ಮಂಡ್ಯ:
ಮಹಾಸಭಾದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್.ಆರ್.ಚಂದ್ರಶೇಖರ್ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ವಿವಿಧ ಪದಾಧಿಕಾರಿಗಳು ಮಂಗಳವಾರ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಎಚ್.ಮುನಿಯಪ್ಪ ಅವರನ್ನು ಭೇಟಿ ನಿರ್ಣಯಕ್ಕೆ ಸಹಿ ಮಾಡುವ ಮೂಲಕ ಜಿಲ್ಲಾ ಸಮಿತಿ ಅಸ್ತಿತ್ವಕ್ಕೆ ತರಲಾಯಿತು.
ಮಹಾಸಭಾ ಜಿಲ್ಲಾಧ್ಯಕ್ಷರಾಗಿ ಕೆ.ಆರ್.ಪೇಟೆ ತಾಲೂಕು ಬಿ.ಬಿ.ಕಾವಲ್ ಗ್ರಾಮದ ಬಿ.ಎನ್.ಕಾಂತರಾಜು, ಉಪಾಧ್ಯಕ್ಷರಾಗಿ ಹುನಗನಹಳ್ಳಿ ಕಾಲೋನಿಯ ವಕೀಲ ಜಯರಾಮು, ಪ್ರಧಾನ ಕಾರ್ಯದರ್ಶಿಯಾಗಿ ಚಾಮನಹಳ್ಳಿ ಮಂಜು, ಖಚಾಂಚಿಯಾಗಿ ಅಲ್ಲಾಪಟ್ಟಣ ಗ್ರಾಮದ ಜಯಂತಿ ಆಯ್ಕೆಯಾಗಿದ್ದಾರೆ.ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹೊಸಹೊಳಲು ಎಚ್.ಎಂ.ಪುಟ್ಟರಾಜು, ಕುಮಾರ ಬಾಳೆಹೊನ್ನಿಗ, ಹನಿಯಂಬಾಡಿ ಜಗದೀಶ್, ಗೋವಿಂದಯ್ಯ ಅಲ್ಪಹಳ್ಳಿ, ಕೃಷ್ಣಯ್ಯ ಇಜ್ವಲಘಟ್ಟ, ವಿಶೇಷ ಆಹ್ವಾನಿತರಾಗಿ ಜಿಪಂ ಮಾಜಿ ಅಧ್ಯಕ್ಷ ಆರ್.ಕೆ.ಕುಮಾರ್, ಜಿಲ್ಲಾ ಮಾದಿಗ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಿ.ಕೆ.ಪಾಪಯ್ಯ, ಉದ್ಯಮಿ ಕುಚೇಲ, ಮುಖಂಡ ಬಿ.ಕೃಷ್ಣ ಗಾಂನಗರ, ಬೆಳ್ಳಾಳೆ ಜವರಾಯಿ ಹಾಗೂ ವಕೀಲ ಕನ್ನಲಿ ಸಿ.ಕೆಂಪಯ್ಯ ನೇಮಕವಾಗಿದ್ದಾರೆ.
ಕರ್ನಾಟಕ ಮಾದರ ಮಹಾಸಭೆಯು 2015ರಲ್ಲಿ ಮಾದಿಗ ಸಮುದಾಯದ ಸಬಲೀಕರಣ ಮತ್ತು ಸರ್ವಾಂಗೀಣ ಅಭಿವೃದ್ಧಿ ಉದ್ದೇಶದಿಂದ ಸ್ಥಾಪಿತವಾಗಿದ್ದು, ಸಮುದಾಯದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ನೂತನ ಪದಾಧಿಕಾರಿಗಳು ಕೆಲಸ ಮಾಡುವಂತೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್.ಆರ್.ಚಂದ್ರಶೇಖರ್ ಮನವಿ ಮಾಡಿದ್ದಾರೆ.ಫೆ.೩ರಂದು ಸರ್ವಧರ್ಮ ಮಾನವ ಸಮ್ಮೇಳನ: ಜೆ.ರಾಮಯ್ಯಮಂಡ್ಯ:
ಬುದ್ಧ ಭಾರತ ಫೌಂಡೇಷನ್ ವತಿಯಿಂದ ಫೆ.೩ರಂದು ಶ್ರೀರಂಗಪಟ್ಟಣ ತಾಲೂಕಿನ ನೇರಲಕೆರೆಯಲ್ಲಿ ಸರ್ವಧರ್ಮ ಮಾನವ ಸಮ್ಮೇಳನ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಜೆ.ರಾಮಯ್ಯ ತಿಳಿಸಿದರು.ಸರ್ವಧರ್ಮದ ಮುಖಂಡರಾದ ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಮ್ಮೇಳನ ನಡೆಯಲಿದೆ. ಸುತ್ತೂರಿನ ಶ್ರೀಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿ, ಮೈಸೂರಿನ ಉರಿಲಿಂಗಿ ಪೆದ್ದಿಮಠದ ಶ್ರೀಜ್ಞಾನ ಪ್ರಕಾಶ್ ಸ್ವಾಮೀಜಿ, ಬೆಂಗಳೂರಿನ ಮಹಾಬೋಧಿ ಸೊಸೈಟಿ ಆನಂದ ಬಂತೆ ಬೌದ್ಧ ಧಮ್ಮ ಅನುಯಾಯಿಗಳು, ಕೊಳ್ಳೇಗಾಲದ ಮನೋರಬ್ಬಿತ ಬಂತೆ ಜೇತವನ, ಚಾಮರಾಜನಗರ ನಳಂದ ವಿವಿ ಮುಖ್ಯಸ್ಥ ಬೋಧಿದತ್ತಬಂತೆ, ಕೈಸ್ತ ಧರ್ಮದ ಪಾದ್ರಿಗಳು, ಮುಸ್ಲಿಂ ಧರ್ಮದ ಮೌಲ್ವಿಗಳು, ಸಿಖ್ ಧರ್ಮದ ಧಾರ್ಮಿಕ ಮುಖಂಡರು, ಜೈನ ಧರ್ಮದ ಜೈನಮುನಿಗಳು ಹಾಗೂ ಇತರ ಧರ್ಮದ ಧಾರ್ಮಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ, ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ, ಶಾಸಕರಾದ ಪಿ.ರವಿಕುಮಾರ್, ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಅವರನ್ನೂ ಆಹ್ವಾನಿಸಿರುವುದಾಗಿ ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಬೌದ್ಧ ಬಿಕ್ಕುಗಳಿಂದ ಲೋಕಶಾಂತಿ ಮತ್ತು ಪ್ರಗತಿಗಾಗಿ ಮೆತ್ತಭಾವ ಪ್ರಾರ್ಥನೆ, ಬೌದ್ಧ ಸಮ್ಮೇಳನ ಉದ್ಘಾಟನೆ, ವಿಶ್ವಮೈತ್ರಿ ಬೌದ್ಧ ಧಮ್ಮ ಧ್ಯಾನ ಮತ್ತು ಇತರೆ ಕೇಂದ್ರಗಳ ಉದ್ಘಾಟನೆ, ವೃದ್ಧಾಶ್ರಮ, ಲೈಬ್ರರಿ, ರತನ್ ಟಾಟಾ ಸ್ಮರಣಾರ್ಥ ಎ.ಜೆ. ಉದ್ಯೋಗಾಧಾರಿತ ತರಬೇತಿ ಕೇಂದ್ರ ಉದ್ಘಾಟನೆ, ೫೦ ಜನ ಬೌದ್ಧ ಧಮ್ಮಚಾರಿಗಳಿಗೆ ಅಭಿನಂದಿಸಲಾಗುವುದು ಎಂದರು.
ಗಂಗರಾಜು ಹನಕೆರೆ, ನಿರಂಜನ್ ಬೌದ್ಧ, ಮಹೇಂದ್ರ, ಎಂ.ವಿ.ಕೃಷ್ಣ ಮೋಹನ್ ಪ್ರಬುದ್ಧಿ, ಅನ್ನದಾನಿ ಇತರರಿದ್ದರು.