ಕನ್ನಡಪ್ರಭ ವಾರ್ತೆ ಅರಕಲಗೂಡು
ಹಿಂದಿನ ಸಭೆಯ ನಡವಳಿಗಳನ್ನು ಓದುವಾಗ ಕೆಲವು ವಿಷಯಗಳನ್ನು ಸರ್ವಾನು ಮತದಿಂದ ತೀರ್ಮಾನಿಸಲಾಗಿದೆ ಎಂದು ಹೇಳಿದಾಗ ಕೆಲ ಸದಸ್ಯರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಈ ವಿಷಯಗಳೇ ಹಿಂದಿನ ಸಭೆಯಲ್ಲಿ ಮಂಡನೆಯಗಿಲ್ಲ. ನೀವು ನೀಡಿದ ಅಜೆಂಡಾದಲ್ಲಿ ಈ ವಿಷಯಗಳು ಇರಲಿಲ್ಲ. ನಿಮಗೆ ಅನುಕೂಲವಾಗುವಂತೆ ಬರೆದುಕೊಂಡಿದ್ದೀರಿ ಎಂದಾಗ, ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ನಾವು ಅ ರೀತಿ ಮಾಡಿಲ್ಲ. ಅಧ್ಯಕ್ಷರ ಒಪ್ಪಿಗೆ ಮೇರೆಗೆ ಸಭೆಯಲ್ಲಿ ಚರ್ಚೆಗೆ ಬಂದಿತ್ತು ಎಂದು ಸಮರ್ಥಿಸಿಕೊಂಡರು. ಇದಕ್ಕೆ ಒಪ್ಪದ ಕೆಲ ಸದಸ್ಯರು ಘೋಷಣೆ ಕೂಗುತ್ತ ಸಭಾತ್ಯಾಗ ಮಾಡಿ ಹೊರನಡೆದ
ಬಳಿಕವು ಸಭೆ ಮುಂದುವರೆಯಿತು.ಸದಸ್ಯ ನಿಖಿಲ್ ಮಾತನಾಡಿ, ಸಭೆಯಲ್ಲಿ ಕೆಲವು ವಿಷಯಗಳು ಪ್ರಸ್ತಾಪಿಸಿದಾಗ ಹೋದ ಸಭೆಯಲ್ಲಿ ಬಂದ ವಿಚಾರಗಳನ್ನು ಇಟ್ಟಿದ್ದಾರೆ. ಇವತ್ತಿನ ಸಭೆಯಲ್ಲಿ 4 ವಿಷಯ ನೀಡಿದ್ದು, ಅದರಲ್ಲೂ ಮುಖ್ಯಾಧಿಕಾರಿ ಸಹಿ ಇರಲಿಲ್ಲ. ಸಭೆಯಲ್ಲಿ ಚರ್ಚೆಯಾದ ವೇಳೆ ಕೆಲವು ವಿಷಯಕ್ಕೆ ಮಾತ್ರ ಒಪ್ಪಿಗೆ ನೀಡಿರುತ್ತೇವೆ. ಆದರೆ, ಮುಂದಿನ ಸಭೆ ವೇಳೆಗೆ ಅವರಿಗೆ ಅನುಕೂಲವಾಗುವಂತ ಇನ್ನಷ್ಟು ವಿಷಯ ಸೇರಿಸಿ ಮುಖ್ಯಾಧಿಕಾರಿಗಳ ಸಹಿ ಪಡೆದು ಕೆಲವು ಸದಸ್ಯರಿಗೆ ನೀಡಿ, ಸಭೆಯಲ್ಲಿ ಚರ್ಚೆಗೆ ತಂದು ಸರ್ವನುಮತದ ತೀರ್ಮಾನ ಎಂದು ಬರೆದುಕೊಳ್ಳುತ್ತಾರೆ. ಹಾಗಾಗಿ ನಾಲ್ವರು ಸದಸ್ಯರು ಇಂದು ನಡೆಯುತ್ತಿದ್ದ ಸಾಮಾನ್ಯ ಸಭೆಯಿಂದ ಹೊರಬಂದಿದ್ದೇವೆ. ಕೋರಂ ಇದೆ ಎಂದು ಸಭೆಯನ್ನು ಮುಂದುವರೆಸಿದ್ದಾರೆ. ಈ ಸಭೆಗೆ ನಮ್ಮ ಒಪ್ಪಿಗೆ ಇಲ್ಲ. ಈ ಸಭೆಯಲ್ಲಿ ಏನೇ ತೀರ್ಮಾನ ಕೈಗೊಂಡರು ಲೋಕಾಯುಕ್ತ ತನಿಖೆ ನೀಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.