ಕಾಂಗ್ರೆಸ್‌ ಪಕ್ಷದಲ್ಲಿ ಸತ್ಯ ಹೇಳಲಿಕ್ಕೆ ಅವಕಾಶವಿಲ್ಲ

KannadaprabhaNewsNetwork |  
Published : Aug 13, 2025, 02:31 AM IST
ಜಜ್ಜಜ್ಜ್ಜಜ | Kannada Prabha

ಸಾರಾಂಶ

ಕಾಂಗ್ರೆಸ್ ಪಕ್ಷದಲ್ಲಿ ಸತ್ಯ ಹೇಳಲಿಕ್ಕೆ ಅವಕಾಶವಿರುವುದಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸತ್ಯ ಹೇಳಲಿಕ್ಕೆ ಅವಕಾಶ ನೀಡಬೇಕು. ಸಹಕಾರ ಸಚಿವ ರಾಜಣ್ಣನವರನ್ನು ಯಾವುದೇ ಕಾರಣ ನೀಡದೇ ರಾಜಿನಾಮೆಗೂ ಅವಕಾಶ ನೀಡದೇ ಸಂಪುಟದಿಂದ ವಜಾ ಮಾಡಿರುವುದು ಪರಿಶಿಷ್ಟ ಸಮೂದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಘಟಪ್ರಭಾ

ಕಾಂಗ್ರೆಸ್ ಪಕ್ಷದಲ್ಲಿ ಸತ್ಯ ಹೇಳಲಿಕ್ಕೆ ಅವಕಾಶವಿರುವುದಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸತ್ಯ ಹೇಳಲಿಕ್ಕೆ ಅವಕಾಶ ನೀಡಬೇಕು. ಸಹಕಾರ ಸಚಿವ ರಾಜಣ್ಣನವರನ್ನು ಯಾವುದೇ ಕಾರಣ ನೀಡದೇ ರಾಜಿನಾಮೆಗೂ

ಅವಕಾಶ ನೀಡದೇ ಸಂಪುಟದಿಂದ ವಜಾ ಮಾಡಿರುವುದು ಪರಿಶಿಷ್ಟ ಸಮೂದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಪಿಸಿದರು.

ಘಟಪ್ರಭಾದ ರಾಘವೇಂದ್ರ ಮಠದಲ್ಲಿ ಸಂಸದರ ಸ್ಥಳೀಯ ನಗರ ಅಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡ ಸಾಂಸ್ಕೃತಿ ಭವನ ಕಟ್ಟಡ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಾಗೇಂದ್ರ ಅವರನ್ನು ಪರಿಶಿಷ್ಟ ಸಮೂದಾಯದ ಹಣ ಲೂಟಿ ಮಾಡಿದ್ದಾರೆಂದು ಸಂಪುಟದಿಂದ ಕೈ ಬಿಡಲಾಗಿತ್ತು. ಆದರೆ, ಲೂಟಿ ಮಾಡಿದ ಹಣವನ್ನು ಕಾಂಗ್ರೆಸ್ ಪಕ್ಷ ಚುನಾವಣೆಗೆ ಉಪಯೋಗಿಸಿ ಹಿಂದೂಳಿದ ವರ್ಗದ ಸಚಿವರನ್ನು ಕೈ ಬಿಟ್ಟು ಎಸ್ಟಿ ಸಮೂದಾಯಕ್ಕೆ ಅನ್ಯಾಯ ಮಾಡಿದೆ ಎಂದು ದೂರಿದರು.ಈ ಹಿಂದೆ ರಾಜಣ್ಣ ಸತ್ಯವನ್ನೇ ಪ್ರತಿಪಾದನೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಒಬ್ಬರಿಗೆ ಒಂದೆ ಹುದ್ದೆ ಇರಬೇಕು. ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು, ನನ್ನನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನ್ನಾಗಿ ಮಾಡುವುದಾದರೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಇದೆಲ್ಲ ಕಾಂಗ್ರೆಸ್ ಪಕ್ಷದ ನಿರ್ಣಯವೇ ಆಗಿದೆ. ಮುಖ್ಯವಾಗಿ ತೆರೆಯ ಹಿಂದೆ ಯಾರು ನಿಂತು ಇದನ್ನೆಲ್ಲವನ್ನು ರಾಜಣ್ಣನವರಿಂದ ಹೇಳಿಸಿದ್ದಾರೋ ಅವರೇ ಇಂದು ರಾಜಣ್ಣನವರ ಬೆನ್ನಿಗೆ ನಿಲ್ಲದಿರುವುದು ಆ ಸಮುದಾಯದ ದುರ್ದೈವ ಎಂದರು.ದೇಶವನ್ನು ಒಂದುಗೂಡಿಸುವ ವ್ಯವಸ್ಥೆ ಇರುವುದು ದೇವಾಸ್ಥಗಳಲ್ಲಿ ಮಾತ್ರ ಏಕೆಂದರೇ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಜನರು ತೀರ್ಥಯಾತ್ರೆಗಾಗಿ ತೆರಳುತ್ತಾರೆ. ಇದರಿಂದ ದೇಶದ ಸಾಂಸ್ಕೃತಿಕ, ಧಾರ್ಮಿಕ ಶಕ್ತಿ ಹೆಚ್ಚಾಗುತ್ತದೆ. ನಾವೆಲ್ಲರು ಒಂದೇ ಎನ್ನುವ ಭಾವನೆ ಬೆಳೆಯುತ್ತದೆ. ಧಾರ್ಮಿಕ ಕೇಂದ್ರಗಳು ಹೆಚ್ಚಾಗಿ ಬೆಳೆಯಬೇಕು ಎಂದರು.ಈ ಸಂದರ್ಭದಲ್ಲಿ ಶ್ರೀಕಾಂತ ಕುಲಕರ್ಣಿ, ಶ್ರೀಕಾಂತ ಮಹಾಜನ, ಪರಶುರಾಮ ಕಲಕುಟಗಿ, ರಾಜು ಕತ್ತಿ, ಅರುಣ ದೇಶಪಾಂಡೆ, ಮಹಾದೇವ ದೇಶಪಾಂಡೆ, ಮುರಳಿದರ ಜತ್ತಕರ್, ಸಂತೋಷ ದೇಶಪಾಂಡೆ, ರಘವೀರ ಪಾಟೀಲ, ರಾಘವೇಂದ್ರ ದೇಶಪಾಂಡೆ, ಮಹಾಂತೇಶ ಉದಗಟ್ಟಿಮಠ, ಆನಂದ ಪೂಜಾರಿ, ಭೀಮಶಿ ಬಂಗಾರಿ, ವಿಠ್ಠಲ ಹುಕ್ಕೇರಿ, ಡಾ.ವಿಲಾಸ ನಾಯಿಕವಾಡಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಕ್ಷ್ಮೇಶ್ವರದಲ್ಲಿ ಪ್ರಾರಂಭವಾದ ಮೆಕ್ಕೆಜೋಳ ಖರೀದಿ, ಮುಗಿಯದ ಗೊಂದಲ!
ವಿಶ್ವಕರ್ಮ ಮಹಾ ಒಕ್ಕೂಟ ಜಿಲ್ಲಾ ಘಟಕ ಉದ್ಘಾಟನೆ