ದೇವತೆಗಳ ಉತ್ಸವಗಳು ಬನ್ನಿ ಮಂಟಪಕ್ಕೆ ತೆರಳಿದವು. ನಾಸಿಕ್ ಡೋಲು, ಕೋಲಾಟ, ಚಿಟ್ಟಿಮೇಳ, ಆರ್ಕೇಸ್ಟ್ರ , ಗಾರುಡಿಗೊಂಬೆ,ನಗಾರಿ ಕುಣಿತ, ಡೊಳ್ಳು ಕುಣಿತ, ಪೂಜಾ ಕುಣಿತ, ಹಾಗೂ ಕೀಲು ಕುದುರೆ ಕುಣಿತ ಮಂಗಳ ವಾದ್ಯ, ಮುಂತಾದ ಕಲಾ ತಂಡಗಳ ಪ್ರದರ್ಶನ ವೀಕ್ಷಿಸಿ ಜನರು ಆನಂದಿಸಿದರು. ಮೆರವಣಿಗೆ ಅನಕೃ ವೃತ್ತಕ್ಕೆ ಬಂದಾಗ ಅಲ್ಲಿ ನೆರೆದಿದ್ದ ಪಟ್ಟಣದವರೂ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಬಂದಿದ್ದ ಜನಸ್ತೋಮ ಮೆರವಣಿಗೆಯನ್ನು ನೋಡಿ ಆನಂದಿಸಿದರು. ಅನಕೃ ವೃತ್ತದಲ್ಲಿ ಕೆಲಕಾಲ ಕಲಾತಂಡಗಳ ಪ್ರದರ್ಶನ ನಡೆದ ಬಳಿಕ ಪೇಟೆ ಮುಖ್ಯ ರಸ್ತೆಯಲ್ಲಿ ಸಾಗಿ ಸಂತೆ ಮರೂರು ರಸ್ತೆಯಲ್ಲಿರುವ ಬನ್ನಿ ಮಂಟಪ ಸೇರಿದವು.
ಕನ್ನಡಪ್ರಭ ವಾರ್ತೆ ಅರಕಲಗೂಡು
ಪಟ್ಟಣದಲ್ಲಿ ವಿಜಯದಶಮಿ ಮಹೋತ್ಸವ ಬುಧವಾರ ರಾತ್ರಿ ಅತ್ಯಂತ ವೈಭವಯುತವಾಗಿ ನೆರವೇರಿತು.
ವಿವಿಧ ದೇವಾಲಯಗಳ ದೇವತೆಗಳ ಉತ್ಸವ ಹಾಗೂ ಸ್ಥಬ್ದ ಚಿತ್ರಗಳು ಕೋಟೆ ದೊಡ್ಡಮ ವೃತ್ತದಲ್ಲಿ ಜಮಾಯಿಸಿದವು. ವಿವಿಧ ಮಠಾಧೀಶರು, ಶಾಸಕ ಎ.ಮಂಜು, ಜಿಪಂ ಸಿಇಒ ಶುಭಂ ಶುಕ್ಲ, ಎಸ್ಪಿ ಶುಭನ್ವಿತಾ, ತಹಸೀಲ್ದಾರ್ ಕೆ. ಸಿ. ಸೌಮ್ಯ,ಗ್ರಾಮ ದೇವತೆ ದೇವಾಲಯದಲ್ಲಿ ಪೂಜೆ ನೆರವೇರಿಸಿ ಉತ್ಸವಕ್ಕೆ ಚಾಲನೆ ನೀಡಿದರು.
ದೇವತೆಗಳ ಉತ್ಸವಗಳು ಬನ್ನಿ ಮಂಟಪಕ್ಕೆ ತೆರಳಿದವು. ನಾಸಿಕ್ ಡೋಲು, ಕೋಲಾಟ, ಚಿಟ್ಟಿಮೇಳ, ಆರ್ಕೇಸ್ಟ್ರ , ಗಾರುಡಿಗೊಂಬೆ,ನಗಾರಿ ಕುಣಿತ, ಡೊಳ್ಳು ಕುಣಿತ, ಪೂಜಾ ಕುಣಿತ, ಹಾಗೂ ಕೀಲು ಕುದುರೆ ಕುಣಿತ ಮಂಗಳ ವಾದ್ಯ, ಮುಂತಾದ ಕಲಾ ತಂಡಗಳ ಪ್ರದರ್ಶನ ವೀಕ್ಷಿಸಿ ಜನರು ಆನಂದಿಸಿದರು. ಮೆರವಣಿಗೆ ಅನಕೃ ವೃತ್ತಕ್ಕೆ ಬಂದಾಗ ಅಲ್ಲಿ ನೆರೆದಿದ್ದ ಪಟ್ಟಣದವರೂ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಬಂದಿದ್ದ ಜನಸ್ತೋಮ ಮೆರವಣಿಗೆಯನ್ನು ನೋಡಿ ಆನಂದಿಸಿದರು. ಅನಕೃ ವೃತ್ತದಲ್ಲಿ ಕೆಲಕಾಲ ಕಲಾತಂಡಗಳ ಪ್ರದರ್ಶನ ನಡೆದ ಬಳಿಕ ಪೇಟೆ ಮುಖ್ಯ ರಸ್ತೆಯಲ್ಲಿ ಸಾಗಿ ಸಂತೆ ಮರೂರು ರಸ್ತೆಯಲ್ಲಿರುವ ಬನ್ನಿ ಮಂಟಪ ಸೇರಿದವು.
