ಸಿಲ್ಕ್‌ಸಿಟ್ಟಿ ಟೌನ್‌ಶಿಪ್ ಯೋಜನೆಗೆ ತಿಂಗಳೊಳಗೆ ಅನುಮೋದನೆ

KannadaprabhaNewsNetwork |  
Published : Aug 23, 2026, 01:15 AM IST
 | Kannada Prabha

ಸಾರಾಂಶ

ರಾಮನಗರ: ಅರ್ಚಕರಹಳ್ಳಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ಪಕ್ಕದಲ್ಲಿಯೇ 116 ಎಕರೆ ವಿಸ್ತೀರ್ಣದಲ್ಲಿ ಸಿಲ್ಕ್ ಸಿಟಿ (ರೇಷ್ಮೆ ನಗರ )ಟೌನ್ ಶಿಪ್ ಯೋಜನೆ ಅನುಷ್ಠಾನಗೊಳ್ಳಲಿದ್ದು, ಇದಕ್ಕೆ ಒಂದು ತಿಂಗಳೊಳಗೆ ರಾಜ್ಯಸರ್ಕಾರದಿಂದ ಅನುಮೋದನೆ ಸಿಗಲಿದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು.

ರಾಮನಗರ: ಅರ್ಚಕರಹಳ್ಳಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ಪಕ್ಕದಲ್ಲಿಯೇ 116 ಎಕರೆ ವಿಸ್ತೀರ್ಣದಲ್ಲಿ ಸಿಲ್ಕ್ ಸಿಟಿ (ರೇಷ್ಮೆ ನಗರ )ಟೌನ್ ಶಿಪ್ ಯೋಜನೆ ಅನುಷ್ಠಾನಗೊಳ್ಳಲಿದ್ದು, ಇದಕ್ಕೆ ಒಂದು ತಿಂಗಳೊಳಗೆ ರಾಜ್ಯಸರ್ಕಾರದಿಂದ ಅನುಮೋದನೆ ಸಿಗಲಿದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು.

ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಹೆಲ್ತ್ ಸಿಟಿ ವಸತಿ ಬಡಾವಣೆಯ ಮರು ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸಿಲ್ಕ್ ಲಿಟಿ ಟೌನ್ ಶಿಪ್ ಹೆಸರಿನಲ್ಲಿ ವಸತಿ ಬಡಾವಣೆ ನಿರ್ಮಾಣಗೊಳ್ಳಲಿದೆ. ಈಗಾಗಲೇ ಭೂ ಸ್ವಾಧೀನ ಕೈಗೊಳ್ಳಲು ಆದೇಶ ಹೊರ ಬಿದ್ದಿದ್ದು, ಎಲ್ಲ ಪ್ರಕ್ರಿಯೆಗಳಿಗೂ ಶೀಘ್ರದಲ್ಲಿಯೇ ಅನುಮೋದನೆ ಸಿಗಲಿದೆ ಎಂದರು.

ಕಳೆದ 16 ವರ್ಷಗಳ ಹಿಂದೆ ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅರ್ಚಕರಹಳ್ಳಿ, ಜೀಗೇನಹಳ್ಳಿ ಹಾಗೂ ಚನ್ನಪಟ್ಟಣದ ಸುಂಡಘಟ್ಟದ ವಸತಿ ಬಡಾವಣೆಗಳಲ್ಲಿ 1600ಕ್ಕೂ ಹೆಚ್ಚು ನಿವೇಶನಗಳನ್ನು ರಚಿಸಲಾಗಿತ್ತು. ನಿವೇಶನದಾರರು ಹಣ ಪಾವತಿಸಿದ್ದರೂ ದಾಖಲಾತಿಗಳು ಇಲ್ಲದ ಕಾರಣ ರಿಜಿಸ್ಟ್ರೇಷನ್ ಕೂಡ ಮಾಡಿಸಲು ಸಾಧ್ಯವಾಗಿರಲಿಲ್ಲ. ಅನೇಕ ಸರ್ಕಾರಗಳು ಮತ್ತು ನಾಯಕರು ಬಂದರು ಹೋದರು ನಿವೇಶನದಾರರ ಸಮಸ್ಯೆ ಬಗೆಹರಿಯಲಿಲ್ಲ. ಯಾರ ಬಳಿ ದಾಖಲಾತಿ ಕೇಳಬೇಕೆಂದು ಕೂಡ ನಿವೇಶನದಾರರಿಗೆ ಗೊತ್ತಿರಲಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರಾಸಕ್ತಿಯ ಉತ್ತರಗಳಿಂದಾಗಿ ನಿವೇಶನದಾರರು ಆತಂಕದಲ್ಲಿದ್ದರು. ನಿವೇಶನಗಳ ದಾಖಲೆಗಳು ಇಲ್ಲದ ಕಾರಣ ನಿವೇಶನದಾರರು ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿದ್ದರು. ಈ ಬಡಾವಣೆಗಳ ಅಭಿವೃದ್ಧಿಗೆ 40 ಕೋಟಿ ರುಪಾಯಿ ಯೋಜನೆ ತಯಾರಿಸಿದ್ದೇವೆ. ಇಲ್ಲಿ ರಸ್ತೆ, ಒಳಚರಂಡಿ, ವಿದ್ಯುತ್, ಕುಡಿಯುವ ನೀರು ಎಲ್ಲ ಸೌಕರ್ಯ ಕಲ್ಪಿಸುತ್ತೇವೆ ಎಂದು ಸುರೇಶ್ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್. ಸಿ. ಬಾಲಕೃಷ್ಣ ಮಾತನಾಡಿ, ಕಳೆದ 16 ವರ್ಷಗಳಿಂದ ಅತಂತ್ರ ಸ್ಥಿತಿಯಲ್ಲಿದ್ದ ವಸತಿ ಬಡಾವಣೆಗಳಿಗೆ ಜೀವ ಕಳೆ ಬಂದಿದೆ. ಇಂತಹ ಸಮಸ್ಯೆ ಬಗೆಹರಿಸಲು ರಾಜಕೀಯ ಇಚ್ಛಾಸಕ್ತಿ ಬೇಕು. ಯಾರೊ ಮಾಡಬೇಕಾದ ಕೆಲಸವನ್ನು ಇಕ್ಬಾಲ್ ಹುಸೇನ್ ಮಾಡಿದ್ದಾರೆ. ಇದು ಜನರ ಬಗೆಗಿನ ಕಾಳಜಿ ತೋರಿಸುತ್ತದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ಟೀಕಿಸಿದರು.

