ ಪೂರ್ಣಗೊಳಿಸಲು ಅವಕಾಶ ನೀಡಬೇಕು. ಸರ್ಕಾರಕ್ಕೆ ಈ ಮನವಿ ಶೀಘ್ರವೇ ಸಲ್ಲಿಸಿ ರಾಜಕೀಯ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಕಡೂರು ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಬೀರೂರು ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮೀ ಮೋಹನ್, ಉಪಾದ್ಯಕ್ಷ ಎನ್.ಎಂ.ನಾಗರಾಜು, ಮೂಡಿಗೆರೆ ಪ.ಪಂ. ವೆಂಕಟೇಶ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ.ಸುದರ್ಶನ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮೋಹನ್‌ಕುಮಾರ್, ವಿವಿಧ ಸದಸ್ಯರಾದ ಕಾಂತರಾಜು, ಮನುಮರಗುದ್ದಿ, ಪುರಸಭೆ ಸದಸ್ಯರಾದ ಸುಬ್ಬಣ್ಣ, ಗೋವಿಂದರಾಜ್, ವಿಜಯಚಿನ್ನ ರಾಜು, ಯತೀರಾಜ್, ಜ್ಯೋತಿ ವೆಂಕಟೇಶ್, ಶಾರದಾ ರುದ್ರಪ್ಪ, ಸುಮಿತ್ರ ಹಾಜರಿದ್ದರು.

PREV

Recommended Stories

ಡಾ. ವಿ.ಎಸ್.ವಿ. ಪ್ರಸಾದರ ಸಮಾಜ ಸೇವೆ ಅವಿಸ್ಮರಣೀಯ
ಮಕ್ಕಳು ದೇಶದ ಆಸ್ತಿ: ಆಹಾರ ಸಚಿವ ಮುನಿಯಪ್ಪ