ವಿಭೂತಿ ಹಚ್ಚಿದರೆ ಕರ್ಮ ಕಳೆಯುವುದಿಲ್ಲ: ಶ್ರೀಪಂಡಿತಾರಾಧ್ಯ ಸ್ವಾಮೀಜಿ

KannadaprabhaNewsNetwork |  
Published : Dec 12, 2024, 12:30 AM IST
10ಕಕೆಡಿಯು1. | Kannada Prabha

ಸಾರಾಂಶ

ಕಡೂರು, ವಿಭೂತಿ ಹಚ್ಚಿದರೆ ಕರ್ಮ ಕಳೆಯುವುದಿಲ್ಲ ಬದಲಾಗಿ ನಮ್ಮಲ್ಲಿ ಭಾವನೆಗಳು ಬದಲಾಗಬೇಕು ಭಕ್ತಿ ಮತ್ತು ಜ್ಞಾನ ಜಾಗೃತಿಯ ಸಂಕೇತ ಎಂದು ಸಾಣೇಹಳ್ಳಿಯ ಶ್ರೀಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ದಿ.ಚಂದ್ರಪ್ಪ ಅವರ ಸ್ಮರಣೆಯ ಸರ್ವ ಶರಣರ ಸಮ್ಮೇಳನ

ಕನ್ನಡ ಪ್ರಭ ವಾರ್ತೆ, ಕಡೂರು

ವಿಭೂತಿ ಹಚ್ಚಿದರೆ ಕರ್ಮ ಕಳೆಯುವುದಿಲ್ಲ ಬದಲಾಗಿ ನಮ್ಮಲ್ಲಿ ಭಾವನೆಗಳು ಬದಲಾಗಬೇಕು ಭಕ್ತಿ ಮತ್ತು ಜ್ಞಾನ ಜಾಗೃತಿಯ ಸಂಕೇತ ಎಂದು ಸಾಣೇಹಳ್ಳಿಯ ಶ್ರೀಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.ಕಡೂರು ಪಟ್ಟಣದ ಲಕ್ಷ್ಯಾ ಕಲ್ಯಾಣ ಮಂಟಪದಲ್ಲಿ ಸೋಮವಾರ ಲಲಿತಮ್ಮ ಚಂದ್ರಪ್ಪ ಅವರ ಕುಟುಂಬದವರು ದಿ.ಚಂದ್ರಪ್ಪ ಅವರ ಸ್ಮರಣೆಯ ಸರ್ವ ಶರಣರ ಸಮ್ಮೇಳನದಲ್ಲಿ ಮಾತನಾಡಿದರು. ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರ ನೀಡಿದರೆ ಅಂತಹ ಮಕ್ಕಳು ಸಮಾಜದಲ್ಲಿ ತಲೆಯೆತ್ತಿ ಬಾಳುತ್ತಾರೆ. ಇಲ್ಲಿ ಚಂದ್ರಪ್ಪನವರ ಮಕ್ಕಳು ನಡೆದುಕೊಳ್ಳುತ್ತಿರುವ ರೀತಿಯನ್ನು ಸಂಸ್ಕಾರ ಎಂದು ಕರೆಯಲಾಗುತ್ತದೆ.

ಇಂದು ಆಸ್ತಿ ಅಭಿಲಾಷೆ ಮಾತ್ರ ಇದೆಯೇ ಹೊರತು ತಂದೆ ತಾಯಿಗಳ ನೋಡಿಕೊಳ್ಳದಿರುವುದು ವಿಪರ್ಯಾಸ. ತಂದೆ-ತಾಯಿಗಳೇ ನಿಜವಾದ ದೇವರು ಎಂದು ಭಾವಿಸಿ ಅವರ ಸೇವೆ ಮಾಡಿದರೆ ಅದು ದೇವರ ಆಶೀರ್ವಾದ ಎಂಬುದನ್ನು ಅರಿಯ ಬೇಕಿದೆ. ನಮ್ಮಲ್ಲಿ ಭಾವನೆ ಬದಲಾಗಬೇಕು. ಸೇವೆ ಮೂಲಕ ವಿಭೂತಿಗೆ ಅನುಗುಣವಾಗಿ ಚಂದ್ರಪ್ಪನವರು ಬದುಕನ್ನು ನಡೆಸಿದ್ದಾರೆ. ಹೊರಗೆ ನಮ್ಮ ನಡೆ ನುಡಿ ಎಲ್ಲಲೂ ಸ್ವಚ್ಛವಾಗಿದ್ದರೆ ಶರಣರಾಗಲು ಸಾಧ್ಯ. ಶರಣ ಸಂಸ್ಕೃತಿಯಲ್ಲಿ ಪುನರ್ಜನ್ಮದಲ್ಲಿ ನಂಬಿಕೆ ಇಲ್ಲ ಎಂದರು.

