ಯಾದಗಿರಿ: 2025-26 ನೇ ಸಾಲಿನ ತೋಟಗಾರಿಕೆ ಇಲಾಖೆ ಆಧೀನದ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 2025-26ನೇ ಸಾಲಿನಲ್ಲಿ ಆಯೋಜಿಸಲಾಗುತ್ತಿರುವ ರೈತರ ಮಕ್ಕಳಿಗೆ 10 ತಿಂಗಳ ತರಬೇತಿ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸಂತೋಷ ಶೇಷಲು ತಿಳಿಸಿದ್ದಾರೆ.
ತರಬೇತಿಗೆ ಅರ್ಹತೆ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಅಭ್ಯರ್ಥಿಯ ಪೋಷಕರು ಕಡ್ಡಾಯ ಜಮೀನು ಹೊಂದಿರಬೇಕು ಹಾಗೂ ಸ್ವಂತ ಸಾಗುವಳಿ ಮಾಡುತ್ತಿರಬೇಕು. ಈ ಬಗ್ಗೆ ಪಹಣಿಯನ್ನು ನೀಡುವುದು ಕಡ್ಡಾಯ. ವಯೋಮಿತಿಯು ಎಸ್.ಸಿ, ಎಸ್.ಟಿ. ಮತ್ತು ಅಂಗವಿಕಲರಿಗೆ 18 ರಿಂದ 33 ವರ್ಷ ಒಳಗಿರಬೇಕು, ಮಾಜಿ ಸೈನಿಕರಿಗೆ 33 ರಿಂದ 65 ವರ್ಷ ಒಳಗಿರಬೇಕು, ಇತರರಿಗೆ 18 ರಿಂದ 30 ವರ್ಷ ಒಳಗಿರಬೇಕು, ಮಾಜಿ ಸೈನಿಕರು ಪ್ರವೇಶ ಪಡೆಯಲು ಇಚ್ಚಿಸಿದಲ್ಲಿ ಮೇಲೆ ತಿಳಿಸಿದ ವಿವರಗಳೊಂದಿಗೆ ಇತರೆ ದಾಖಲಾತಿಗಳಾದ Discharge book copy, Personal Pension Order copy, Ex. Serviceman ID card copy, ಇತ್ಯಾದಿಗಳನ್ನು ಸಲ್ಲಿಸಬೇಕು. ಸಂದರ್ಶನ ಮಾಡುವ ಏಪ್ರಿಲ್ 8ರಂದು ಬೆಳಿಗ್ಗೆ 10 ಗಂಟೆಗೆ ಸ್ಥಳ ತೋಟಗಾರಿಕೆ ಉಪ ನಿರ್ದೇಶಕರು (ಜಿ.ಪಂ) ಕಚೇರಿ ಯಾದಗಿರಿ ಹೆಚ್ಚಿನ ದೂ.ಸಂ. 9008637618, 08473 253747ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.