ಕನ್ನಡಪ್ರಭ ವಾರ್ತೆ ಕಲಬುರಗಿ
ಯಡ್ರಾಮಿಯಲ್ಲಿ ನಡೆದ ಪ್ರಜಾಸೌಧ, 300 ಕೆಪಿಎಸ್ ಶಾಲೆಗಳ ನಿರ್ಮಾಣ ಯೋಜನೆಗೆ ಅಡಿಗಲ್ಲಿಟ್ಟು ಅವರು ಮಾತನಾಡಿದರು.
ಶಾಲೆಗಳಿವೆ, ಶಿಕ್ಷಕರಿಲ್ಲದೆ ಬಣಗುಡುತ್ತಿವೆ. ಹೆಚ್ಚಿನ ಶಿಕ್ಷಕರು ಖಾಲಿರುವ ಜಿಲ್ಲೆಗಳು ಕಲ್ಯಾಣ ನಾಡಲ್ಲಿವೆ, ಸರ್ಕಾರ ಮೊದ್ಲು ಶಿಕ್ಷಕರನ್ನ ನೇಮಿಸಿ, 10 ಸಾವಿರ ಶಕಿಕ್ಷಕರನ್ನು ನೇಮಿಸಲು ಹೊರಟರೆ ಶೇ. 75ರಷ್ಟು ಕಲ್ಯಾಣ ನಾಡಿನ ಜಿಲ್ಲೆಗಳಿಗೆ ಆದ್ಯತೆ ನೀಡಿರೆಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಖರ್ಗೆ ಸೂಚಿಸಿದರು.ಡಿಕೆಸಿಗೆ ಖರ್ಗೆ ಟಾಂಗ್
ಬಫೆ ಸಿಸ್ಟಂ ನಲ್ಲಿದ್ದೀರಿ ನೀವು
ಮದುವೆ, ಸಮಾರಂಭಗಳಲ್ಲಿರುವಂತೆ ಬಫೆ ಊಟದಲ್ಲಿ ಮೊದಲು ಹೋದವರಿಗೆ ಸಾಕಷ್ಟು ಖಾದ್ಯ ಸಿಗುವಂತೆ ನಾವು ರಾಜಧಾನಿ ಸುತ್ತಲಿದ್ದೀರಿ, ಅಲ್ಲಿಂದಲೇ ನಿಮಗೆ ಮೊದಲಿನಿಂದಲೂ ಅನುದಾನ ಸಿಕ್ಕಿದೆ, ನಾವು ಪಂಕ್ತಿಯಲ್ಲಿ ಕುಂತವರು. ಯಾರಾದರೂ ಸರಿಯಾಗಿ ಬಡಿಸುತ್ತಾರೆಯೋ ಎಂದು ಕಾದಿದ್ದವರು. ನಮಗೆ ಮನಸೋ ಇಚ್ಚೆ ಅನುದಾನವೇ ಸಿಗಲಿಲ್ಲವೆಂದು ಬಫೆ ಊಟ, ಪಂಕ್ತಿ ಊಟದ ಉದಾಹರಣೆ ಕೊಟ್ಟು ಖರ್ಗೆಯವರು ವಿವರಿಸಿದಾಗ ಸಭೆಯಲ್ಲಿ ನಗೆ ಮೂಡಿತ್ತು. ಈ ಮಾತನ್ನು ಶಿವಕುಮಾರ್ ನಗುತ್ತಲೇ ಆಲಿಸಿದರು.ಧರ್ಮ, ದೇವರ ಹೆಸರಿನಲ್ಲಿ ಪ್ರಧಾನಿ ಮೋದಿ ದೇಶವನ್ನೇ ಲೂಟಿ ಮಾಡುತ್ತಿದ್ದಾರೆಂದು ಟೀಕಿಸಿದ ಡಾ. ಮಲ್ಲಿಕಾರ್ಜುನ ಖರ್ಗೆ
ಧರ್ಮ, ದೇವರ ಹೆಸರಿನ ಮೇಲೆ ಪ್ರಧಾನಿ ಮೋದಿ ಇಡೀ ದೇಶವನ್ನೇ ಲೂಟಿ ಮಾಡುತ್ತಿದ್ದಾರೆ, ಇದರ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು ಎಂದರು.ಹಿಂದೂ-ಮುಸ್ಲಿಂ, ಹಿಂದೂ -ಸಿಖ್ ಜನರ ಮಧ್ಯೆ ಜಗಳ ಹಚ್ಚುವುದು ಇವರ ಕೆಲಸವಾಗಿದೆ, ಇದು ಕಲ್ಯಾಣ ಕರ್ನಾಟಕ, ಕಲ್ಯಾಣ ಕ್ರಾಂತಿ ಮಾಡಿರುವ ಬಸವಣ್ಣನ ಊರು. ನಮ್ಮ ಭಾಗ ಸಮಾನತೆಗೆ ಹೆಸರಿರುವ ಸ್ಥಳವಾಗಿದೆ, ಜಗಳ ಹಚ್ಚುವಂತಹ ಸನ್ನಿವೇಶದಲ್ಲಿ ಒಗ್ಗಟ್ಟಾಗಿರಬೇಕು ಎಂದು ಕರೆ ನೀಡಿದರು.
ಬಡವರ ಹೊಟ್ಟೆ ಹೊಡೆದ ಮೋದಿ :ಕೇಂದ್ರದಲ್ಲಿ ಯಾವುದೋ ಜೀ ರಾಮ್ ಜೀ ಎನ್ನುವ ಹೆಸರಿನಲ್ಲಿ ಕಾಯ್ದೆ ಜಾರಿ ಮಾಡಿ, ನರೇಗಾವನ್ನು ಮಣ್ಣುಪಾಲು ಮಾಡುತ್ತಿದ್ದಾರೆ. ಬೇಸಿಗೆ ಕಾಲದಲ್ಲಿ ಬಡವರಿಗೆ ಬದುಕಾದ ಮನರೇಗಾ ಯೋಜನೆ ಬದಲಿಸಿ, ಮೋದಿ ಬಡವರ ಹೊಟ್ಟೆ ಹೊಡೆಯುತ್ತಿದ್ದಾರೆ ಎಂದರು.
ನರೇಗಾ ಉಳಿಸಲು ಯುದ್ಧಕ್ಕೂ ಸಿದ್ಧರಾಗಬೇಕು :ಅಂಬೇಡ್ಕರ್ ಅವರ ಆಶಯದಂತೆ ಬಡವರ ಸಬಲೀಕರಣಕ್ಕೆ ಮಾಜಿ ಪ್ರಧಾನಿ ದಿ.ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ನರೇಗಾ ಜಾರಿಗೆ ಮಾಡಲಾಗಿತ್ತು. ಆದರೆ ಈಗ ಒಂದೊಂದಾಗಿ ಕಾನೂನು ಕಸಿದುಕೊಂಡು ತಿನ್ನುತ್ತಿದ್ದಾರೆ. ಇಂತಹ ವೇಳೆಯಲ್ಲಿ ನರೇಗಾ ಉಳಿಸಲು ಜನರು ಯುದ್ಧಕ್ಕೂ ಸಿದ್ಧರಾಗಬೇಕು ಎಂದು ಹೇಳಿದರು.