ನಮ್ಮ ಮನಸ್ಸಿಗೆ ಅನುಗುಣವಾಗಿ ನಮ್ಮ ವ್ಯಕ್ತಿತ್ವ ಕೂಡ ಬದಲಾಗಬೇಕು. ಇತ್ತೀಚಿನ ದಿನಗಳಲ್ಲಿ ಆತ್ಮವಂಚನೆ ಹೆಚ್ಚಾಗಿದೆ ಒಳಗಿರುವ ಸಹನೆ ಮುಖದಲ್ಲಿ ಕಾಣಿಸುವುದಿಲ್ಲ. ಬಟ್ಟೆಯಿಂದ ವ್ಯಕ್ತಿ ವ್ಯಕ್ತಿತ್ವ ಅಳೆಯಲು ಸಾಧ್ಯವಿಲ್ಲ ಎಂದರು.ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ವೇದಿಕೆಗೆ ಕರೆದರೂ ಬರಲಿಲ್ಲ. ಜನ ನಮ್ಮನ್ನು ಮರೆತರು. ಹಾಗಾಗಿ ವೇದಿಕೆ ಮೇಲೆ ಕೂರು ವುದು ಸೂಕ್ತವೇ ಎಂದು ತಮಗೆ ಕೇಳಿದರು.ಯಾರು ನಮಗೆ ಸಹಕಾರ ಮಾಡಿರುತ್ತಾರೆ ಅವರನ್ನು ಸ್ಮರಿಸಬೇಕು. ಜನರು ದೊಡ್ಡವರೆಂದು ಭಾವಿಸಿದರೆ ಮಾತ್ರ ಜನಪ್ರತಿ ನಿಧಿಗಳಾಗಲು ಸಾಧ್ಯ ಜನರನ್ನು ಉಪೇಕ್ಷಿಸಬಾರದು ಎಂದರು.ಸಾಹಿತಿ ಚಟ್ನಹಳ್ಳಿ ಮಹೇಶ್ ಮಾತನಾಡಿ, ಮನುಷ್ಯನ ಜೀವ ನಿಲ್ದಾಣವಿದ್ದಂತೆ ಸಮಯ ಬಂದಾಗ ನಮ್ಮ ನಿಲ್ದಾಣದಲ್ಲಿ ಇಳಿಯಲೇಬೇಕು. ಇದು ಜಾಗತಿಕ ಸತ್ಯ. ಮನುಷ್ಯ ಚಿರಂಜೀವಿಯಾಗಿ ಉಳಿಯಲು ಸಾಧ್ಯವಿಲ್ಲ. ಆದರೆ ಅವರು ನೀಡಿ ಹೋಗುವ ಆದರ್ಶ ಚಿರವಾಗಿ ಉಳಿದು, ಅವರನ್ನು ಶಾಶ್ವತವಾಗಿ ನೆಲೆಗೊಳಿಸುತ್ತವೆ. ಇಂತಹ ಪಟ್ಟಿಗೆ ಗಂಧದ ಚಂದ್ರಪ್ಪ ಉದಾಹರಣೆ. ಸಾರ್ಥಕ ಬದುಕು ಸಾಗಿಸಿದ ಅವರ ಸಂಸ್ಕಾರ, ಸಜ್ಜನಿಕೆ ಎಂದಿಗೂ ಶಾಶ್ವತವಾಗಿರುತ್ತದೆ ಎಂದರು. ಕಡೂರು ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಜ್ಞಾನೇಶ್ವರಿ ಅಕ್ಕ, ಮಂಗಳೂರು ವಿವಿಯ ನಿವೃತ್ತ ಉಪನ್ಯಾಸಕ ಡಾ.ಸೋಮಶೇಖರ್, ಬಿಜೆಪಿ ಮುಖಂಡ ಟಿ.ಆರ್.ಲಕ್ಕಪ್ಪ ಮಾತನಾಡಿದರು. ರಾಜ್ಯ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ ಬೆಳ್ಳಿಪ್ರಕಾಶ್, ಮಾಜಿ ಶಾಸಕ ಡಿ.ಎಸ್.