ಅಭಿವೃದ್ಧಿ ಶುಲ್ಕ ಪಡೆದು ಬಡಾಣೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಕಾನೂನಿನಲ್ಲಿ ಅವಕಾಶ ಇಲ್ಲ. ಆದರೆ, ಇಕ್ಬಾಲ್ ಹುಸೇನ್ ಶಾಸಕರಾದ ಮೇಲೆ ಹಿಂದಿನವರು ಮಾಡಿದ ತಪ್ಪು ಪುನರಾವರ್ತನೆ ಆಗಬಾರದೆಂದು ನಿವೇಶನದಾರರಿಗೆ ಆಗಿರುವ ತೊಂದರೆಗೆ ಇತಿಶ್ರೀ ಹಾಡಲು ಮುತುವರ್ಜಿ ವಹಿಸಿದರು. ಇದರ ಪರಿಣಾಮ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಮಾರ್ಗದರ್ಶನದಲ್ಲಿ ಸಮಸ್ಯೆ ಬಗೆಹರಿದಿದೆ ಎಂದರು.

ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಈ ಕ್ಷೇತ್ರದಿಂದ ಪ್ರಧಾನ ಮಂತ್ರಿ ಹಾಗೂ ಎರಡು ಬಾರಿ ಮುಖ್ಯಮಂತ್ರಿಯಾದರವರು ಎಂದೂ ಜನರು ಮತ್ತು ಕ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಆಲೋಚನೆ ಮಾಡಲೇ ಇಲ್ಲ. 5100 ರುಪಾಯಿ ಪಾವತಿ ಮಾಡಿದ ಬಡವರಿಗೆ ಇಲ್ಲಿವರೆಗೂ ಸೂರು ಕಲ್ಪಿಸಲಿಲ್ಲ. ಆದರೆ, ನಿಮ್ಮೆಲ್ಲರ ಆಶೀರ್ವಾದಿಂದ ಶಾಸಕನಾದ ಮೇಲೆ ಬಡವರಿಗೆ ಸರ್ಕಾರಿ ಜಮೀನನ್ನು ಗುರುತಿಸಿ ಸೂರು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿ, ಚನ್ನಪಟ್ಟಣ ಖಾಸಗಿ ಬಸ್ ನಿಲ್ದಾಣಕ್ಕೆ ಕಾಯಕಲ್ಪ ನೀಡಲು ಡಿ.ಕೆ.ಶಿವಕುಮಾರರ ಅಣತಿಯಂತೆ ಡಿ.ಕೆ.ಸುರೇಶ್ ಗುತ್ತಿಗೆದಾರರನ್ನು ಕರೆದು ಚರ್ಚಿಸಿ ಸಮಸ್ಯೆ ಬಗೆಹರಿಸಿದ್ದಾರೆ. ಆದಷ್ಟು ಬೇಗ ಟೆಂಡರ್ ಕರೆದು ಕಾಮಗಾರಿ ಆರಂಭಿಸುತ್ತೇವೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್. ರವಿ, ಚಿತ್ರನಟ ಸಾಧು ಕೋಕಿಲ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಕೆ.ರಾಜು, ಕೆಎಸ್‌ಎಂಬಿ ಅಧ್ಯಕ್ಷ ಎಸ್.ಗಂಗಾಧರ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ನಿರ್ದೇಶಕರಾದ ಪರ್ವೀಜ್ ಪಾಷ, ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಟರಾಜ್, ಜಿಪಂ ಮಾಜಿ ಅಧ್ಯಕ್ಷ ಕೆ.ರಮೇಶ್, ಗ್ಯಾರಂಟಿ ಪ್ರಾಧಿಕಾರ ತಾಲೂಕು ಅಧ್ಯಕ್ಷ ವಿ. ಎಚ್. ರಾಜು, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಪಂ ಸಿಇಒ ಅನ್ಮೋಲ್ ಜೖನ್, ಮತ್ತಿತರರು ಉಪಸ್ಥಿತರಿದ್ದರು.ಕೋಟ್...................

