ರಾಮನಗರ: ವಕೀಲರು ಮತ್ತು ನ್ಯಾಯಾಧೀಶರು ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಸಮಯಾಭಾವ ಕಡಿಮೆ, ಆದರೂ ಜಿಲ್ಲಾ ಕೇಂದ್ರದ ವಕೀಲರು ಬಿಡುವಿನ ವೇಳೆಯಲ್ಲಿ ಪೌರಾಣಿಕ ನಾಟಕ ಕಲಿತು ಪ್ರದರ್ಶನ ಮಾಡುತ್ತಿರುವುದು ಶ್ಲಾಘನೀಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ವಿ.ರೇಣುಕಾ ಹೇಳಿದರು.
ಹನುಮಂತ ರಾಮನ ಪರಮ ಭಕ್ತ, ಆದರೆ ಹನುಮಂತ ರಾಮನ ವಿರುದ್ದವೇ ಯುದ್ದ ಮಾಡುವ ಪರಿಸ್ಥಿತಿ ಬರುತ್ತದೆ. ಕಾರಣ ಹನುಮಂತ ರಾಜನಿಗೆ ನೀಡಿದ ವಚನವೆ ಆಗಿತ್ತು. ಅಂದರೆ ಕೊಟ್ಟ ಮಾತಿಗೆ ತಪ್ಪಬಾರದು ಎಂಬುದೇ ಈ ನಾಟಕದ ಸಂದೇಶ ಎಂದು ಹೇಳಿದರು.
ಇಂದಿನ ಮಕ್ಕಳಿಗೆ ನಾಟಕ ಕಲೆಯ ಬಗ್ಗೆ ತಿಳಿವಳಿಕೆ ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾಟಕದ ವೀಕ್ಷಣೆಗೆ ಆಗಮಿಸುವ ಪ್ರತಿಯೊಬ್ಬರು ತಮ್ಮ ಮಕ್ಕಳಿಗೂ ನಾಟಕ ತೋರಿಸಬೇಕಿದೆ. ಸಿನಿಮಾ, ಯಕ್ಷಗಾನ ಮತ್ತು ಇತರೆ ಕಲೆಗಳಿಗಿಂತ ನಾಟಕವನ್ನು ರಸಭರಿತವಾದ ಕಲೆ ಎಂದೇ ಕರೆಯುತ್ತಾರೆ. ಹಾಗಾಗಿ ರಂಗಭೂಮಿ ನಾಟಕ ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದರಿಂದಲೇ ಈವತ್ತಿಗೂ ನಾಟಕ ಜೀವಂತವಾಗಿ ಉಳಿದಿದೆ. ಇಂತಹ ನಾಟಕವನ್ನು 3 ತಿಂಗಳ ಕಾಲ ಕಲಿತು ಪ್ರದರ್ಶನ ಮಾಡುತ್ತಿರುವ ವಕೀಲರು ಅಭಿನಂದನಾರ್ಹರು ಎಂದು ರೇಣುಕಾ ಶ್ಲಾಘಿಸಿದರು.ಇದೇ ಸಂದರ್ಭದಲ್ಲಿ ನಾಟಕದ ನಿರ್ದೇಶಕ ಮತ್ತು ಹಾರ್ಮೋನಿಯಂ ಮಾಸ್ಟರ್ ಸಚ್ಚಿದಾನಂದ ಮೂರ್ತಿ ಅವರಿಗೆ ಜಿಲ್ಲಾ ವಕೀಲರ ಸಂಘದ ವತಿಯಿಂದ ಕಲಾ ತಪಸ್ವಿ ಎಂಬ ಬಿರುದು ನೀಡಿ ಗೌರವಿಸಲಾಯಿತು.
11ಕೆಆರ್ ಎಂಎನ್ 3,4.ಜೆಪಿಜಿ
ರಾಮನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ಶ್ರೀ ರಾಮಾಂಜನೇಯ ಯುದ್ದ ಅಥವಾ ಭಕ್ತಿ ವಿಜಯ ಎಂಬ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ವಿ.ರೇಣುಕಾ ಚಾಲನೆ ನೀಡಿದರು.(ಈ ಫೋಟೋವನ್ನು ಪ್ಯಾನಲ್‌ನಲ್ಲಿ ಬಳಸಿ)
ರಾಮನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಶ್ರೀ ರಾಮಾಂಜನೇಯ ಯುದ್ದ ಪೌರಾಣಿಕ ನಾಟಕ ಪ್ರದರ್ಶಿಸಿದರು. ನ್ಯಾಯಾಧೀಶರಾದ ಬಿ.ವಿ.ರೇಣುಕಾ, ಎಂ.ಡಿ.ಮಹರ್ಕರ್, ರಾಘವೇಂದ್ರ, ಲೋಕೇಶ್, ಸವಿತಾ , ಮಹೇಶ್, ಅವಿನಾಶ್ ಚಿಂಧು ಇತರರು ಪಾಲ್ಗೊಂಡಿದ್ದರು.