ಕನ್ನಡಪ್ರಭ ವಾರ್ತೆ ಯಾದಗಿರಿ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿವಿಧ ಚಟುವಟಿಕೆಗಳ ಪರಿಣಾಮಕಾರಿ ನಿರ್ವಹಣೆ ಮತ್ತು ಮೇಲ್ವಿಚಾರಣೆಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ. ತಿಳಿಸಿದ್ದಾರೆ.ಪಿಂಚಣಿ ಇಲಾಖೆ ಸಹಾಯಕ ನಿರ್ದೇಶಕ ವೀರೇಂದ್ರ ಹುಲಿನಾಯಕ್ ಮಾನವಶಕ್ತಿ ನಿರ್ವಹಣೆ, ಡಿಟಿಐ ಪ್ರಾಂಶುಪಾಲ್ ಉದಯ ಕುಮಾರ್ ತರಬೇತಿ ನಿರ್ವಹಣೆ, ಜಿಲ್ಲಾ ಕಾರ್ಮಿಕ ಇಲಾಖಾಧಿಕಾರಿ ಉಮಾಶ್ರೀ ವಸ್ತು ನಿರ್ವಹಣೆ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಿಲಿಂದ್ ಕುಮಾರ್ ಸಾರಿಗೆ ನಿರ್ವಹಣೆ, ಡಿಐಒ, ಎನ್.ಐ.ಸಿ ಅಧಿಕಾರಿ ಶ್ರೀನಿವಾಸ ಗಣಕೀಕರಣ, ಸೈಬರ್ ಭದ್ರತೆ ಮತ್ತು ಐಟಿ, ಜಿಪಂ ಸಿಇಓ ಗರಿಮಾ ಪನ್ವಾರ ಸ್ವೀಪ್ ಹಾಗೂ ಎಂಸಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಕಾನೂನು ಮತ್ತು ಸುವ್ಯವಸ್ಥೆ ವಿಎಂ ಮತ್ತು ಭದ್ರತಾ ಯೋಜನೆ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ಇವಿಎಂ ನಿರ್ವಹಣೆ, ಭೀ.ಗುಡಿಯ ಕೆಬಿಜೆಎನ್‌ಎಲ್ ಮುಖ್ಯ ಲೆಕ್ಕಾಧಿಕಾರಿ ಮಹೇಶ್ ಮಾಲಗತ್ತಿ ವೆಚ್ಚದ ಮೇಲ್ವಿಚಾರಣೆ, ಅಪರ ಜಿಲ್ಲಾಧಿಕಾರಿ ಕಾರ್ಯಾಲಯದ ಅಮರೇಶ ಬಿರಾದಾರ್ ಪೋಸ್ಟಾಲ್ ಬ್ಯಾಲೆಟ್ ಹಾಗೂ ಇಟಿಪಿಬಿಎಸ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುಲೈಮಾನ್. ಡಿ.ನದಾಫ್ ಮಾಧ್ಯಮ, ಭೂ ದಾಖಲೆ ಇಲಾಖೆ ಉಪ ನಿರ್ದೇಶಕ ವರುಣ್ ಸಂವಹನ ಯೋಜನೆ, ಸಹಾಯಕ ಆಯುಕ್ತರಾದ ಹಂಪಣ್ಣ ಸಜ್ಜನ್ ಮತದಾರರ ಪಟ್ಟಿಗಳು, ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಅಜಿತ್ ಜಿ.ನಾಯ್ಕ್ ದೂರುಗಳ ಪರಿಹಾರ ಮತ್ತು ಮತದಾರರ ಸಹಾಯವಾಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ವಿರಣ್ಣಗೌಡ, ಜಿಪಂ ಪಿಡಿಡಿಆರ್‌ಡಿಎ ಬಲವಂತ ರಾಥೋಡ್ ವೀಕ್ಷಕ ನೋಡೆಲ್ ಅಧಿಕಾರಿಗಳು ಎಂದು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.