ದಶಕಗಳ ಕನಸಿಗೆ ಜೀವ ತುಂಬುವ ಸಮಯ 2009-10ರಲ್ಲಿ ಆರಂಭಗೊಂಡು 2013ರ ವೇಳೆಗೆ ಹಂಚಿಕೆಯಾದ ಈ 3 ಬಡಾವಣೆಗಳ ನಿವೇಶನದಾರರು ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಮೂಲ ಸೌಕರ್ಯಗಳಿಗಾಗಿ ಕಾದಿದ್ದಾರೆ. ಈ ಎಲ್ಲ ಪ್ರಕ್ರಿಯೆಗಳು ರಾಮನಗರವನ್ನು ಮಾದರಿ ನಗರವನ್ನಾಗಿ ರೂಪಿಸುವಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಸಾರ್ವಜನಿಕರಿಗೆ ಸುಸಜ್ಜಿತ ನಾಗರಿಕ ಸೌಲಭ್ಯ ಒದಗಿಸಲು ತಮ್ಮೆಲ್ಲರ ಸಹಕಾರ, ಮಾರ್ಗದರ್ಶನದಲ್ಲಿ ರಾಮನಗರ ನಗರಾಭಿವೃದ್ದಿ ಪ್ರಾಧಿಕಾರ ಸದಾ ಬದ್ಧ.

-ಎ.ಬಿ.ಚೇತನ್ ಕುಮಾರ್, ಅಧ್ಯಕ್ಷರು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ

ಕೋಟ್...............

ಇಗ್ಗಲೂರು ಡ್ಯಾಂನಿಂದ ಕಣ್ವ ಜಲಾಶಯಕ್ಕೆ ಶಾಶ್ವತವಾಗಿ ನೀರು ತುಂಬಿಸುವ ಯೋಜನೆಯನ್ನು

100 ಕೋಟಿ ವೆಚ್ಚದಲ್ಲಿ ಕೖಗೆತ್ತಿಕೊಳ್ಳುತ್ತಿದ್ದೇವೆ. ಆನಂತರ ಕಣ್ವದಿಂದ ಪೈಪ್‌ಲೈನ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಒಟ್ಟಾರೆ 300 - 400 ಕೋಟಿ ಯೋಜನೆ ಇದಾಗಿದೆ. ಡಿ.ಕೆ.ಶಿವಕುಮಾರ್ ಸಿಎಂ ಆದ ಮೇಲೆ ಜಿಲ್ಲೆ ಸರ್ವಾಂಗೀಣ ಅಭಿವೃದ್ಧಿ ಆಗುತ್ತಿದೆ. ಇದೊಂದು ಜಿಲ್ಲೆಗೆ ಸುವರ್ಣಾವಕಾಶ.

- ಸಿ.ಪಿ.ಯೋಗೇಶ್ವರ್, ಶಾಸಕರು, ಚನ್ನಪಟ್ಟಣ ಕ್ಷೇತ್ರ (ಫೋಟೋ ಕ್ಯಾಪ್ಷನ್‌)

ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಹೆಲ್ತ್ ಸಿಟಿ ವಸತಿ ಬಡಾವಣೆಯ ಮರು ಅಭಿವೃದ್ಧಿ ಕಾಮಗಾರಿಗೆ ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್‌ ಶಂಕುಸ್ಥಾಪನೆ ಕಾರ್ಯಕ್ರಮವನ್ನುಉದ್ಘಾಟಿಸಿದರು. (ಈ ಫೋಟೋ ಪ್ಯಾನಲ್‌ನಲ್ಲಿ ಬಳಸಿ ಕ್ಯಾಪ್ಷನ್‌)ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಹೆಲ್ತ್ ಸಿಟಿ ವಸತಿ ಬಡಾವಣೆಯ ಮರು ಅಭಿವೃದ್ಧಿ ಕಾಮಗಾರಿಗೆ ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್‌ ಶಂಕುಸ್ಥಾಪನೆ ನೆರವೇರಿಸಿದರು. ಸಚಿವ ಬಾಲಕೃಷ್ಣ, ಶಾಸಕರಾದ ಇಕ್ಬಾಲ್‌ ಹುಸೇನ್‌, ಯೋಗೇಶ್ವರ್‌, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಚಿತ್ರನಟ ಸಾಧು ಕೋಕಿಲ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬುಗುಡನಹಳ್ಳಿ ಕೆರೆಗೆ ಹೇಮಾವತಿ ನೀರು: ಡಿಸಿಎಂ ಪರಮೇಶ್ವರ್ ಭೇಟಿ
ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಎಲ್ಲರೂ ಪಾಲ್ಗೊಳ್ಳಿ: ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸಲಹೆ