ಜಿಲ್ಲೆಯಲ್ಲಿ 8 ಹೊಸ ಮತಗಟ್ಟೆ ಸ್ಥಾಪನೆಗೆ ಅನುಮೋದನೆ

KannadaprabhaNewsNetwork | Published : Oct 20, 2024 1:58 AM

ಸಾರಾಂಶ

ಬಾಗಲಕೋಟೆ ಜಿಲ್ಲೆಯಲ್ಲಿ ಹೊಸದಾಗಿ 8 ಮತಗಟ್ಟೆ ಸ್ಥಾಪನೆಗೆ ಸಲ್ಲಿಸಲಾದ ಪ್ರಸ್ತಾವನೆಗೆ ಚುನಾವಣಾ ಆಯೋಗವು ಅನುಮೋದನೆ ನೀಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯಲ್ಲಿ ಹೊಸದಾಗಿ 8 ಮತಗಟ್ಟೆ ಸ್ಥಾಪನೆಗೆ ಸಲ್ಲಿಸಲಾದ ಪ್ರಸ್ತಾವನೆಗೆ ಚುನಾವಣಾ ಆಯೋಗವು ಅನುಮೋದನೆ ನೀಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಮತದಾನ ಕೇಂದ್ರಗಳ ತರ್ಕಬದ್ಧಗೊಳಿಸುವಿಕೆ ಕುರಿತು ವಿವಿಧ ರಾಜಕೀಯ ಮುಖಂಡರ ಜೊತೆ ನಡೆದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 15 ನೂರಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಮತಗಟ್ಟೆಗಳಲ್ಲಿ ಸಹಾಯಕ ಮತಗಟ್ಟೆ ಸ್ಥಾಪಿಸಲು 1 ಹಾಗೂ 2 ಕಿ.ಮೀ ಕ್ಕಿಂತ ಹೆಚ್ಚಿಗೆ ಕ್ರಮಿಸಬೇಕಾಗಿರುವ ಮತದಾರರಿಗೆ ಹೆಚ್ಚುವರಿಯಾಗಿ 7 ಮತಗಟ್ಟೆಗಳು ಸೇರಿ ಒಟ್ಟು 8 ಮತಗಟ್ಟೆ ಸ್ಥಾಪನೆಗೆ ಅನುಮೋದನೆ ದೊರೆತಿದೆ ಎಂದರು.ಹುನಗುಂದ ಮತಕ್ಷೇತ್ರದ ಮತಗಟ್ಟೆ ಸಂ.93 ನಗರ ಪ್ರದೇಶದಲ್ಲಿ 1538 ಮತದಾರರು ಇದ್ದು, ಮತಗಟ್ಟೆ ಸಂ.93ಕ್ಕೆ 542 ಹಾಗೂ ಮತಗಟ್ಟೆ ಸಂ.93ಎ ಗೆ 996 ಮತದಾರರನ್ನು ವಿಭಾಗಿಸಿ ಎರಡು ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಒಂದು ಮತಗಟ್ಟೆಗೆ ಕನಿಷ್ಠ 300 ಮತದಾರರು ಇರಬೇಕಾಗಿದ್ದು, ಈ ಹಿಂದೆ ಕೆಲವು ಮತಕ್ಷೇತ್ರದಲ್ಲಿ ಎರಡು ಗ್ರಾಮಗಳನ್ನು ಒಟ್ಟುಗೂಡಿಸಿ ಒಂದು ಮತಗಟ್ಟೆ ಸ್ಥಾಪಿಸಿದ್ದು, ಚುನಾವಣೆ ಸಮಯದಲ್ಲಿ ಮತದಾರರು 2 ಕಿ.ಮೀಕಿಂತ ಹೆಚ್ಚಿಗೆ ಕ್ರಮಿಸಿ ಮತದಾನ ಮಾಡಬೇಕಾಗಿರುವದರಿಮದ ಪ್ರತ್ಯೇಕ ಗ್ರಾಮಗಳಿಗೆ ಮತಗಟ್ಟೆ ಸ್ಥಾಪಿಸಲು ಕಳುಹಿಸಲಾದ ಪ್ರಸ್ತಾವನೆಗೆ ಅನುಮೋದನೆ ದೊರೆತಿದೆ ಎಂದರು.ಬೀಳಗಿ ಮತಕ್ಷೇತ್ರದಲ್ಲಿ ಯಳ್ಳಿಗುತ್ತಿ ಗ್ರಾಮದಲ್ಲಿ 148 ಮತ್ತು 149 ಮತಗಟ್ಟೆಗಳು ಇದ್ದು, ಸದರಿ ಗ್ರಾಮಗಳು ಭಾಗಶಃ ಮುಳುಗಡೆಯಾಗಿ ಯಳ್ಳಿಗುತ್ತಿ ಪುನರ್ವಸತಿ ಕೇಂದ್ರ-2ಕ್ಕೆ ಸ್ಥಳಾಂತರಿಸಿದ ಹಿನ್ನೆಲೆ ಸದರಿ ಯಳ್ಳಿಗುತ್ತಿ ಪುನರ್ವಸತಿ ಕೇಂದ್ರಕ್ಕೆ 10 ಕಿ.