ಸ್ಕಾಡಾ ಗೇಟ್‌ ಅಳವಡಿಕೆಗೆ ಸೂಕ್ತ ಕ್ರಮ

KannadaprabhaNewsNetwork |  
Published : Aug 13, 2025, 02:31 AM IST
ಅಪ್ಪಾಜಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಮಂಗಳವಾರ ಎರಡನೇ ದಿನದ ಅಧಿವೇಶನದ ಪ್ರಶ್ನಾವಳಿ ಕಲಾಪದಲ್ಲಿ 33 ಗುರ್ತಿನ ಸಂಖ್ಯೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರಿಗೆ ಶಾಸಕ ಹಾಗೂ ಕೆಎಸ್‌ಡಿಎಲ್‌ ಅಧ್ಯಕ್ಷ ಸಿ.ಎಸ್.ನಾಡಗೌಡ ಪ್ರಶ್ನಿಸಿಸುವ ಮೂಲಕ ಗಮನ ಸೆಳೆದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಮಂಗಳವಾರ ಎರಡನೇ ದಿನದ ಅಧಿವೇಶನದ ಪ್ರಶ್ನಾವಳಿ ಕಲಾಪದಲ್ಲಿ 33 ಗುರ್ತಿನ ಸಂಖ್ಯೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರಿಗೆ ಶಾಸಕ ಹಾಗೂ ಕೆಎಸ್‌ಡಿಎಲ್‌ ಅಧ್ಯಕ್ಷ ಸಿ.ಎಸ್.ನಾಡಗೌಡ ಪ್ರಶ್ನಿಸಿಸುವ ಮೂಲಕ ಗಮನ ಸೆಳೆದರು.

ಆಲಮಟ್ಟಿ ಕೃಷ್ಣಾ ಭಾಗ್ಯ ಜಲನಿಗಮದ ಎಎಲ್‌ಬಿಸಿ ಕಾಲುವೆ ಪ್ರಾರಂಭಿಸಲಾಗಿದ್ದು, ಇವುಗಳ ದುರಸ್ಥಿ ಬಗ್ಗೆ ಅಧಿವೇಶನದಲ್ಲಿ ನಾನು ಚರ್ಚಿಸಿದ್ದಾಗಲೂ ಸಹಿತ ಕಾಮಗಾರಿ ವಿಳಂಭವಾಗುತ್ತಿದೆ. ಈ ಕೂಡಲೇ ಸರ್ಕಾರ ಆದಷ್ಟು ಬೇಗ ಈ ಎಎಲ್‌ಬಿಸಿ ಯೋಜನೆಯಡಿಯಲ್ಲಿ ಪುನಃ ಕಾಮಗಾರಿ ಕೈಗೊಳ್ಳಬೇಕು. ಎಎಲ್‌ಬಿ ಸಿ ಹಾಗೂ ಮುಳವಾಡ ಏತನೀರಾವರಿ ಸೇರಿ ಇತರೇ ನೀರಾವರಿ ಯೋಜನೆಗಳು ಆಲಮಟ್ಟಿ ಜಲಾಶಯದ ಕೆಳಭಾಗದ ನೀರು ಎತ್ತುವ ನೀರಾವರಿ ಯೋಜನೆಗಳಾಗಿದ್ದರಿಂದ ಜಲಾಶಯದಿಂದ ನೀರು ಹರಿಬಿಡುವ ಸಂದರ್ಭದಲ್ಲಿ ಪೋಲಾಗಿ ಮುದ್ದೇಬಿಹಾಳ ತಾಲೂಕು ಸೇರಿದಂತೆ ಬಹುತೇಕ ಕಡೆಗಳ ರೈತರ ಜಮೀನುಗಳಿಗೆ ನುಗ್ಗಿ ಸಾವಿರಾರು ಎಕರೆ ಭೂಮಿ ಜವಳಾಗಿ ಬೆಳೆ ಬೆಳೆಯಲು ಸಾಧ್ಯವಾಗದಾಗಿದೆ. ಈ ಸಮಸ್ಯೆಯಿಂದ ರೈತರನ್ನು ರಕ್ಷಿಸಿ ಅನುಕೂಲ ಮಾಡಿಕೊಡಲು ಸ್ಕಾಡಾ ಗೇಟ್ ಅಳವಡಿಸಬೇಕು ಎನ್ನುದುವು ನನ್ನ ಹೋರಾಟ. ಅದು ಈತನಕವೂ ಸಾಧ್ಯವಾಗಿಲ್ಲ. ಈ ಸ್ಕಾಡಾ ಗೇಟ್ ಅಳವಡಿಸುವುದರಿಂದ ಎಷ್ಟು ಬೇಕೋ ಅಷ್ಟು ನೀರನ್ನು ಎಲ್ಲಿ ಅಗತ್ಯವಿದೆಯೋ ಅಲ್ಲಿ ಮಾತ್ರ ಎಲ್ಲಿ ಮಾತ್ರ ಹೇಗೆ ನೀರನ್ನು ಸದ್ಭಳಕೆ ಮಾಡಿಕೊಳ್ಳಲು ಸಹಕಾರಿಯಾಗಿದೆ. 2016-17ರಲ್ಲಿಯೇ ಅಂದಿನ ಅಧಿವೇಶನದಲ್ಲಿಯೇ ಈ ಸ್ಕಾಡಾ ಗೇಟ್ ಅಳವಡಿಕೆ ಕುರಿತು ಚರ್ಚೆ ನಡೆದು ಕಾಮಗಾರಿ ಕೈಗೊಳ್ಳಲು ರೇಕಾರ್ಡ್‌ ಪುಸ್ತಕದಲ್ಲಿಯೇ ಉಲ್ಲೇಖಿಸಲಾಗಿದೆ. ಮುಂಬರುವ ದಿನಗಳಲ್ಲಿ ಬೋರ್ಡ್‌ ಮೀಟಿಂಗ್‌ನಲ್ಲಿ ಈ ವಿಷಯವನ್ನು ಸಭೆಯ ಗಮನಕ್ಕೆ ತರುವುದರೊಂದಿಗೆ ಅನುಮತಿ ನೀಡಿದರೆ ಟೆಂಡೆರ್ ಪ್ರಕ್ರಿಯೆ ಸೇರಿದಂತೆ ಇತರೆ ಕ್ರಮ ಕೈಗೊಳ್ಳಬೇಕಾದರೇ ಕನಿಷ್ಠ ಒಂದು ವರ್ಷ ಕಾಲಾವಕಾಶ ಬೇಕಾಗುತ್ತದೆ. ತ್ವರಿತಗತಿಯಲ್ಲಿ ಬಹುಮುಖ್ಯವಾಗಿರುವ ಸ್ಕಾಡಾ ಗೇಟ್ ಅಳವಡಿಕೆಗೆ ಸರ್ಕಾರ ಮುಂದಾಗಬೇಕು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರಗೆ ಒತ್ತಾಯಿಸಿದರು.ಈಗಾಗಲೇ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ತಮ್ಮ ಭಾಗದ ಮುದ್ದೇಬಿಹಾಳ, ಬಸವನ ಬಾಗೇವಾಡಿ ಮತಕ್ಷೇತ್ರ ಹಾಗೂ ಸುರಪುರ ಭಾಗ ಮಾತ್ರವಲ್ಲದೇ ಇತರೆ ಜಿಲ್ಲೆಯ ಮತಕ್ಷೇತ್ರದ ಜನರ ಮತ್ತು ರೈತರ ಹಿತಕ್ಕಾಗಿ ಸ್ಕಾಡಾ ಯೋಜನೆ ಮತ್ತು ಎಎಲ್‌ಬಿಸಿ ಯೋಜನೆಯ ಉಪ ಕಾಲುವೆಗಳನ್ನು ಪುನಃ ದುರಸ್ಥಿಗೊಳಿಸಬೇಕೆನ್ನುವ ಪ್ರಶ್ನೆ ಕೇಳಿದ್ದಾರೆ. ಶಾಸಕರ ಸಾಮಾಜಿಕ ಕಳಕಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಸಚಿವ ಡಿ.ಕೆ.ಶಿವಕುಮಾರ ಹೇಳಿದರು.

ಅಲ್ಲದೇ,ಎಎಲ್‌ಬಿಸಿ ಯೋಜನೆ ಬಹಳ ಹಳೆಯ ಯೋಜನೆ. ಅದರಂತೆ ಈಗಾಗಲೇ 30ರಿಂದ 54 ಯೋಜನೆ ಅನುಷ್ಠಾನಗೊಳಿಸಲಾಗಿದೆ. ಸ್ಕಾಡಾ ಯೋಜನೆಯಡಿಯಲ್ಲಿ ಕಾಲುವೆಗಳ ದುರಸ್ಥಿಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಅದರಂತೆ ₹ 94 ಕೋಟಿ ಹಾಗೂ ₹ 76 ಕೋಟಿಗಳ ವಿಶೇಷ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು. ಅವರ ಕಳಕಳಿಗೆ ಸ್ಪಂದಿಸುವ ಮೂಲಕ ಅತೀ ಶೀಘ್ರದಲ್ಲಿಯೇ ಶಾಸಕ ಅಪ್ಪಾಜಿ ನಾಡಗೌಡರನ್ನು ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ನಮ್ಮ ಕಚೇರಿಗೆ ಕರೆದು ಚರ್ಚಿಸಿ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಡಿ.ಕೆ.ಶಿವಕುಮಾರ ಸದನದಲ್ಲಿ ಉತ್ತರಿಸಿದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್