ಬನ್ನಿ ಮಂಟಪದಲ್ಲಿ ಶಮೀ ಪೂಜೆ ಬಳಿಕ ತಹಸೀಲ್ದಾರ್ ಸೌಮ್ಯ ಅವರು ಕದಳಿ ಛೇದನ ಮಾಡಿದರು. ಇದಾದ ಮೇಲೆ ಬನ್ನಿ ಸಮರ್ಪಣೆ ಮುಂತಾದ ಧಾರ್ಮಿಕ ಕಾರ್ಯಗಳು ನೆರವೇರಿದವು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎ.ಮಂಜು ಅವರು, 2026ರ ದಸರಾ ಆಚರಣೆ ಬರದ ನಡುವೆಯೂ ಅತ್ಯಂತ ಅರ್ಥಪೂರ್ಣ ಹಾಗೂ ಅಭೂತಪೂರ್ವ ಬೆಂಬಲದೊಂದಿಗೆ ನೆರವೇರಿದೆ. ಇಂತಹ ವಿಜಯದಶಮಿ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಗೌರವಿಸಲಾಗುತ್ತಿದೆ. ಯುವಪೀಳಿಗೆಗೆ ಉತ್ತೇಜಿತವಾಗಿರುವ ಸಾಂಸ್ಕೃತಿ ಪರಂಪರೆಯ ದಸರಾ ಹಬ್ಬ ಪ್ರತಿಯೊಬ್ಬರ ಬಾಳಿನಲ್ಲಿ ಹೊಸ ಭರವಸೆ, ಬೆಳಕನ್ನು ತರಲಿ ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶ್ರೀಶಂಭುನಾಥ ಸ್ವಾಮೀಜಿ, ಶ್ರೀಮಲ್ಲಿಕಾರ್ಜುನಸ್ವಾಮೀಜಿ ,ಜಯದೇವ ಸ್ವಾಮೀಜಿ, ಶ್ರೀಗುರು ಶಿವ ಸುಜ್ಞಾನತೀರ್ಥ ಸ್ವಾಮೀಜಿ, ಶ್ರೀಸ್ವತಂತ್ರ ಬಸವಲಿಂಗಸ್ವಾಮೀಜಿ ಅವರು ಆಶೀರ್ವಚನ ನೀಡಿದರು.
ಪಪಂ ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್, ಇತರೆ ಇಲಾಖೆ ಅಕಾರಿಗಳೂ,ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಶೇಷವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಜಿಪಂ ಸಿಇಒ ಶುಭಂ ಶುಕ್ಲ ಮತ್ತು ಎಸ್ಪಿ ಶುಭನ್ವಿತಾ ದಂಪತಿಯನ್ನು ಗೌರವಿಸಲಾಯಿತು. ಅಲ್ಲದೆ ವಿವಿಧ ಕ್ಷೇತ್ರದ ಸಾಧಕರು, ಕಾರ್ಯಕ್ರಮ ನೀಡಿದ ಕಲಾವಿದರನ್ನು ಸನ್ಮಾನಿಸಲಾಯಿತು. ರಾತ್ರಿ 9ಕ್ಕೆ ಆರಂಭಗೊಂಡ ದಸರಾ ಉತ್ಸವ ಮಧ್ಯರಾತ್ರಿ ಒಂದು ಗಂಟೆಗೆ ಮುಕ್ತಾಯಗೊಂಡಿತು. ಸುಮಾರು 2 ಕಿ .ಮೀ. ದೂರದ ತನಕ ಉತ್ಸವ ಸಾಗಿತು. ಸಾವಿರಾರು ಸಂಖ್ಯೆಯಲ್ಲಿ ಜನರು ವೀಕ್ಷಣೆ ಮಾಡಿದರು.ದೂರದಿಂದ ಬಂದವರಿಗೆ ರಸ್ತೆ ಪಕ್ಕದ ಅಲ್ಲಲ್ಲಿ ಉಪಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ವ್ಯವಸ್ಥೆ ಮಾಡಿದ್ದರು.
ಫೋಟೋ ಶೀರ್ಷಿಕೆ
1. ಅರಕಲಗೂಡಿನಲ್ಲಿ ಬುಧವಾರ ರಾತ್ರಿ ವಿಜಯದಶಮಿ ಮಹೋತ್ಸವದ ಮೆರವಣಿಗೆ ಅತ್ಯಂತ ವೈಭವಯುತವಾಗಿ ನಡೆಯಿತು.
2. ದಸರಾ ಉತ್ಸವ ವೀಕ್ಷಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆಯಲ್ಲಿ ಸೇರಿರುವ ಜನಸ್ತೋಮ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.