ಮೀ ಅಂತರವಿದ್ದು, ಪುನರ್ವಸತಿ ಕೇಂದ್ರ-2ರಲ್ಲಿ ವಾಸಿಸುವ 338 ಮತದಾರರಿಗೆ ಪುನರ್ವಸತಿ ಕೇಂದ್ರದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮತಗಟ್ಟೆ ಸ್ಥಾಪಿಸಲಾಗಿದೆ. ಬಾಗಲಕೋಟೆ ಕ್ಷೇತ್ರದಲ್ಲಿ ಹಿರೇಮಾಗಿ ಹಾಗೂ ಬೂದಿಹಾಳ ಗ್ರಾಮಗಳನ್ನು ಒಟ್ಟುಗೂಡಿಸಿ ಹಿರೇಮಾಗಿ ಗ್ರಾಮದಲ್ಲಿರುವ ಮ.ಸಂ.244ನ್ನು ವಿಂಗಡಿಸಿ ಹಿರೇಮಾಗಿ ಹಾಗೂ ಬೂದಿಹಾಳ ಗ್ರಾಮಗಳಲ್ಲಿ ಪ್ರತ್ಯೇಕ ಮತಗಟ್ಟೆ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.ಹುನಗುಂದ ಮತಕ್ಷೇತ್ರದಲ್ಲಿ ಎರಡು ಗ್ರಾಮಗಳನ್ನು ಒಳಗೊಂಡು 5 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ ಒಂದು ಗ್ರಾಮದವರು ಮತದಾನ ಮಾಡಲು 2 ಕಿ.ಮೀ ಕ್ರಮಿಸಿ ಮತದಾನ ಮಾಡಬೇಕಿತ್ತು. ಈ ತೊಂದರೆ ನಿವಾರಿಸಲು ಐದು ಕಡೆಗಳಲ್ಲಿ ಪ್ರತ್ಯೇಕ ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಅನಪಕಟ್ಟಿ, ಇಂದವಾರ, ಮೇದಿನಾಪೂರ, ಕಿರಸೂರ, ವೀರಾಪೂರ, ಚಿಕ್ಕಬಾದವಾಡಗಿ, ಹೊನ್ನರಹಳ್ಳಿ, ಹಿರೇಕೊಡಗಲಿ ಹಾಗೂ ಹಿರೇಕೊಡಗಲಿ ತಾಂಡಾದಲ್ಲಿ ಪ್ರತ್ಯೇಕ ಮತಗಟ್ಟೆ ಸ್ಥಾಪಿಸಲಾಗಿದೆ ಎಂದು ತಿಳಿಸಿದರು. ಬಾಗಲಕೋಟೆ ಮತಕ್ಷೇತ್ರದ ಹೊನ್ನಾಕಟ್ಟಿ ಗ್ರಾಮದಲ್ಲಿರುವ 77 ಮತ್ತು 78 ಮತಗಟ್ಟೆಗಳ ಕಟ್ಟಡವು ಶಿಥಿಲಾವಸ್ಥಿಯಲ್ಲಿರುವದರಿಂದ ಅದೇ ಶಾಲೆಯಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ಜಿಲ್ಲೆಯಲ್ಲಿ ಕೆಲವು ಶಾಲೆಗಳು ಉನ್ನತೀಕರಣಗೊಂಡು ನಾಮಫಲಕಗಳನ್ನು ಬದಲಾವಣೆಯಾದ ಹಿನ್ನೆಲೆ ಮತದಾರರಿಗೆ ಮತಗಟ್ಟೆ ಗುರುತಿಸಲು ಮಗಟ್ಟೆ ಕಟ್ಟಡ ಹೆಸರುಗಳನ್ನು ಬದಲಾವಣೆ ಮಾಡಲಾಗಿದೆ. ತೇರದಾಳ ಕ್ಷೇತ್ರದಲ್ಲಿ 23, ಬೀಳಗಿ ಕ್ಷೇತ್ರದಲ್ಲಿ 13, ಬಾದಾಮಿ ಕ್ಷೇತ್ರದಲ್ಲಿ 6, ಬಾಗಲಕೋಟೆ ಕ್ಷೇತ್ರದಲ್ಲಿ 4, ಹುನಗುಂದ ಕ್ಷೇತ್ರದಲ್ಲಿ 5 ಮತಗಟ್ಟೆಗಳ ಹೆಸರು ಬದಲಾವಣೆ ಮಾಡಲಾಗಿದೆ ಎಂದರು.ಸಭೆಯಲ್ಲಿ ತಹಸೀಲ್ದಾರ್‌ ಅಮರೇಶ ಪಮ್ಮಾರ, ಚುನಾವಣಾ ತಹಸೀಲ್ದಾರ್‌ ಯಲ್ಲಪ್ಪ ಸುಬೇದಾರ, ಚುನಾವಣಾ ಶಿರಸ್ತೇದಾರ ಮಹೇಶ ಪಾಂಡವ ಸೇರಿದಂತೆ ವಿವಿಧ ರಾಜಕೀಯ ಮುಖಂಡರಾದ ಶ್ರೀನಿವಾಸ ಬಳ್ಳಾರಿ, ಕೃಷ್ಣಾ ಪಾಟೀಲ, ಮಲ್ಲಿಕಾರ್ಜುನ ಕಾಂಬಳೆ, ಶಿವಾನಂದ ಸುರಪುರ ಉಪಸ್ಥಿತರಿದ್ದರು.

Share this article