ರೈತರಿಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನ

KannadaprabhaNewsNetwork |  
Published : Apr 18, 2025, 12:39 AM IST
32 | Kannada Prabha

ಸಾರಾಂಶ

ರೈತರು ಪಹಣಿ,ಆಧಾರ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ಹಾಗೂ ಪರಿಶಿಷ್ಟ ಪಂಗಡ/ ಪರಿಶಿಷ್ಟ ಜಾತಿ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರದ ಪ್ರತಿಗಳೊಂದಿಗೆ ಜೂ.30ರ ಒಳಗೆ ಅರ್ಜಿ ಸಲ್ಲಿಸುವಂತೆ ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.

ಬೆಳ್ತಂಗಡಿ: ರೈತರಿಗೆ ಪ್ರೋತ್ಸಾಹಧನ ನೀಡಲು ತೋಟಗಾರಿಕೆ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಕನಿಷ್ಠ ಅರ್ಧ ಎಕ್ರೆಯಿಂದ 5 ಎಕ್ರೆವರೆಗೆ ಕಾಳುಮೆಣಸು, ಕೋಕೋ, ಗೇರು, ತಾಳೆಬೆಳೆ, ರಾಂಬೂಟಾನ್, ಡ್ರಾಗನ್ ಫ್ರುಟ್, ಮ್ಯಾಂಗೋಸ್ಟೀನ್, ತೆಂಗಿನ ತೋಟದಲ್ಲಿ ಅಂತರ ಬೆಳೆಯಾಗಿ ದಾಲ್ಚಿನ್ನಿ (ಚಕ್ಕೆ) ಬೆಳೆಗಳ ಪ್ರದೇಶ ವಿಸ್ತರಣೆಗೆ (ಹೊಸ ತೋಟ) ಶೇ. 40 ರ ಸಹಾಯಧನ, ಕಾಳುಮೆಣಸು ಪುನಶ್ಚೇತನಕ್ಕೆ ಶೇ.50 ಸಹಾಯಧನ, ನೀರು ಸಂಗ್ರಹಣಾ ಘಟಕಗಳ ಸ್ಥಾಪನೆಗೆ ಸಹಾಯಧನ, ಜೇನು ಸಾಕಾಣಿಕೆ ಯೋಜನೆಯಡಿ ಜೇನುಪೆಟ್ಟಿಗೆ ಹಾಗೂ ಕುಟುಂಬ ಖರೀದಿಗೆ ಶೇ. 75 ಸಹಾಯಧನ ಇರುತ್ತದೆ.

ಕ್ಷೇತ್ರ ಮಟ್ಟದ ಗೋದಾಮು ನಿರ್ಮಾಣಕ್ಕೆ (ಶೇ.50) 1 ಲಕ್ಷ ರು. ಸಹಾಯಧನ, ತೋಟಗಾರಿಕೆ ಬೆಳೆಗಳ ಸಂಸ್ಕರಣಾ ಘಟಕ ಶೇ. 40 ರಲ್ಲಿ 10 ಲಕ್ಷ ರು. ಸಹಾಯಧನ, ಅಣಬೆ ಉತ್ಪಾದನೆ ಘಟಕಕ್ಕೆ ಶೇ.40 ರಂತೆ ಗರಿಷ್ಠ 8 ಲಕ್ಷ ರು. ಸಹಾಯಧನ, ಸೋಲಾರ್ ಪಂಪ್ ಅಳವಡಿಕೆಗೆ ಗರಿಷ್ಠ 1.50 ಲಕ್ಷ ರು., ಪ್ಯಾಕ್ ಹೌಸ್ ನಿರ್ಮಾಣಕ್ಕೆ ಗರಿಷ್ಠ 2 ಲಕ್ಷ ರು., ಸಂರಕ್ಷಿತ ಬೇಸಾಯ ಘಟಕ (ಪಾಲಿಹೌಸ್ ಮತ್ತು ನೆರಳು ಪರದೆ ಘಟಕಕ್ಕೆ) ಶೇ. 50 ಹನಿ ನೀರಾವರಿ, ತುಂತುರು ನೀರಾವರಿಗೆ ಶೇ.90, ತೋಟಗಾರಿಕೆಯಲ್ಲಿ ಯಾಂತ್ರೀಕರಣ ಯೋಜನೆ ಹಾಗೂ ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗ ನಿಯಂತ್ರಣಕ್ಕೆ ಬಳಕೆ ಮಾಡುವ ಕೀಟನಾಶಕ,ರೋಗ ನಾಶಕಗಳ ಖರೀದಿಗೆ ಶೇ.30 ರ ಸಹಾಯಧನ ಇರುತ್ತದೆ.

ರೈತರು ಪಹಣಿ,ಆಧಾರ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ಹಾಗೂ ಪರಿಶಿಷ್ಟ ಪಂಗಡ/ ಪರಿಶಿಷ್ಟ ಜಾತಿ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರದ ಪ್ರತಿಗಳೊಂದಿಗೆ ಜೂ.30ರ ಒಳಗೆ ಅರ್ಜಿ ಸಲ್ಲಿಸುವಂತೆ ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