ಕನ್ನಡಪ್ರಭ ವಾರ್ತೆ ಮಡಿಕೇರಿ
ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದಡಿಯಲ್ಲಿ ಬರುವ ಸಂಬಾರ ಮಂಡಳಿಯು “ರಫ್ತು ಅಭಿವೃದ್ಧಿಗಾಗಿ ಪ್ರಗತಿಪರ, ನವೀನ ಮತ್ತು ಸಹಯೋಗಿ ಮಧ್ಯಸ್ಥಿಕೆಗಳ ಮೂಲಕ ಸ್ಪೈಸ್‌ಡ್ ಮಸಾಲೆ ವಲಯದಲ್ಲಿ ಸುಸ್ಥಿರತೆ” ಯೋಜನೆಯನ್ನು ಜಾರಿಗೊಳಿಸುತ್ತಿದೆ. 15ನೇ ಹಣಕಾಸು ಆಯೋಗದ ಚಕ್ರದಲ್ಲಿ 2025-26ರ ಹಣಕಾಸು ವರ್ಷದವರೆಗೆ ಅನುಷ್ಠಾನಕ್ಕೆ ಅನುಮೋದನೆ ಪಡೆದಿರುವ ಸಂಬಾರ ಯೋಜನೆಯನ್ನು 2026ರ ಸೆಪ್ಟೆಂಬರ್ 30ರವರೆಗೆ ಅಥವಾ 16ನೇ ಹಣಕಾಸು ಆಯೋಗದ ಚಕ್ರಕ್ಕೆ ಪ್ರಸ್ತಾವಿತ ಯೋಜನೆಯ ಅನುಮೋದನೆಯವರೆಗೆ, ಯಾವುದು ಮೊದಲೋ ಅಲ್ಲಿಯವರೆಗೆ ವಿಸ್ತರಿಸಲಾಗಿದೆ. ಸ್ಪೈಸ್‌ಡ್ ಯೋಜನೆಯು ಪ್ರದೇಶದ ವಿಸ್ತರಣೆ ಮತ್ತು ಸಣ್ಣ ಮತ್ತು ದೊಡ್ಡ ಏಲಕ್ಕಿಯ ಉತ್ಪಾದಕತೆಯಲ್ಲಿ ಸುಧಾರಣೆ, ಕೊಯ್ಲೋತ್ತರ ಸುಧಾರಣೆ ಮೂಲಕ ಗುಣಮಟ್ಟದ ಮಸಾಲೆಗಳ ರಫ್ತು ಮಾಡಬಹುದಾದ ಹೆಚ್ಚುವರಿ ಉತ್ಪಾದನೆ, ಮಸಾಲೆಗಳ ರಫ್ತು ಉತ್ತೇಜನ, ರಫ್ತು ಬುಟ್ಟಿಯಲ್ಲಿ ಮೌಲ್ಯವರ್ಧಿತ ಮಸಾಲೆಗಳ ಪಾಲನ್ನು ಹೆಚ್ಚಿಸುವುದು, ಅನ್ವಯವಾಗುವ ಗುಣಮಟ್ಟ ಮತ್ತು ಸುರಕ್ಷತೆಯ ಮಾನದಂಡಗಳೊಂದಿಗೆ ರಫ್ತು ಸರಕುಗಳ ಅನುಸರಣೆಯ ಮೌಲ್ಯಮಾಪನ ಮತ್ತು ಪಾಲುದಾರರ ಸಾಮರ್ಥ್ಯ ನಿರ್ಮಾಣ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಕಲ್ಪಿಸುತ್ತದೆ. 2026-27ನೇ ಸಾಲಿನ ಸ್ಪೈಸ್‌ಡ್ ಯೋಜನೆಯ ವಿವಿಧ ಕಾರ್ಯಕ್ರಮಗಳು/ಘಟಕಗಳಡಿ ನೆರವು ಪಡೆಯಲು ಅರ್ಹ ರೈತರು, ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒಗಳು), ರಫ್ತುದಾರರು ಮತ್ತು ಸಂಬಾರ ವಲಯದ ಇತರ ಪಾಲುದಾರರಿಂದ ಅರ್ಜಿ ಆಹ್ವಾನಿಸಲಾಗಿದೆ.ಏಲಕ್ಕಿ ಹೊಸ ನಾಟಿ ಮತ್ತು ಮರು-ನಾಟಿ ಯೋಜನೆ. ಏಲಕ್ಕಿ ಪ್ರಮಾಣೀಕೃತ ನರ್ಸರಿ ಯೋಜನೆ. ಏಲಕ್ಕಿ ತೋಟದಲ್ಲಿ ನೀರು ಸಂಗ್ರಹಣಾ ರಚನೆಯ ನಿರ್ಮಾಣ ಯೋಜನೆ. ಏಲಕ್ಕಿ ತೋಟಕ್ಕೆ ನೀರಾವರಿ ಪಂಪ್‌ಸೆಟ್ ಖರೀದಿಸುವ ಯೋಜನೆ. ಏಲಕ್ಕಿ ತೋಟದಲ್ಲಿ ನೀರಾವರಿ ಸ್ಪ್ರಿಂಕ್ಲರ್ (ಸಿಂಪರಣಾ) ವ್ಯವಸ್ಥೆಯನ್ನು ಅಳವಡಿಸುವ ಯೋಜನೆ. ಎಫ್‌ಪಿಒ ಮೂಲಕ ಸಂಬಾರ ಬೆಳೆಗಳ ಕೊಯ್ಲೋತ್ತರ ಉಪಕರಣಗಳ ಬ್ಯಾಂಕ್ ಸ್ಥಾಪಿಸುವ ಯೋಜನೆ. ಕಾಳುಮೆಣಸು ಬಿಡಿಸುವ ಯಂತ್ರ ಖರೀದಿಸುವ ಯೋಜನೆ. ಸಾಂಬಾರು ಬೆಳೆಗಳ ಪಾಲಿಷರ್ ಯಂತ್ರ ಖರೀದಿಸುವ ಯೋಜನೆ. ಸಾಂಬಾರು ಬೆಳೆಗಳ ಸ್ವಚ್ಛಗೊಳಿಸುವ/ದರ್ಜೆ ವಿಂಗಡಿಸುವ ಯಂತ್ರಗಳ ಖರೀದಿಯ ಯೋಜನೆ. ಸಾಂಬಾರು ಬೆಳೆಗಳನ್ನು ತೊಳೆಯುವ ಉಪಕರಣಗಳ ಖರೀದಿಯ ಯೋಜನೆ. ಹುಣಸೆಹಣ್ಣಿನ ಸಿಪ್ಪೆ ತೆಗೆಯುವ ಯಂತ್ರ ಖರೀದಿಸುವ ಯೋಜನೆ. ಹುಣಸೆಹಣ್ಣಿನ ಬೀಜ ತೆಗೆಯುವ ಯಂತ್ರ ಖರೀದಿಸುವ ಯೋಜನೆ. ಸಾಂಬಾರು ಬೆಳೆಗಳ ಒಣಗಿಸುವ ಯಂತ್ರ ಖರೀದಿಸುವ ಯೋಜನೆ. ಸುಧಾರಿತ ಏಲಕ್ಕಿ ಕ್ಯೂರಿಂಗ್ (ಒಣಗಿಸುವ/ಸಂಸ್ಕರಿಸುವ) ಸಾಧನ ಖರೀದಿಸುವ ಯೋಜನೆ ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು.
ಆನ್‌ಲೈನ್ ಅರ್ಜಿಗಳ ಸಲ್ಲಿಕೆ ಜು. 1ರಿಂದ ಪ್ರಾರಂಭವಾಗಿದೆ. ಸ್ಪೈಸಡ್ ಯೋಜನೆಯ ಅನುಷ್ಠಾನಕ್ಕಾಗಿ ಮಾರ್ಗಸೂಚಿಗಳು ಲಿಂಕ್‌ನಲ್ಲಿ ಲಭ್ಯವಿದೆ, ಸ್ಪೈಸ್‌ಡ್ ಯೋಜನೆಯ ಅನುಷ್ಠಾನಕ್ಕಾಗಿ ಅರ್ಜಿಗಳನ್ನು ಸಲ್ಲಿಸುವ ಮೊದಲು ಯೋಜನೆಯ ಮಾರ್ಗಸೂಚಿಗಳನ್ನು ವಿವರವಾಗಿ ಪರಿಶೀಲಿಸಲು ಅರ್ಜಿದಾರರಿಗೆ ಸೂಚಿಸಲಾಗಿದೆ.ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಲು ಆ. 31ಕೊನೆ ದಿನವಾಗಿದೆ. ಈ ಯೋಜನೆಯಡಿ ನೆರವು ಪಡೆಯಲುದ್ದೇಶಿಸಿರುವ ಎಲ್ಲ ಅ ರ್ಜಿದಾರರು ನಿಗದಿತ ಸಮಯದಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಲು ವಿನಂತಿಸಲಾಗಿದೆ. ಅಪೂರ್ಣ ಅರ್ಜಿಗಳು ಮತ್ತು ನಿಗದಿತ ದಿನಾಂಕದ ನಂತರ ಸ್ವೀಕರಿಸಿದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.ಹೆಚ್ಚಿನ ಮಾಹಿತಿ ಮತ್ತು ಸಹಾಯಕ್ಕಾಗಿ, ಆಸಕ್ತ ಪಾಲುದಾರರು ಮಂಡಳಿಯ ವೆಬ್‌ಸೈಟ್ www.indianspices.com ಗೆ ಭೇಟಿ ನೀಡಬಹುದು ಅಥವಾ ಹತ್ತಿರದ ಸಂಬಾರ ಮಂಡಳಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸಂಬಾರ ಮಂಡಳಿ ಪ್ರಕಟಣೆ ತಿಳಿಸಿದೆ.