ಸುರೇಶ್, ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಎಂ.ಆರ್.ಮರುಳಸಿದ್ದಪ್ಪ,ಮಲ್ಲೇಶಪ್ಪ, ಶೆಟ್ಟಿಹಳ್ಳಿ ರಾಮಪ್ಪ, ಮರುಳಪ್ಪ, ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸವಿತಾ ರಮೇಶ್, ಸುಧಾಉಮೇಶ್, ಕಾವೇರಿ ಲಕ್ಕಪ್ಪ, ಎಚ್.ಎಂ.ರೇವಣ್ಣಯ್ಯ, ವನಮಾಲ ದೇವರಾಜು, ಶೂದ್ರ ಶ್ರೀನಿವಾಸ್ , ಜಿಗಣೆಹಳ್ಳಿ ನೀಲಕಂಠಪ್ಪ, ಎಚ್.ಎಂ.ರೇವಣ್ಣಯ್ಯ, ಕೆ.ಎಂ. ಮಹೇಶ್ವರಪ್ಪ, ಬಿದರೆ ಜಗದೀಶ್, ಕೆ.ಬಿ.ಸೋಮೇಶ್, , ಚಂದ್ರಪ್ಪವರ ಪುತ್ರ ಮಲ್ಲಿಕಾರ್ಜುನ್, ಕಿರಣ್ ಹಾಗೂ ಬಂಧುಗಳು ಇದ್ದರು. -- ಬಾಕ್ಸ್ ಸುದ್ದಿಗೆ---ಕಾರ್ಯಕ್ರಮದಲ್ಲಿ ಎಸ್.ಎಂ. ಕೃಷ್ಣರವರ ನಿಧನಕ್ಕೆ ಸಂತಾಪ ಸೂಚಿಸಿದ ಬಳಿಕ ಸಾಣೇಹಳ್ಳಿ ಶ್ರೀಗಳು ಮಾತನಾಡಿ, ಮಾಹಿತಿ ತಂತ್ರಜ್ಞಾನಕ್ಕೆ ಆದ್ಯತೆ ನೀಡಿ ಅದನ್ನು ರಾಜ್ಯದ ಅಭಿವೃದ್ಧಿಗೆ ಅನುಷ್ಠಾನಗೊಳಿಸಿದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು. ಕೇಂದ್ರ ಸಚಿವರಾಗಿ, ರಾಜ್ಯಪಾಲರಾಗಿ, ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿ ಉತ್ತಮ ವ್ಯಕ್ತಿತ್ವ ಹೊಂದಿದವರು. ಬಹುಶಃ ಅಂತಹ ವ್ಯಕ್ತಿಗಳನ್ನು ಮುಂದಿನ ದಿನಗಳಲ್ಲಿ ನೋಡುವುದು ವಿರಳ ಎಂದು ಅಭಿಪ್ರಾಯಿಸಿದರು.10ಕೆಕೆಡಿಯು1.

ಕಡೂರು ಪಟ್ಟಣದ ಲಕ್ಷ್ಯಾ ಕಲ್ಯಾಣ ಮಂಟಪದಲ್ಲಿ ಲಲಿತಮ್ಮ ಚಂದ್ರಪ್ಪ ಅವರ ಕುಟುಂಬದವರು ದಿ.ಚಂದ್ರಪ್ಪ ಅವರ ಸ್ಮರಣೆಗಾಗಿ ಆಯೋಜಿಸಿದ್ದ ಸರ್ವ ಶರಣರ ಸಮ್ಮೇಳನದಲ್ಲಿ ಸಾಣೆಹಳ್ಳಿಯ ಶ್ರೀಗಳು ಮಾತನಾಡಿದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