ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾನೂನು ಬಾಹಿರ ಕಾಮಗಾರಿಗಳಿಗೆ ಅನುಮೋದನೆ: ಸಿಆರ್ ಎಸ್

KannadaprabhaNewsNetwork |  
Published : Sep 27, 2026, 01:45 AM IST
26ಕೆಎಂಎನ್ ಡಿ13  | Kannada Prabha

ಸಾರಾಂಶ

ಐದು ಗ್ಯಾರಂಟಿಗಳೇ ನಮ್ಮ ಸರ್ಕಾರದ ಅಭಿವೃದ್ಧಿಯ ರೇಟ್ ಕಾರ್ಡ್. ಎಲ್ಲರಿಗೂ ಸಮಾನ ಯೋಜನೆಗಳನ್ನು ಹಂಚಿಕೆ ಮಾಡಿ ಸಾರ್ವಜನಿಕರನ್ನು ಗೌರವಿಸುವ ಏಕೈಕ ಸರ್ಕಾರ ನಮ್ಮದು. ವಿಪಕ್ಷಗಳೂ ರಾಜ್ಯದಲ್ಲಿ ಅಧಿಕಾರ ನಡೆಸಿವೆ. ಆದರೆ, ಅವರು ಯಾವುದಾದರೂ ಅರ್ಥಪೂರ್ಣ ಜನಪರ ಯೋಜನೆ ಸಾರ್ವಜನಿಕರಿಗೆ ಸಮರ್ಪಿಸಿ ಕಾರ್ಯಗತಗೊಳಿಸಿದ್ದರೆ ಹೇಳಲಿ, ನಾನು ಅವರನ್ನು ಸನ್ಮಾನಿಸುತ್ತೇನೆ ಎಂದು ಸವಾಲು ಹಾಕಿದರು.

ಮಂಡ್ಯ: ಕಳೆದ ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ಕಾನೂನು ಬಾಹಿರವಾಗಿ ಕಾಮಗಾರಿಗಳನ್ನು ನೀಡಲಾಗಿದೆ. ಇದರಿಂದ ನಾಲ್ಕು ವರ್ಷದ ಹಣವನ್ನು ಒಟ್ಟಿಗೆ ಬಿಡುಗಡೆ ಮಾಡಿದರೂ ಬಿಜೆಪಿ ಅವಧಿಯ ಅಕ್ರಮ ಕಾಮಗಾರಿಗಳ ಬಿಲ್ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ದೂರಿದರು.

ಬಸರಾಳು ಗ್ರಾಮದಲ್ಲಿ ನಡೆದ ಪ್ರಜಾಸೇವಾ ಆಂದೋಲನದಲ್ಲಿ ಮಾತನಾಡಿದ ಅವರು, ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯಲ್ಲಿ ₹1.20 ಲಕ್ಷ ಕೋಟಿ ಮೊತ್ತದ ಕಾಮಗಾರಿಗಳು ನಡೆಯುತ್ತಿವೆ. ಇನ್ನೂ ₹30 ಸಾವಿರ ಕೋಟಿ ಬಿಡುಗಡೆ ಮಾಡಬೇಕಿದೆ ಎಂದರು.

ಐದು ಗ್ಯಾರಂಟಿಗಳೇ ನಮ್ಮ ಸರ್ಕಾರದ ಅಭಿವೃದ್ಧಿಯ ರೇಟ್ ಕಾರ್ಡ್. ಎಲ್ಲರಿಗೂ ಸಮಾನ ಯೋಜನೆಗಳನ್ನು ಹಂಚಿಕೆ ಮಾಡಿ ಸಾರ್ವಜನಿಕರನ್ನು ಗೌರವಿಸುವ ಏಕೈಕ ಸರ್ಕಾರ ನಮ್ಮದು. ವಿಪಕ್ಷಗಳೂ ರಾಜ್ಯದಲ್ಲಿ ಅಧಿಕಾರ ನಡೆಸಿವೆ. ಆದರೆ, ಅವರು ಯಾವುದಾದರೂ ಅರ್ಥಪೂರ್ಣ ಜನಪರ ಯೋಜನೆ ಸಾರ್ವಜನಿಕರಿಗೆ ಸಮರ್ಪಿಸಿ ಕಾರ್ಯಗತಗೊಳಿಸಿದ್ದರೆ ಹೇಳಲಿ, ನಾನು ಅವರನ್ನು ಸನ್ಮಾನಿಸುತ್ತೇನೆ ಎಂದು ಸವಾಲು ಹಾಕಿದರು.

ಮಂಡ್ಯದ ಜೀವನಾಡಿ ಮೈಷುಗರ್ ಕಾರ್ಖಾನೆಗೆ ಇನ್ಯಾವತ್ತೂ ಬಾಗಿಲು ಹಾಕುವ ಪರಿಸ್ಥಿತಿ ಬರುವುದಿಲ್ಲ. ಸರ್ಕಾರದ ಬೆಂಬಲದೊಂದಿಗೆ ಮೈಷುಗರ್ ಯಶಸ್ವಿಯಾಗಿ ಮುನ್ನಡೆಯುವ ಶಕ್ತಿ ಹೊಂದಿದೆ. ಇದರ ಜತೆಗೆ ಜಿಲ್ಲಾ ಆಸ್ಪತ್ರೆಯನ್ನು ಒಂದು ಸಾವಿರ ಹಾಸಿಗೆಯುಳ್ಳ ಹಾಗೂ ಮೇಲ್ದರ್ಜೆಗೇರಿಸಬೇಕು ಎನ್ನುವ ನನ್ನ ಗುರಿಯನ್ನು ಆದಷ್ಟು ಬೇಗ ತಲುಪಲಾಗುವುದು ಎಂದು ಭರವಸೆ ನೀಡಿದರು. ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎನ್ನುವ ಉದ್ದೇಶದಿಂದಲೇ ಕಾಂಗ್ರೆಸ್ ಸರ್ಕಾರ ಈ ಹಿಂದೆ ನನ್ನನ್ನು ಕೃಷಿ ಸಚಿವನನ್ನಾಗಿ ಮಾಡಿತ್ತು ಎನಿಸುತ್ತಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉದ್ಯೋಗ ಸೃಷ್ಟಿಯಲ್ಲಿ ಎನ್‌ಡಿಎ ಸಂಪೂರ್ಣ ವಿಫಲ
ಇಎಸ್‌ಐ ಆಸ್ಪತ್ರೆಗೆ ಬಸವಂತಪ್ಪ ಭೇಟಿ: ಸ್ವಚ್ಛತೆ, ವೈದ್ಯಕೀಯ ಸೇವೆಗೆ ಮೆಚ್ಚುಗೆ