ಕನ್ನಡಪ್ರಭ ವಾರ್ತೆ ಚಾಮರಾಜನಗರ
೬.೦ ಮೀ x ೮.೩ ಮೀ ಅಳತೆಯ ನಿವೇಶನಕ್ಕೆ ೬,೬೯,೮೧೦ ರು. ಮೌಲ್ಯ ನಿಗದಿ ಮಾಡಿದ್ದು ಶೇ.೧೦ರಷ್ಟು ಅಂದರೆ ೬೬,೯೮೦ ರು. ಗಳ ಪ್ರಾರಂಭಿಕ ಠೇವಣಿ, ನೋಂದಣಿ ಶುಲ್ಕವಾಗಿ ೧೦೦ ರು.ಗಳನ್ನು ಪಾವತಿಸಬೇಕಿದೆ. ೯.೦ ಮೀ x ೧೫.೦ ಮೀ ಅಳತೆಯ ನಿವೇಶನಕ್ಕೆ ೧೮,೧೫,೭೫೦ ರು. ಮೌಲ್ಯ ನಿಗದಿ ಮಾಡಿದ್ದು ಶೇ. ೧೦ರಷ್ಟು ಅಂದರೆ ೧,೮೧,೫೭೫ ರು. ಗಳ ಪ್ರಾರಂಭಿಕ ಠೇವಣಿ, ನೋಂದಣಿ ಶುಲ್ಕವಾಗಿ ೨೫೦ ರು. ಗಳನ್ನು ಪಾವತಿಸಬೇಕಿದೆ. ೧೨.೦ ಮೀ x ೧೮.೦ ಮೀ ಅಳತೆಯ ನಿವೇಶನಕ್ಕೆ ೨೯,೦೫,೨೦೦ ರು. ಮೌಲ್ಯ ನಿಗದಿ ಮಾಡಿದ್ದು ಶೇ.೧೦ರಷ್ಟು ಅಂದರೆ ೨,೯೦,೫೨೦ ರು. ಗಳ ಪ್ರಾರಂಭಿಕ ಠೇವಣಿ, ನೋಂದಣಿ ಶುಲ್ಕವಾಗಿ ೫೦೦ ರು. ಗಳನ್ನು ಪಾವತಿಸಬೇಕಿದೆ. ಅರ್ಜಿ ಶುಲ್ಕ ೫೦೦ ರು.ಗಳಾಗಿದೆ ಎಂದು ತಿಳಿಸಿದರು. ಪ್ರಾಧಿಕಾರದಿಂದ ನಿವೇಶನಗಳಿಗೆ ನಿಗದಿಪಡಿಸಿರುವ ದರ ಪ್ರತೀ ಚ.ಮೀ ಗೆ ೧೩,೪೫೦ ರು. ಗಳಾಗಿವೆ. (ಚ.ಅಡಿಗೆ ೧೨೫೦ ರು.) ಆಗಿದ್ದು, ನಿವೇಶನಾಕಾಂಕ್ಷಿಗಳು ಚಾಮರಾಜನಗರದ ಇಂಡಿಯನ್ ಬ್ಯಾಂಕಿನಲ್ಲಿ ಅರ್ಜಿ ಪಡೆದು ಶೇ.೧೦ರಷ್ಟು ಶುಲ್ಕ ಮತ್ತು ನೋಂದಣಿ ಶುಲವನ್ನು ಫೆಬ್ರವರಿ ೨೮ರೊಳಗೆ ಪಾವತಿಸಬೇಕಾಗುತ್ತದೆ. ಒಟ್ಟು ೨೩೬ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದರು. ಹಂಚಿಕೆಯಲ್ಲಿ ರೋಸ್ಟರ್ ಪದ್ದತಿ ಪಾಲಿಸಲಾಗುತ್ತಿದ್ದು ಪರಿಶಿಷ್ಟಜಾತಿ, ಪರಿಶಿಷ್ಟವರ್ಗ, ಹಿಂದುಳಿದವರ್ಗ, ವಿಶೇಷಚೇತನರು, ಸೈನಿಕರು, ಇನ್ನಿತರ ವರ್ಗಗಳು, ಸಾಮಾನ್ಯ ವರ್ಗದವರಿಗೆ ನಿವೇಶನಗಳನ್ನು ನೀಡಲಾಗುತ್ತದೆ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ವಸತಿ ಬಡಾವಣೆ ನಿರ್ಮಿಸಲಾಗುತ್ತಿದ್ದು, ನಿವೇಶನಗಳನ್ನು ೩ರಿಂದ ೪ ತಿಂಗಳೊಳಗೆ ನೀಡಲಿದ್ದೇವೆ. ಸಾರ್ವಜನಿಕರು ನಗರಾಭಿವೃದ್ದಿ ಪ್ರಾಧಿಕಾರದ ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ನಗರದ ಬೆಳವಣಿಗೆಗೆ ಸಹಕರಿಸಬೇಕು ಎಂದು ಚೂಡಾ ಅಧ್ಯಕ್ಷರು ತಿಳಿಸಿದರು.
ಈಗ ಚುಡಾ ವ್ಯಾಪ್ತಿ ೧೪೭೭೩ ಹೆಕ್ಟೇರ್ ವಿಸ್ತೀರ್ಣ ಆಗಿದ್ದು ಹೊಸದಾಗಿ ೬ ಪಂಚಾಯಿತಿಗಳು ಸೇರಿವೆ, ಹರದನಹಳ್ಳಿ, ಚಂದಕವಾಡಿ, ಕೂಸ್ಲೂರು, ಮಾದಾಪುರ ಹಾಗೂ ಬೋಗಾಪುರ, ಬದನಗುಪ್ಪೆ, ಶಿವಪುರ ಪಂಚಾಯಿತಿ ವ್ಯಾಪ್ತಿಯ ಕೆಲ ಪ್ರದೇಶಗಳು ಸೇರಿವೆ ಎಂದರು.ಕೋಡಿಮೋಳೆ ಕೆರೆ ಅಭಿವೃದ್ಧಿ:ಸುಮಾರು ೪.೨೫ ಕೋಟಿ ರು. ವೆಚ್ಚದಲ್ಲಿ ಕೋಡಿಮೋಳೆ ಕೆರೆಯನ್ನು ಅಭಿವೃದ್ದಿಪಡಿಸಿ, ಪ್ರವಾಸೋದ್ಯಮ ಸ್ಥಳವನ್ನಾಗಿ ಮಾಡಲು ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದ್ದು ಅನುಮತಿ ಸಿಗುವ ವಿಶ್ವಾಸವಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಇದಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದರು. ಈಗ ಮನೆಗಳನ್ನು ೧೫ ಮೀಟರ್ ಎತ್ತರದವರೆಗೂ ನಿರ್ಮಿಸಬಹುದು, ಪ್ರಾಧಿಕಾರದ ವತಿಯಿಂದ ಕೆಲ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲಾಗುವುದು, ಮುಂದಿನ ದಿನಗಳಲ್ಲಿ ಪ್ರಾಧಿಕಾರದ ವತಿಯಿಂದ ಇನ್ನು ಕೆಲ ಬಡಾವಣೆಗಳನ್ನು ನಿರ್ಮಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಆಯುಕ್ತರಾದ ಸೀಮಾ ಎಚ್.ವಿ. ಉಪ ಆಯುಕ್ತ ನಿತೇಶ್, ಸದಸ್ಯರಾದ ಪುಟ್ಟಸ್ವಾಮಿ, ರಾಜು ಇದ್ದರು.